ಕೋವಿಡ್ ನಿಯಮಾವಳಿ ಉಲ್ಲಂಘನೆ: ಆಂಬುಲೆನ್ಸ್ ಬೆಳಕಲ್ಲಿ ನಡುರಸ್ತೆಯಲ್ಲಿಯೇ ಹುಟ್ಟುಹಬ್ಬಾಚರಣೆ!

0
373

ಸನ್ಮಾರ್ಗ ವಾರ್ತೆ

ಕೇರಳ,ಜೂ.27: ಕೊರೋನಾ ಆತಂಕದ ನಡುವೆ ರಾಜ್ಯದ ಗಡಿಯ ತಪಾಸಣಾ ಕೇಂದ್ರದ ವ್ಯಕ್ತಿಯೊಬ್ಬರ ಹುಟ್ಟುಹಬ್ಬವನ್ನು ಆಂಬುಲೆನ್ಸ್ ಲೈಟುಗಳ ಬೆಳಕಿನಲ್ಲಿ ಗೆಳೆಯರು ನಡುರಸ್ತೆಯಲ್ಲಿ ಆಚರಿಸಿದ್ದು ಇದೀಗ ವಿವಾದಕ್ಕೆ ಗುರಿಯಾಗಿದೆ. ಕೇರಳ-ತಮಿಳ್ನಾಡು ಗಡಿಯಲ್ಲಿ ಕೊರೋನ ನಿಯಂತ್ರಣದ ಪಾಸ್ ತಪಾಸಣಾ ಕೇಂದ್ರದ ಯುವಕರು ನಿಯಂತ್ರಣವನ್ನು ಗಾಳಿಗೆ ತೂರಿ ಹುಟ್ಟು ಹಬ್ಬ ಆಚರಿಸಿದ್ದರು.

ಬಸ್‌ಸ್ಟ್ಯಾಂಡ್ ಸಮೀಪದ ರಸ್ತೆಯಲ್ಲಿ ಗುರುವಾರ ಸಂಜೆ 7:30ಕ್ಕೆ ಘಟನೆ ನಡೆದಿದೆ. ನಿಲ್ಲಿಸಲಾಗಿದ್ದ ಜೀಪಿನ ಮೇಲೆ ಹತ್ತಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಗಿದೆ. ಮೂರು ಆಂಬುಲೆನ್ಸ್‌ಗಳಲ್ಲಿ ಬಣ್ಣದ ಲೈಟ್ ಹಾಕಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ತಮಿಳ್ನಾಡಿನಿಂದ ನೂರಾರು ಜನರು ದಿನಾಲೂ ಹಾದು ಹೋಗುವ ತಪಾಸಣಾ ಕೇಂದ್ರ ಇದು. ಸ್ವಯಂ ಸೇವೆಗೆಂದು ಬಂದ ಯುವಕರು ಸಾಮಾಜಿಕ ಅಂತರವನ್ನಾಗಲಿ ಕೊರೋನಾ ನಿಯಂತ್ರಣವನ್ನಾಗಲಿ ಪಾಲಿಸದೆ ಒಟ್ಟು ಸೇರಿ ನಿಂತು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸುವುದು ವಿಡಿಯೋದಲ್ಲಿದೆ. ರೋಗ ಪೀಡಿತರ ಸಹಿತ ಇಲ್ಲಿಂದ ಹಾದು ಹೋಗುವವರು ತಪಾಸಣೆ ಸ್ಥಳದಿಂದ ಮನೆಗೆ ಹೋಗಿ ಅಣು ಮುಕ್ತಗೊಳಿಸಬೇಕೆಂಬ ನಿರ್ದೇಶವೂ ಇದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.