ಫಡ್ನವಿಸ್ ಸರಕಾರದಿಂದ ಪ್ರತಿಪಕ್ಷದ ನಾಯಕರ ಫೋನ್ ಕದ್ದಾಲಿಕೆ; ತನಿಖೆಗೆ ಆದೇಶ

0
443

ಸನ್ಮಾರ್ಗ ವಾರ್ತೆ

ಮುಂಬೈ, ಜ. 25: ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಸಮಯದಲ್ಲಿ ಸರಕಾರ ರೂಪೀಕರಣದ ಚರ್ಚೆಗಳು ನಡೆಯುವ ವೇಳೆ ಉದ್ಧವ್ ಠಾಕರೆ, ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್, ಶಿವಸೇನೆ ನಾಯಕ ಸಂಜಯ್ ರಾವುತ್‍ರ ಫೋನ್‍ಗಳನ್ನು ದೇವೇಂದ್ರ ಫಡ್ನವಿಸ್ ಸರಕಾರ ಕದ್ದಾಲಿಕೆ ನಡೆಸಿದೆ ಎಂಬ ಆರೋಪದಲ್ಲಿ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರಕಾರ ತನಿಖೆಗೆ ಆದೇಶಿಸಿದೆ.

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರೋಪವನ್ನು ಮೊದಲು ಎತ್ತಿದ್ದರು. ಫೋನ್ ಸೋರಿಕೆಯ ಸಾಪ್ಟ್ ವೇರ್ ಅಧಿಕಾರಿಗಳು ಇಸ್ರೇಲ್‍ನಿಂದ ಪಡೆದಿದ್ದಾರೆ ಎಂದು ದಿಗ್ವಿಜಯ್ ಸಿಂಗ ಹೇಳಿದ್ದರು. ಚುನಾವಣೆಯ ಸಮಯದಲ್ಲಿ ತನ್ನ ಫೋನ್ ಸೋರಿಕೆಯಾಗಿತ್ತು ಎಂದು ಹಿರಿಯ ಬಿಜೆಪಿ ನಾಯಕ ಮುನ್ನೆಚ್ಚರಿಕೆ ನೀಡಿದ್ದರು ಎಂದು ರಾವುತ್ ಹೇಳಿದ್ದರು. ಆದರೆ, ತನಗೆ ಅಡಗಿಸಿಡುವುದು ಏನು ಇಲ್ಲ, ತನ್ನ ಮಾತುಗಳನ್ನು ಯಾರೂ ಕೇಳಬಹುದು ಎಂದು ಹೇಳಿದರು. ಆರೋಪದಲ್ಲಿ ಹುರುಳಿಲ್ಲ. ಫೋನ್ ಕದ್ದಾಲಿಕೆ ಮಹಾರಾಷ್ಟ್ರದ ಸಂಸ್ಕøತಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಫಡ್ನವಿಸ್ ಹೇಳಿದ್ದರು.