ತನಗಿಂತ ಹದಿನೆಂಟು ವರ್ಷ ಕಿರಿಯಳಾದ ಪಕ್ಷದ ಕಾರ್ಯಕರ್ತೆಯನ್ನು ಮೂರನೇ ಮದುವೆ ಮಾಡಿಕೊಂಡ ಬಿಜೆಪಿ ನಾಯಕ

0
767

ಅಹ್ಮದಾಬಾದ್, ಜೂ. 24: ಗುಜರಾತ್‍ನ ದಾಹೋದ ಜಿಲ್ಲಾ ಬಿಜೆಪಿ ನಾಯಕ ಶಂಕರಭಾಯಿ ಅಮಲಿಯಾರ್ ಅವರು ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆಯನ್ನು ಮೂರನೆ ಮದುವೆಯಾಗಿದ್ದಾರೆ. ಶಂಕರಭಾಯಿ ದಾಹೋದ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಅವರ ಮೂರನೆ ಹೆಂಡತಿಯಾಗಿ ಬಂದಿರುವ ಮಹಿಳೆ ದಾಹೋದದ ಮಹಿಳಾ ಮೋರ್ಚಾ ಉಪಾಧ್ಯಕ್ಷೆಯಾಗಿದ್ದಾರೆ. ಶಂಕರಭಾಯಿ ಮೊದಲ ಮದುವೆ ಫತೇಪುರ ಶಾಸಕ ರಮೇರ್ಶ ಕಟಾರಾರ ಸಹೋದರಿಯೊಂದಿಗೆ ನಡೆದಿತ್ತು. ಇದರಲ್ಲಿ ನಾಲ್ವರು ಮಕ್ಕಳಿದ್ದಾರೆ.

ಅಮರ್ ಉಜಾಲ ಪತ್ರಿಕೆಯ ವರದಿಯ ಪ್ರಕಾರ ಶಂಕರ್‍ಭಾಯಿ ಮೊದಲ ಪತ್ನಿ 2010ರಲ್ಲಿ ನಿಧನ ಹೊಂದಿದರು. 2011ರಲ್ಲಿ ಜಲೋಡ್‍ನ ಜ್ಯೂತ್ಸ್ನಾ ಬೆನ್‍ರನ್ನು ಎರಡನೆ ಮದುವೆಯಾಗಿದ್ದರು. ಆದರೆ ಇಬ್ಬರ ನಡುವೆ ಸಂಬಂಧ ಸರಿಯಿಲ್ಲದೆ ಬೇರೆ ಬೇರೆಯಾಗಿದ್ದಾರೆ. ನಂತರ ತನಗೆ ಹದಿನೆಂಟು ವರ್ಷ ಚಿಕ್ಕವರಾದ ಜಲ್ಪಾಬೆನ್‍ರನ್ನು ಶಂಕರಭಾಯಿ ಮದುವೆಯಾಗಿದ್ದಾರೆ. ಜಲ್ಪಾಬೆನ್ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆಯಾಗಿದ್ದಾರೆ. ದಾಹೋದ್‍ನಲ್ಲಿ ಎಂಎಸ್‍ಸಿ ಕಲಿಯುತ್ತಿದ್ದಾರೆ.