ಕೃಷಿ ಮಸೂದೆ| 25 ವರ್ಷಗಳ ಎನ್‌ಡಿಎ-ಅಕಾಲಿದಳ ಸಖ್ಯ ಅಂತ್ಯ: ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಂಡ ಶಿರೋಮಣಿ ಅಕಾಲಿದಳ

0
498

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.28: 25 ವರ್ಷಗಳ ಸ್ನೇಹಕ್ಕೆ ತಣ್ಣೀರೆರಚಿ ಶಿರೋಮಣಿ ಅಕಾಲಿದಳ ಬಿಜೆಪಿಯೊಂದಿಗೆ ಸಂಬಂದವನ್ನು ಕಡಿದುಕೊಂಡಿದೆ. ಇದಕ್ಕೆ ರೈತ ಮಸೂದೆಯಿಂದ ನಿರ್ಮಾಣಗೊಂಡ ಅನಿವಾರ್ಯ ಸ್ಥಿತಿ ಕಾರಣವೂ ಆಗಿದೆ.
ಹೀಗೆ ಬಿಜೆಪಿ ಸಖ್ಯದಲ್ಲಿ ಬೆನ್ನೆಲುಬಾಗಿದ್ದ ಪಾರ್ಟಿಗಳು ಬಿಜೆಪಿಯಿಂದ ಸಂಬಂಧ ಕಡಿದುಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿಯನ್ನು ಅಧಿಕಾರಕ್ಕೆ ತಂದ ಎನ್‍ಡಿಎ ಸಖ್ಯದಲ್ಲಿ ಬೆನ್ನೆಲುಬುಗಳಾಗಿದ್ದ ಪಾರ್ಟಿ ಶಿರೋಮಣಿ ಅಕಾಳಿ ದಳವಾಗಿತ್ತು. ಅದರಂತೆ ಟಿಡಿಪಿ, ಶಿವಸೇನೆ ಈ ಹಿಂದೆಯೇ ಎನ್‍ಡಿಎ ಸಖ್ಯವನ್ನು ತೊರೆದು ಹೋಗಿದೆ. ಬಿಜೆಪಿಯಲ್ಲಿ ಇವರು ಇನ್ನು ಅಗತ್ಯವಿಲ್ಲ ಎಂಬ ಮನೋಭಾವ ಮಿತ್ರಪಕ್ಷಗಳು ಎನ್‍ಡಿಎಯಿಂದ ಹೊರ ಬರಲು ಕಾರಣ ಎನ್ನಲಾಗುತ್ತಿದೆ.

ವಿವಾದಿತ ರೈತ ಮಸೂದೆಗಳು ಬಿಜೆಪಿಗೆ ಅಕಾದಳಕ್ಕಿಂತ ಮುಖ್ಯವಾಗಿ ಪರಿಣಮಿಸಿದೆ. ಅಕಾಲಿದಳದ ವಿರೋಧವನ್ನೂ ಕಡೆಗಣಿಸಿ ಕೃಷಿ ಮಸೂದೆಗಳಿಗೆ ಕಾನೂನು ರೂಪ ನೀಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದು ಕಾರ್ಪೊರೇಟ್ ಹಿತಾಸಕ್ತಿ ಮತ್ತು ಭವಿಷ್ಯದ ರಾಜಕೀಯದ ಲೆಕ್ಕಾಚಾರವಾಗಿದೆ.

ದೊಡ್ಡ ವಿವಾದಗಳ ವೇಳೆಯೂ ಶಿರೋಮಣಿ ಅಕಾಳಿದಳ ಬಿಜೆಪಿಯನ್ನು ಬೆಂಬಲಿಸಿತ್ತು. ಆದರೆ, ಆ ಪಾರ್ಟಿಯ ಅಡಿಗಲ್ಲು ಅಲುಗಾಡುವ ಸ್ಥಿತಿ ಪಂಜಾಬ್‍ನಲ್ಲಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ 117 ವಿಧಾನಸಭಾ ಸೀಟಿನಲ್ಲಿ 15 ಶಾಸಕರು ಮಾತ್ರ ಅಕಾಳಿದಳದಿಂದ ಗೆದ್ದಿದ್ದರು. ಕಾಂಗ್ರೆಸ್, ಆಮ್‍ ಆದ್ಮಿ ರೈತರ ಪರ ಇರುವಾಗ, ವಿವಾದ ಮಸೂದೆಯನ್ನು ಸಮರ್ಥಿಸಿ ಬಿಜೆಪಿ ಸಂಬಂಧದಲ್ಲಿ ಮುಂದುವರಿಯಲು ಅಕಾಳಿದಳಕ್ಕೆ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಇವಿಷ್ಟೇ ಎನ್‍ಡಿಎಯಿಂದ ಸಂಬಂಧ ಕಡಿದುಕೊಳ್ಳಲು ಕಾರಣವಾಗಿಲ್ಲ.

ವಾಜಪೇಯಿ ಮತ್ತು ಪ್ರಕಾಶ್ ಸಿಂಗ್ ಬಾದಲ್ ಸೇರಿ ರೂಪಿಸಿದ ಎನ್‍ಡಿಎ ಈಗಿಲ್ಲ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹರ್‍ಸಿಮ್ರಿತ್ ಕೌರ್ ಬಾದಲ್ ಹೇಳಿದ್ದಾರೆ. ಇದು ಸಖ್ಯ ಪಾರ್ಟಿಗಳೊಂದಿಗೆ ಬಿಜೆಪಿ ತೋರಿಸುತ್ತಿರುವ ವರ್ತನೆಯನ್ನು ಬಹಿರಂಗಪಡಿಸುತ್ತಿದೆ. ಕೇಂದ್ರದಲ್ಲಿ ಸಚಿವರಾದರೂ ಆಡಳಿತದಲ್ಲಿ ಅವಕಾಶ ನೀಡದ ಸ್ಥಿತಿಯನ್ನು ಎನ್‍ಡಿಎ ಸಖ್ಯ ಪಕ್ಷಗಳು ಎದುರಿಸುತ್ತಿವೆ. ಎನ್‍ಡಿಎಯ ಸಭೆಯನ್ನೊ, ಮಿತ್ರ ಪಕ್ಷಗಳೊಂದಿಗೆ ಸಮಾಲೋಚನೆಯನ್ನೊ ಮಾಡದೇ ಬಿಜೆಪಿ ತನ್ನದೇ ದಾರಿಯಲ್ಲಿ ನಡೆಯುತ್ತಿದೆ. ಸಖ್ಯ ಪಕ್ಷಗಳ ಪ್ರಭಾವ ರಾಜ್ಯಗಳಲ್ಲಿ ಅವರ ನೆರವಿನಲ್ಲಿ ಬೆಳೆದ ಬಿಜೆಪಿಯ ರೀತಿ ಮಿತ್ರ ಪಕ್ಷಗಳಲ್ಲೇ ಆತಂಕ ಮೂಡಿಸುತ್ತಿವೆ.

ಪಂಜಾಬ್‍ನಲ್ಲಿ ಶೀಘ್ರ ಬೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಇದನ್ನೇ ಅನುಭವಿಸಿತು. ಎಲ್ಲಿಗೂ ಹೋಗಲು ಆಗದ ಸ್ಥಿತಿಯಲ್ಲಿ ನಿರ್ಮಾಣವಾದ ಬಳಿಕ ತೆಲುಗು ದೇಶಂ ಪಾರ್ಟಿಯೂ ಎನ್‍ಡಿಎಯಿಂದ ಹೊರಬಂತು.

ಓದುಗರೇ,