ಬೀದರ್| ಡಿಸೆಂಬರ್ 13ರಿಂದ 15ರ ವರೆಗೆ ಸಾರ್ವಜನಿಕ ಕುರ್‌ಆನ್ ಪ್ರವಚನ

0
668

ಸನ್ಮಾರ್ಗ ವಾರ್ತೆ

ಡಿಸೆಂಬರ್ 13 ರಿಂದ 15 ರ ವರೆಗೆ ಬೀದರ್ ನ ಬಸವ ಕಲ್ಯಾಣದಲ್ಲಿ ಬೃಹತ್ ಸಾರ್ವಜನಿಕ ಕುರ್‌ಆನ್ ಪ್ರವಚನ ನಡೆಯಲಿದೆ. ಇದು ಈ ರೀತಿಯ ಎಂಟನೇ ಸಾರ್ವಜನಿಕ ಕುರ್‌ಆನ್ ಪ್ರವಚನವಾಗಿದ್ದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಯವರು ಪ್ರವಚನ ನೀಡಲಿದ್ದಾರೆ.

ಮೂರು ವಿಷಯಗಳ ಮೇಲೆ ಈ ಕುರ್‌ಆನ್ ಪ್ರವಚನ ನಡೆಯಲಿದ್ದು ಮೊದಲ ದಿನ ದೇಶದ ಪ್ರಗತಿ ಮತ್ತು ನೈತಿಕ ಮೌಲ್ಯಗಳು ಎಂಬ ವಿಷಯದ ಮೇಲೆ ಪ್ರವಚನ ನಡೆಯಲಿದೆ. ದ್ವಿತೀಯ ದಿನ ಸಂತೃಪ್ತ ಕುಟುಂಬ ಮತ್ತು ಮೂರನೇ ದಿನ ಯಶಸ್ವಿ ಜೀವನ ಎಂಬ ವಿಷಯದ ಮೇಲೆ ಪ್ರವಚನ ನಡೆಯಲಿದೆ.

ಬಸವಕಲ್ಯಾಣದ ಥೇರ್ ಮೈದಾನದ ಸಭಾಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಸ್ವಾಮೀಜಿಗಳು ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.