ಸೌದಿಯಲ್ಲಿ ಮೇ 3ರಿಂದ ವ್ಯಾಪಾರ ಆರಂಭ

0
978

ಸನ್ಮಾರ್ಗ ವಾರ್ತೆ

ಜಿದ್ದ, ಎ. 29: ಸೌದಿಯಲ್ಲಿ ಬುಧವಾರದಿಂದ ವಾಣಿಜ್ಯ ಕೇಂದ್ರಗಳು, ರಖಂ,ಚಿಲ್ಲರೆ ವ್ಯಾಪಾರದಂಗಡಿಗಳು ಪುನರಾರಂಭವಾಗುತ್ತಿವೆ. ಕೊರೊನಾದಿಂದ ಬಂದ್ ಮಾಡಿ ಒಂದೂವರೆ ತಿಂಗಳಾಯಿತು. ಬೆಳಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ. ಮಕ್ಕದ ಹೆದ್ದಾರಿ ನಗರಗಳಲ್ಲಿ ಕರ್ಫ್ಯೂ ಸಡಿಲಿಕೆ ಇರಲಿದೆ. ಎಪ್ರಿಲ್ 29ರಿಂದ ಮೇ13ರವರೆಗೆ (ರಮಝಾನ್ 20) ಸಂಸ್ಥೆಗಳು ತೆರೆದುಕೊಂಡಿರಲಿವೆ ಎಂದು ಸೌದಿ ದೊರೆ ಸಲ್ಮಾನ್ ಘೋಷಿಸಿದ್ದಾರೆ.

ಮಕ್ಕದಲ್ಲಿ ಪೂರ್ತಿ ಸಮಯದಲ್ಲಿ ಕರ್ಫ್ಯೂ ಇದ್ದುದರಿಂದ ಅಂಗಡಿಗಳು ಮಾತ್ರ ಅಗತ್ಯ ಸಾಮಾನು ತೆಗೆದುಕೊಳ್ಳಲು ತೆರೆದಿವೆ. ಆದರೆ ಸಾಮಾಜಿಕ ಅಂತರ ಪಾಲಿಸಲು ಆಗದ ಸ್ಥಳಗಳಲ್ಲಿ ಕ್ಲಿನಿಕ್‍ಗಳು, ಬಾರ್ಬರ್ ಶಾಪ್‍ಗಳು, ಸ್ಪೋಟ್ಸ್, ಹೆಲ್ತ್ ಕ್ಲಬ್‍ಗಳು, ಪ್ರವಾಸಿ ಕೇಂದ್ರಗಳು, ಸಿನೆಮಾಲಯಗಳು, ಬ್ಯೂಟಿ ಪಾರ್ಲರ್ ಗಳು, ರೆಸ್ಟೋರಾಗಳು, ಕೆಫೆಗಳಿಗೆ ನಿರ್ಬಂಧ ಮುಂದುವರಿಯಲಿದೆ. ವಾಣಿಜ್ಯ ಕೇಂದ್ರಗಳು ರಖಂ, ಚಿಲ್ಲರೆ ವ್ಯಾಪಾರ ಸಂಸ್ಥೆಗಳಿಗೆ ಅನುಮತಿ ಕೊಟ್ಟರೂ ಕಠಿಣ ಆರೋಗ್ಯ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಈ ಕ್ರಮಗಳನ್ನು ಕಠಿಣವಾಗಿ ಅನುಸರಿಸಲಾಗುವುದು ಮತ್ತು ಪೊಲೀಸರ ನಿರೀಕ್ಷಣೆ ದಿನಾಲೂ ಇರಲಿದೆ. ನೆರವು, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮತ್ತಿತರ ಅಗತ್ಯ ನೆರವು ಒಳಗೊಂಡಿರುತ್ತದೆ, ದೇಶದ ಉದ್ದಗಲಕ್ಕೂ ಈ ಸೇವೆ ಮುಂದುವರೆದಿದೆ ಎಂದು ಅದು ತಿಳಿಸಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.