ಕಾಶ್ಮೀರ ಧ್ವಜ ಹೇಳಿಕೆ: ಮೆಹಬೂಬ ಮುಫ್ತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹಿಸಿದ ಬಿಜೆಪಿ

0
387

ಸನ್ಮಾರ್ಗ ವಾರ್ತೆ

ಶ್ರೀನಗರ,ಅ.24: ಜಮ್ಮು-ಕಾಶ್ಮೀರಕ್ಕೆ ಸ್ವತಂತ್ರ ಧ್ವಜವನ್ನು ನೀಡದೆ ಬೇರೆ ಯಾವ ಧ್ವಜವನ್ನು ಎತ್ತಿಹಿಡಿಯಲು ನಾವು ಸಿದ್ಧರಲ್ಲ ಎಂದು ಪಿಡಿಪಿ ನಾಯಕ ಮೆಹಬೂಬ ಮುಫ್ತಿ ಹೇಳಿಕೆ ನೀಡಿದ್ದು ಇವರ ವಿರುದ್ಧ ರಾಷ್ಟ್ರ ದ್ರೋಹ ಪ್ರಕರಣ ದಾಖಲಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. 14 ತಿಂಗಳ ಗೃಹ ಬಂಧನದಿಂದ ಬಿಡುಗಡೆಗೊಂಡ ಬಳಿಕ ಮೊದಲ ಬಾರಿ ಪತ್ರಿಕಾಗೋಷ್ಠಿಯಲ್ಲಿ ಆರ್ಟಿಕಲ್ 370ರ ಪ್ರಕಾರ ಧ್ವಜ ಮತ್ತು ವಿಶೇಷ ಸ್ಥಾನವನ್ನು ಮರಳಿಸುವವರೆಗೆ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದಿಲ್ಲ ಎಂದು ಮೆಹಬೂಬ ಮುಫ್ತಿ ಹೇಳಿಕೆ ನೀಡಿದ್ದಾರೆ.

ನಾವು ಕಾಶ್ಮೀರವನ್ನು ಕೈಬಿಟ್ಟಿದ್ದೇವೆ ಎಂದು ತಿಳಿದುಕೊಂಡಿರುವವರಿಗೆ ತಪ್ಪು ಸಂಭವಿಸಿದೆ. ನಮ್ಮ ರಾಜ್ಯದ ಧ್ವಜ ಮರಳಿ ಬಂದರೆ ಮಾತ್ರವೇ ನಾವು ರಾಷ್ಟ್ರಧ್ವಜವನ್ನು ಹಾರಿಸುತ್ತೇವೆ. ಈ ಧ್ವಜವೂ ಸಂವಿಧಾನದಲ್ಲಿರುವುದರಿಂದ ಮಾತ್ರ ಇಲ್ಲಿ ರಾಷ್ಟ್ರ ಧ್ವಜ ಇರುವುದು. ಈ ಧ್ವಜದ ಮೂಲಕವೇ ದೇಶದ ಇತರ ಭಾಗಗಳಲ್ಲಿ ಸಂಬಂಧ ಹೊಂದಿದ್ದೆವು ಎಂದು ಮೆಹಬೂಬ ಮುಫ್ತಿ ಹೇಳಿದರು.

ಸಂವಿಧಾನ ಕೊಟ್ಟ ಹಕ್ಕುಗಳನ್ನು ಬಿಜೆಪಿ ಸರಕಾರ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಮೂಲಕ ದೋಚಿದೆ. ದರೋಡೆ ಮಾಡಿದವರು ಅದನ್ನು ಮರಳಿಸಬೇಕು. ನಮ್ಮಿಂದ ದರೋಡೆ ಮಾಡಿದ್ದು ಅದಕ್ಕಿಂತ ಆಚೆಗಿನದ್ದನ್ನು ದರೋಡೆ ಮಾಡಿದವರು ನೀಡುವ ಕಾಲ ಬರಲಿದೆ. ಅದಕ್ಕಾಗಿ ಶಾಂತಿಯುತ ದಾರಿಗಳಲ್ಲಿ ರಾಜಕೀಯ ಹೋರಾಟ ನಡೆಸುತ್ತೇವೆ. ಸಂವಿಧಾನದತ್ತ ಅಧಿಕಾರ ಮತ್ತು ಕಾಶ್ಮೀರದ ಧ್ವಜ ಇಲ್ಲದವರೆಗೆ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಬಯಸುವುದಿಲ್ಲ ಎಂದು ಮುಫ್ತಿ ಹೇಳಿದರು.