ಶ್ರೀಲಂಕಾದ ಮುಸ್ಲಿಮರು ಮಸೀದಿ ಕೆಡವಿ, ಹಿಂದೂ ಧರ್ಮ ಸ್ವೀಕರಿಸುತ್ತಿದ್ದಾರೆಯೇ? ನಿಜಸ್ಥಿತಿ ಏನು?

0
1022

ಕೊಲೊಂಬೊ, ಜೂ. 24: ಈಸ್ಟರ್ ಭಯೋತ್ಪಾದನಾ ದಾಳಿ ನಡೆದ ಬಳಿಕ ಶ್ರೀಲಂಕಾದಲ್ಲಿ ಮುಸ್ಲಿಮರೇ ಸ್ವಯಂ ತಮ್ಮ ಮಸೀದಿ ಕೆಡವಿ ಹಾಕಿ ಹಿಂದೂ ಧರ್ಮ ಸ್ವೀಕರಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ನಡೆಯುತ್ತಿದೆ. ಶ್ರೀಲಂಕದ ಮುಸ್ಲಿಮರು ತಮ್ಮ ಕೈಯಾರೆ ಮಸೀದಿ ಒಡೆದು ಹಾಕುತ್ತಿದ್ದಾರೆ. ಹಿಂದೂ ಧರ್ಮವನ್ನು ಸ್ವೀಕರಿಸಿ ಇಸ್ಲಾಂ ಧರ್ಮದ ಕೆಟ್ಟ ಮತ್ತು ದ್ವೇಷದ ತುಂಬಿದ ನಿಜಸ್ಥಿತಿ ಅರ್ಥವಾಗಿದೆ ಎಂದು ಹೇಳುತ್ತಿದ್ದಾರೆ.

ಇದರೊಂದಿಗೆ ಒಂದು ಫೋಟೊವನ್ನು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಕೆಲವು ಟೋಪಿ ಇಟ್ಟವರು ಕಟ್ಟಡವೊಂದನ್ನು ಒಡೆದು ಹಾಕುತ್ತಿರುವಂತೆ ಫೋಟೊದಲ್ಲಿ ತೋರಿಸಲಾಗಿದೆ. ಆಲ್ಟ್ ನ್ಯೂಸ್ ವರದಿಯ ಪ್ರಕಾರ ರಾಷ್ಟ್ರೀಯ ತೌಹೀದ್ ಜಮಾಅತ್ ಉಪಯೋಗಿಸುತ್ತಿದ್ದ ಮಸೀದಿಯನ್ನು ಮುಖ್ಯ ಮಸೀದಿಯ ಮುಸ್ಲಿಮರು ಕೆಡವಿ ಹಾಕಿದ್ದಾರೆ. ಈ ಮಸೀದಿಯನ್ನು ವಿದೇಶಿ ಸಂಘಟನೆಯ ಫಂಡ್‍ನಿಂದ ನಿರ್ಮಿಸಲಾಗಿತ್ತು. ಈ ಫೋಟೊವನ್ನು ಪೋಸ್ಟ್ ಮಾಡಿ ಮುಸ್ಲಿಮರು ಮಸೀದಿ ಒಡೆದು ಹಿಂದೂ ಧರ್ಮ ಸ್ವೀಕರಿಸುತ್ತಿದ್ದಾರೆ ಎಂದು ಅಪಪ್ರಚಾರ ನಡೆಸಲಾಗಿದೆ.