ಇಸ್ರೇಲ್‌ಗೆ ಭೇಟಿ ನೀಡಲು ಪ್ರಧಾನಿ ಆಹ್ವಾನವನ್ನು ಸ್ವೀಕರಿಸಿದ ಜೊ ಬೈಡನ್- ವರದಿ

0
284

ಸನ್ಮಾರ್ಗ ವಾರ್ತೆ

“ಮುಂದಿನ ಕೆಲವು ತಿಂಗಳುಗಳಲ್ಲಿ” ಇಸ್ರೇಲ್‌ಗೆ ಭೇಟಿ ನೀಡುವಂತೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರ ಆಹ್ವಾನವನ್ನು ಅಮೇರಿಕ ಅಧ್ಯಕ್ಷ ಜೋ ಬಿಡೆನ್ ಸ್ವೀಕರಿಸಿದ್ದಾರೆ ಎಂಬುದಾಗಿ ಇಸ್ರೇಲ್ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

ಇರಾನಿನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (ಐಆರ್‌ಜಿಸಿ) ಅನ್ನು ಯುಎಸ್ ಭಯೋತ್ಪಾದಕರ ಪಟ್ಟಿಯಿಂದ ತೆಗೆದುಹಾಕಬೇಕೆಂಬ ಬೇಡಿಕೆಯ ಬಗ್ಗೆ ಉಭಯ ನಾಯಕರು ದೂರವಾಣಿಯಲ್ಲಿ ಚರ್ಚಿಸಿರುವುದಾಗಿ ಕಾರ್ಯಾಲಯ ವರದಿ ಮಾಡಿದೆ.

“ಅಧ್ಯಕ್ಷ ಬೈಡನ್‌ರವರು ಇಸ್ರೇಲ್‌ನ ನಿಜವಾದ ಸ್ನೇಹಿತಾರಾಗಿದ್ದರೆಂಬ ನಂಬಿಕೆ ನಮಗಿದೆ‌. ಇಸ್ರೇಲಿನ ಭದ್ರತೆಯ ಬಗ್ಗೆ ಕಾಳಜಿ ವಹಿಸುವ ಅವರು ಐಆರ್‌ಜಿಸಿಯನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಾಗುವುದಿಲ್ಲ ಎಂದು ನನಗೆ ಖಾತ್ರಿಯಿದೆ” ಎಂದು ಬೆನೆಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.