ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 25: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಶಾಹಿನ್ ಬಾಗಿನಲ್ಲಿ ಪ್ರತಿಭಟನೆ ಮುಂದುವರಿದಿದ್ದು ಕೇಂದ್ರ ಸಚಿವ ಜಾವಡೇಕರ್, ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿಯ ವಿರುದ್ಧ ಟೀಕಾ ಪ್ರಹಾರ ಮಾಡಿದರು. ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಮತ್ತು ಸಹಿತ ಅಲ್ಪಸಂಖ್ಯಾತರ ಮನಸ್ಸಿನಲ್ಲಿ ವಿಷ ತುಂಬುತ್ತಿದ್ದಾರೆ ಮತ್ತು ತಪ್ಪುದಾರಿಗೆಳೆದಿದ್ದಾರೆ ಎಂದು ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ.
ದಿಲ್ಲಿಯಲ್ಲಿ ಜಿನ್ನವಾಲಿ ಆಝಾದಿ ಘೋಷಣೆ ಕೇಳಿದ್ದನ್ನು ನೀವು ಕೇಳಿದ್ದೀರಿ. ಭಾರತ್ ಮಾತಾ ಕಿ ಜೈ ಬೇಕೋ ಜಿನ್ನಾವಾಲಿ ಆಝಾದಿ ಬೇಕೊ ಎಂದು ದಿಲ್ಲಿಯ ಜನರು ತೀರ್ಮಾನಿಸಬೇಕೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪೌರತ್ವ ತಿದ್ದುಪಡಿ ವಿರುದ್ಧ ಪ್ರತಿಭಟನೆಯಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ರಾಜ್ಯದ ರಾಜಧಾನಿಯಲ್ಲಿ ಅಕ್ರಮಕ್ಕೆ ಪ್ರೇರೇಪಿಸುತ್ತಿದೆ. ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯ ಪ್ರತಿಭಟನೆಯನ್ನು ಬೆಂಬಲಿಸಿ ರಂಗಕ್ಕಿಳಿದಿದ್ದಾರೆ. ಇದು ಅಕ್ರಮಕ್ಕೆ ಪ್ರೋತ್ಸಾಹಿಸುತ್ತದೆ ಎಂದು ಎರಡು ಪಾರ್ಟಿಗಳನ್ನು ದಿಲ್ಲಿಯ ಜನರು ಪ್ರಶ್ನಿಸಬೇಕೆಂದು ಅವರು ಆಗ್ರಹಿಸಿದರು.
ಜಾಮಿಯ ಮಿಲ್ಲಿಯ ವಿಶ್ವವಿದ್ಯಾನಿಲಯದಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಹಿಂಸಾಗ್ರಸ್ತವಾಗಿದ್ದರಿಂದ ಡಿಸೆಂಬರ್ ನಲ್ಲಿ ಶಾಹಿನ್ ಭಾಗ್ನಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಪ್ರತಿಭಟನಾಕಾರರು ನೊಯಿಡವನ್ನು ಸಂಧಿಸುವ ರಸ್ತೆಯಲ್ಲಿ ಸಂಚಾರ ತಡೆಯನ್ನು ಒಡ್ಡಿದ್ದಾರೆ.












