ಕುವೈಟ್: ಭಾರತ ಸಹಿತ ಏಳು ದೇಶಗಳ ವಿಮಾನಯಾನ ರದ್ದು

0
930

ಸನ್ಮಾರ್ಗ ವಾರ್ತೆ

ಕುವೈಟ್‍ಸಿಟಿ, ಮಾ.7: ಭಾರತ ಸಹಿತ ಏಳು ದೇಶಗಳ ವಿಮಾನ ಯಾನವನ್ನು ಕುವೈಟ್ ತಾತ್ಕಾಲಿಕವಾಗಿ ನಿಲುಗಡೆಗೊಳಿಸಿದೆ. ಭಾರತ, ಈಜಿಪ್ಟ್, ಫಿಲಿಪ್ಪೀನ್ಸ್, ಸಿರಿಯ, ಲೆಬನಾನ್, ಶ್ರೀಲಂಕಾ, ಬಾಂಗ್ಲಾದೇಶದಿಂದ ಕುವೈಟ್ ವಿಮಾನ ನಿಲ್ದಾಣಕ್ಕಿರುವ ಸರ್ವಿಸ್ ಸ್ಥಗಿತಗೊಂಡಿದೆ.

ಶುಕ್ರವಾರದಿಂದ ಒಂದು ವಾರಕ್ಕೆ ವಿಮಾನಯಾನ ನಿಲ್ಲಿಸಲು ಆರೋಗ್ಯ ಸಚಿವಾಲಯ ಶಿಫಾರಸು ಮಾಡಿತ್ತು. ಅದರಂತೆ ಕುವೈಟ್ ಸರಕಾರ ನಿಷೇಧ ಹೇರಿದೆ. ಕೊರೊನಾ ವೈರಸ್ ಪೀಡಿತರಿರುವ ದೇಶ ಎಂಬ ಕಾರಣದಿಂದ ಮುನ್ನೆಚ್ಚರಿಕೆಯ ಅಂಗವಾಗಿ ವಿಮಾನ ಯಾನ ರದ್ದಾಗಿದೆ.