ಅಲ್ಪಸಂಖ್ಯಾತರನ್ನು ಅನ್ಯಗೊಳಿಸಬೇಡಿ; ಬಿಜೆಪಿಗೆ ನೆನಪಿಸಿದ ಅಕಾಲಿದಳ

0
1069

ಸನ್ಮಾರ್ಗ ವಾರ್ತೆ

ಅಮೃತಸರ, ಫೆ. 14: ಪೌರತ್ವ ತಿದ್ದುಪಡಿ ಕಾನೂನನ್ನು ಟೀಕಿಸಿದ ಬಿಜೆಪಿ ಮಿತ್ರ ಪಕ್ಷ ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್ ಅಲ್ಪಸಂಖ್ಯಾತರನ್ನು ಜೊತೆ ಸೇರಿಸಬೇಕೆಂದು ಬಿಜೆಪಿಗೆ ಕಿವಿಮಾತು ಹೇಳಿದರು. ಅವರು ಅಮೃತಸರದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು.

ಅವರು ಶಿರೋಮಣಿ ಅಕಾಲಿದಳದ ಹಿರಿಯ ನಾಯಕರಾಗಿದ್ದಾರೆ. ದೇಶದ ಈಗಿನ ಘಟನೆಗಳ ಬಗ್ಗೆ ತುಂಬ ಆತಂಕಿತನಾಗಿರುವೆ. ಎಲ್ಲ ಧರ್ಮಗಳನ್ನು ಗೌರವಿಸಬೇಕು. ಯಾವ ಸರಕಾರವೂ ಯಶಸ್ವಿಯಾಗಬೇಕಾದರೆ ಅಲ್ಪಸಂಖ್ಯಾತರು ಜೊತೆಗಿರಬೇಕೆಂದು ಬಾದಲ್ ಹೇಳಿದರು.

ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ ಧರ್ಮಗಳು ಒಂದು ಕುಟುಂಬದಂತೆ ಬದುಕುವುದು. ದ್ವೇಷ ಹರಡಬಾರದು. ಅವರು ಪರಸ್ಪರ ಅಭಿನಂದಿಸಿಕೊಳ್ಳಬೇಕಾಗಿದೆ. ಜಾತ್ಯತೀತ ಪ್ರಜಾಪ್ರಭುತ್ವ ದೇಶವಿದು. ಅದನ್ನು ಸಂವಿಧಾನ ಪ್ರತಿಪಾದಿಸುತ್ತದೆ. ಜಾತ್ಯತೀತತೆಯನ್ನು ದುರ್ಬಲಗೊಳಿಸುವ ಚಟುವಟಿಕೆಗಳು ದೇಶವನ್ನು ನಾಶಪಡಿಸುವುದು. ಅಧಿಕಾರದಲ್ಲಿರುವವರು ಭಾರತವನ್ನು ಜಾತ್ಯತೀತ ದೇಶವಾಗಿರುವಂತೆ ನೋಡಿಕೊಳ್ಳಬೇಕೆಂದು ಅವರು ಹೇಳಿದರು.