ಫೆಲೆಸ್ತೀನಿಯನ್ ಭೂಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಇಸ್ರೇಲ್ ಸಂಚು: ಜಮಾಅತೆ ಇಸ್ಲಾಮೀ ಹಿಂದ್ ಖಂಡನೆ

0
685

ಸನ್ಮಾರ್ಗ ವಾರ್ತೆ

ನವದೆಹಲಿ,ಜೂ.27: ವೆಸ್ಟ್ ಬ್ಯಾಂಕ್‌ನ ಫೆಲೆಸ್ತೀನಿಯನ್ ಭೂಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಇಸ್ರೇಲಿನ ಸಂಚನ್ನು ಜಮಾಅತೆ ಇಸ್ಲಾಮಿ ಹಿಂದ್(ಜೆಐಹೆಚ್) ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸದತುಲ್ಲಾ ಹುಸೇನಿ ಬಲವಾಗಿ ಖಂಡಿಸಿದ್ದಾರೆ ಮತ್ತು ತಕ್ಷಣದ ಅಂತಾರಾಷ್ಟ್ರೀಯ ಹಸ್ತಕ್ಷೇಪಕ್ಕೆ ಒತ್ತಾಯಿಸಿದ್ದಾರೆ.

“ಪಶ್ಚಿಮ ದಂಡೆಯಲ್ಲಿರುವ ಫೆಲೆಸ್ತೀನಿಯನ್ ಭೂಮಿಯನ್ನು ಬೃಹತ್ ಪ್ರಮಾಣದಲ್ಲಿ ಸ್ವಾಧೀನಪಡಿಸಿಕೊಳ್ಳಲು ಇಸ್ರೇಲ್ ವರದಿ ಮಾಡಿದ ಯೋಜನೆಯನ್ನು ನಾವು ಖಂಡಿಸುತ್ತೇವೆ ಮತ್ತು ಇಸ್ರೇಲ್ ತನ್ನ ದುಷ್ಕೃತ್ಯದ ಯೋಜನೆಗಳನ್ನು ಕೈಗೊಳ್ಳುವುದನ್ನು ತಡೆಯಲು ಅಂತರಾಷ್ಟ್ರೀಯ ಸಮುದಾಯದ ತಕ್ಷಣದ ಹಸ್ತಕ್ಷೇಪವನ್ನು ಕೋರುತ್ತೇವೆ ಎಂದು ಅವರು ಹೇಳಿದರು‌.

ಇದು ಪ್ರಾದೇಶಿಕ ಸಮಗ್ರತೆಯ ವಿಷಯವಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ತತ್ವ ಮತ್ತು ಯುದ್ಧದಿಂದ ಭೂಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂಬ ನಿಯಮದ ಉಲ್ಲಂಘನೆ ಮತ್ತು ವಿಶ್ವಾಸಘಾತುಕ ಕೃತ್ಯಕ್ಕೆ ಇಸ್ರೇಲ್ ಕೈ ಹಾಕಿದೆ‌. ಈ ಬೆಳವಣಿಗೆಗೆ ಅಂತಾರಾಷ್ಟ್ರೀಯ ಸಮುದಾಯದ ದುರ್ಬಲ ಪ್ರತಿಕ್ರಿಯೆಯ ಬಗ್ಗೆ ಜಮಾಅತ್ ಆತಂಕ ವ್ಯಕ್ತಪಡಿಸಿದೆ.

ನ್ಯಾಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಇಸ್ರೇಲಿನ ಎಲ್ಲ ಪ್ರಯತ್ನಗಳ ವಿರುದ್ಧ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಮುದಾಯವು ಮುಂದಡಿ ಇಡಬೇಕಿದ್ದು, ಯುಎನ್ ಸೆಕ್ಯುರಿಟಿ ಕೌನ್ಸಿಲ್ ಫೆಲೆಸ್ತೀನಿನ ವಿಷಯದಲ್ಲಿ ಶೀಘ್ರ ನಿರ್ಣಯಗಳನ್ನು ಕೈಗೊಂಡು ತ್ವರಿತವಾಗಿ ಕ್ರಮ ಜರುಗಿಸಬೇಕು ಎಂದು ಸಾದತುಲ್ಲಾ ಹುಸೈನಿ ಆಗ್ರಹಿಸಿದರು.

“ಕಾನೂನು ಬಾಹಿರ ಅತಿಕ್ರಮಣ, ಅಕ್ರಮ ವಸಾಹತುಗಳ ನಿರ್ಮಾಣ ಮತ್ತು ಇಸ್ರೇಲ್‌ನಿಂದ ಫೆಲೆಸ್ತೀನ್‌ಗಾದ ತೀವ್ರ ಅನ್ಯಾಯದ ವಿರುದ್ಧ ಜಮಾಅತೆ ಇಸ್ಲಾಮಿ ಹಿಂದ್ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದೆ. ಫೆಲೆಸ್ತೀನಿನ ಜನರಿಗೆ ತಮ್ಮ ಜಮೀನುಗಳಲ್ಲಿ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸಿಕೊಳ್ಳಲು ಮತ್ತು ಶಾಂತಿಯುತವಾಗಿ ಫೆಲಸ್ತೀನಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಖಚಿತಪಡಿಸಲು ವಿಶ್ವದಾದ್ಯಂತ ನ್ಯಾಯ ಪ್ರೀಯರು ಹಾಗೂ ವಿಶ್ವಾಸಿಗಳು ಮುಂದಡಿ ಇಡಬೇಕಿದೆ‌ ಮತ್ತು ಸಾಂವಿಧಾನಿಕ ವಿಧಾನಗಳ ಮೂಲಕ ಫೆಲಸ್ತೀನಿಯರ ಹಕ್ಕುಗಳನ್ನು ಪುನರ್ ಕಲ್ಪಿಸಬೇಕಿದೆ‌ ಎಂದು ಸಾದತುಲ್ಲಾ ಹುಸೈನಿ ಆಗ್ರಹಿಸಿದರು.

ಭಾರತ ಯಾವಾಗಲೂ ಸಾಮ್ರಾಜ್ಯಶಾಹಿ ಶಕ್ತಿಗಳೊಂದಿಗೆ ಹೋರಾಡಿದೆ ಮತ್ತು ಸಾಮ್ರಾಜ್ಯಶಾಹಿ ಮತ್ತು ವರ್ಣಭೇದ ನೀತಿಯ ವಿರುದ್ಧದ ಹೋರಾಟದಲ್ಲಿ ಅನೇಕ ದೇಶಗಳನ್ನು ಬೆಂಬಲಿಸಿದೆ. ಭಾರತ ಸರಕಾರವು ಇಸ್ರೇಲಿನ ಈ ಕ್ರಮವನ್ನು ವಿರೋಧಿಸಿ ನೆತನ್ಯಾಹು ಅವರಿಗೆ ವಿಸ್ತರಣಾ ಯೋಜನೆಗಳಿಂದ ದೂರವಿರಲು ಸಲಹೆ ನೀಡುವಂತೆ ಜಮಾಅತ್ ಆಗ್ರಹಿಸಿದೆ.

ರಾಜಕೀಯ ಉಳಿವನ್ನು ಖಚಿತಪಡಿಸಿಕೊಳ್ಳಲು ಅವರ ವಿರುದ್ಧದ ಕ್ರಿಮಿನಲ್ ಆರೋಪಗಳಲ್ಲಿ ತಪ್ಪಿತಸ್ಥರನ್ನು ತಪ್ಪಿಸುವ ಗುರಿಯನ್ನು ನೆತನ್ಯಾಹು ಜಾರಿಗೊಳಿಸಲು ಹೊರಟ ಯೋಜನೆ ಇದಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಆರೋಪಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.