ಸನ್ಮಾರ್ಗ ವಾರ್ತೆ
ರಾಂಚಿ,ಡಿ: ಝಾರ್ಕಂಡಿನ ರಾಂಚಿಯಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಕುಸ್ತಿ ಪಟುವಿಗೆ ಬಿಜೆಪಿ ಸಂಸದ ಹೊಡೆಯುವ ದೃಶ್ಯಗಳು ಬಹಿರಂಗವಾಗಿದೆ. ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಸಂಸದ ಬ್ರಿಜ್ಭೂಷಣ್ ಶರಣ್ ಸಿಂಗ್ ಕುಸ್ತಿಟುವಿನ ಮುಖಕ್ಕೆ ಥಳಿಸಿದ್ದಾರೆ.
ಘಟನೆಯ ದೃಶ್ಯಗಳು ಹೊರಬಂದಿದ್ದು ಸ್ಟೇಜ್ನಿಂದ ಹೋಗುವ ಮೊದಲು ಯುವ ಕುಸ್ತಿಪಟುವಿನ ಕೆನ್ನೆಗೆ ಎರಡು ಬಾರಿ ಹೊಡೆದಿರುವುದು ವೀಡಿಯೊದಲ್ಲಿದೆ. ಉತ್ತರಪ್ರದೇದ ಕೈಸರ್ ಗಂಜ್ನ ಸಂಸದ ಬ್ರಿಜ್ ಭೂಷಣ್ ಸಿಂಗ್ ಆಗಿದ್ದಾರೆ. ರಾಷ್ಟ್ರೀಯ ಅಂಡರ್ 15 ಕುಸ್ತಿ ಚಾಂಪಿಯನ್ ಶಿಪ್ನ ಮೊದಲ ದಿನ ಕಾರ್ಯಕ್ರಮದಲ್ಲಿ ಇವರು ಮುಖ್ಯ ಅತಿಥಿಯಾಗಿದ್ದರು. ರಾಂಚಿಯ ಶಾಹಿದ್ ಗಣಪತ್ ರಾಯ್ ಇಂಡೋರ್ ಸ್ಟೇಡಿಯಂನಲ್ಲಿ ಘಟನೆ ನಡೆದಿದೆ.
ಹೆಚ್ಚು ವಯಸ್ಸಾಯಿತು ಎಂದು ಕುಸ್ತಿ ಪಟುಗೆ ಸ್ಪರ್ಧೆಯಿಂದ ಹೊರಗಿಡಲಾಗಿತ್ತು. ತದನಂತರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕೊಡಬೇಕೆಂದು ಆತ ಸಚಿವರ ಬಳಿ ಕೇಳಿಕೊಂಡಿದ್ದನು ಈ ಸಂದರ್ಭದಲ್ಲಿ ಸಚಿವರು ಕುಸ್ತಿ ಪಟುವಿನ ಕೆನ್ನೆಗೆ ಬಾರಿಸಿದಿದ್ದಾರೆ.
As instructed by @narendramodi , his MP started to train the wrestlers on the stage itself. Preparation for the next Olympics is at next level. #brijbhushansharansingh pic.twitter.com/Qf313HBzMs
— Rofl Gandhi 2.0 🚜🏹 (@RoflGandhi_) December 18, 2021












