ಬೆಟ್ಟಿಯಾ,ಜೂ.7: ಮೆಡಿಕಲ್ ಶಾಪ್‍ಗೆ ಔಷಧ ಖರೀದಿಸಲು ಬಂದಾಗ ಗೌರವ ಸೂಚಕವಾಗಿ ಎದ್ದು ನಿಲ್ಲದ ಫಾರ್ಮಿಸ್ಟ್‌ಗೆ ಬಿಜೆಪಿ ನಾಯಕನ ಸಂಬಂಧಿಕನೊಬ್ಬ ಮಾರಕವಾಗಿ ಹೊಡೆದಿದ್ದಾನೆ. ಜೂನ್ 3ರಂದು ಬಿಹಾರದ ಬೇಟಿಯಾ ನಗರದ ಮೆಡಿಕಲ್ ಶಾಪ್‍ನಲ್ಲಿ ಘಟನೆ ನಡೆದಿದ್ದು ಬಿಹಾರದ ಮಾಜಿ ಬಿಜೆಪಿ ಸಚಿವ ರಾಷ್ಟ್ರೀಯ ಉಪಾಧ್ಯಕ್ಷ ರೇಣು ದೇವಿಯ ಸಹೋದರ ಪಿನು ಎಂಬಾತ ಕ್ರೂರವಾಗಿ ಹೊಡೆದನು. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಘಟನೆ ಬಹಿರಂಗವಾಯಿತು.
ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯ ದೃಶ್ಯಗಳು ಪ್ರಚಾರವಾಗಿದ್ದು ಮದ್ದು ಖರೀದಿಗೆ ಬಂದ ಪಿನುವನ್ನು ನೋಡಿ ಎದ್ದು ನಿಲ್ಲದ್ದು ಆತನ ಕೋಪಕ್ಕೆ ಕಾರಣವಾಗಿತ್ತು. ಒಬ್ಬ ಸಿಬ್ಬಂದಿಯನ್ನು ಎದ್ದು ನಿಲ್ಲಲು ಹೇಳಿದ ಪಿನು ಆತನ ಕಪಾಲಕ್ಕೆ ಹೊಡೆದು ತನ್ನ ಕಾರಿಗೆ ಎಳೆದು ಕೊಂಡು ಹೋಗಿದ್ದಾನೆ.
ಇದೇ ವೇಳೆ ರೇಣು ದೇವಿ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ್ದು ತನ್ನ ಸಹೋದರ ಪಿನುವಿನೊಂದಿಗೆ ಹಲವು ವರ್ಷಗಳಿಂದ ಸಂಬಂಧವಿಲ್ಲ. ತನ್ನನ್ನು ಈ ಘಟನೆಗೆ ಜೋಡಿಸಲು ಯಾರು ಯತ್ನಿಸಬಾರದೆಂದು ಹೇಳಿದ್ದಾರೆ. ಇಂತಹ ತಪ್ಪು ಮಾಡುವವರನ್ನು ಶಿಕ್ಷಿಸಬೇಕೆಂದು ರೇಣುದೇವಿ ಹೇಳಿದರು. ಘಟನೆಯಲ್ಲಿ ಕೇಸು ದಾಖಲಿಸಿದ್ದೇವೆ. ಫಾರ್ಮಿಸ್ಟ್‌ರ ಕುಟುಂಬಕ್ಕೆ ರಕ್ಷಣೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದರು.</p>












