ನೆರೆ ಪೀಡಿತ ಬೆಂಗಳೂರಿನಲ್ಲಿ ಪುಟ್ಟ ಮಗುವನ್ನು ರಕ್ಷಿಸಿದ ಯುವಕರು- ವೀಡಿಯೊ ವೈರಲ್

0
744

ಸನ್ಮಾರ್ಗ ವಾರ್ತೆ

ಬೆಂಗಳೂರು,ಅ.24: ಭಾರೀ ಮಳೆಯಿಂದಾಗಿ ನೆರೆಪೀಡಿತ ಬೆಂಗಳೂರಿನಿಂದ ರಕ್ಷಣಾ ಕಾರ್ಯದ ಹಲವು ವೈರಲ್ ದೃಶ್ಯಗಳು ಕಳೆದ ದಿನ ಹೊರಬಂದಿವೆ. ಹೊಸದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ನೆರೆಯಿಂದ ಯುವಕರು ನವಜಾತ ಶಿಶುವನ್ನು ರಕ್ಷಿಸುವ ದೃಶ್ಯ ವೈರಲ್ ಆಗಿದೆ.

ಹೊಸಕರೆಹಳ್ಳಿ ಪ್ರದೇಶದಲ್ಲಿ ಯುವಕರು ಪುಟ್ಟ ಕಂದನನ್ನು ರಕ್ಷಿಸಿದ್ದಾರೆ ಎನ್ನಲಾಗುತ್ತಿದ್ದು ಮಗುವಿಗೆ ಹದಿನೈದು ದಿನ ವಯಸ್ಸು ಮಾತ್ರ ಆಗಿತ್ತು. ಮಗುವನ್ನು ತಲೆಯ ಮೇಲೆ ಎತ್ತಿಹಿಡಿದು ಮಹಿಳೆಯೊಬ್ಬರಿಗೆ ಯುವಕನೊಬ್ಬ ನೀಡುವ ದೃಶ್ಯ ವೀಡಿಯೊದಲ್ಲಿದೆ.

ಈ ಹಿಂದೆ ದಕ್ಷಿಣ ಬೆಂಗಳೂರಿನಲ್ಲಿ ನೆರೆಯಿಂದ ಮುಳುಗಿದ್ದ ಹೆಣ್ಣುಮಗುವನ್ನು ಯುವಕರು ರಕ್ಷಿಸಿದ್ದರು. ಮನೆಬಿಟ್ಟು ತೆರಳುವಂತೆ ಅಲ್ಲಿನ ನಿವಾಸಿಗಳಿಗೆ ಯುವಕರು ಹೇಳುತ್ತಿದ್ದರು. ತಗ್ಗುಪ್ರದೇಶಗಳಲ್ಲಿ ವಾಹನ ಕೊಚ್ಚಿ ಹೋಗುವ ದೃಶ್ಯಗಳು ಹೊರಬಂದಿವೆ.