ಕೇರಳದಲ್ಲಿ ಹಕ್ಕಿಜ್ವರ; ಎರಡು ಕೋಳಿ ಫಾರ್ಮ್ ಗಳಲ್ಲಿ ಜ್ವರ ಪತ್ತೆ; ಕಟ್ಟೆಚ್ಚರಕ್ಕೆ ಸೂಚನೆ

0
1993

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್, ಮಾ. 7: ಇಲ್ಲಿಗೆ ಸಮೀಪದ ಕೊಡಿಯತ್ತೂರ್ ಮತ್ತು ವೇಂಗರದಲ್ಲಿ ಎರಡು ಕೋಳಿ ಫಾರ್ಮ್‍ಗಳಲ್ಲಿ ಹಕ್ಕಿ ಜ್ವರ ದೃಢೀಕರಣಗೊಂಡಿದೆ. ಒಂದು ಕೋಳಿ ಫಾರ್ಮ್ ಮತ್ತು ಇನ್ನೊಂದು ನರ್ಸರಿಯಾಗಿದೆ. ಭೋಪಾಲದ ಲ್ಯಾಬ್‍ನಲ್ಲಿ ಮಾಡಿದ ಪರೀಕ್ಷೆಯಿಂದ ಇದು ದೃಢಪಟ್ಟಿದೆ. ನಂತರ ಪ್ರಾಣಿ ಸಂರಕ್ಷಣಾ ಸಚಿವ ಕೆ.ರಾಜು ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು ಸದ್ಯಕ್ಕೆ ಆತಂಕಪಡಬೇಕಿಲ್ಲ, ರೋಗ ನಿಯಂತ್ರಣದಲ್ಲಿದೆ ಎಂದು ಪ್ರಾಣಿ ಸಂರಕ್ಷಣಾ ಇಲಾಖೆಯು ತಿಳಿಸಿದೆ. ಆದರೂ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ ಮತ್ತು ಕೇರಳವಿಡೀ ರೋಗ ತಪಾಸಣೆ ಮಾಡಲು ನಿರ್ಧರಿಸಲಾಗಿದೆ.

ಗುರುವಾರ ಎರಡು ಫಾರ್ಮ್‍ಗಳಲ್ಲಿ ಹಕ್ಕಿ ಜ್ವರ ಶಂಕಿಸಿ ಲ್ಯಾಬ್‍ಗೆ ಕಳುಹಿಸಲಾಗಿದೆ. ರೋಗ ಕಂಡು ಬಂದಿರುವ ಎರಡು ಫಾರ್ಮ್‍ಗಳ ಒಂದು ಕಿಲೋಮೀಟರ್ ಸುತ್ತಲೂ ತಜ್ಞರು ಪರಿಶೀಲನೆ ನಡೆಸಲಿದ್ದಾರೆ.