ಹೊಸ ವರ್ಷಾಚರಣೆಗೆ ಬ್ರೇಕ್: ಪ್ರತಿ ನಿಮಿಷಕ್ಕೆ 4 ಸಾವಿರಕ್ಕೂ ಹೆಚ್ಚು ಆರ್ಡರ್ ಪಡೆಯುತ್ತಿರುವ ಝೊಮ್ಯಾಟೊ, ಸ್ವಿಗ್ಗಿ

0
397

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೊರೋನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಹೊಸ ವರ್ಷಾಚರಣೆಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದರಿಂದ ಹೊರಗಡೆ ಬರುವ ಸಾರ್ವಜನಿಕರ ಸಂಖ್ಯೆ ಕಡಿಮೆಗೊಂಡಿದ್ದರೂ, ಆನ್ ಲೈನ್ ಮೂಲಕ ಹೊಟೇಲ್ ವ್ಯಾಪಾರ ಮುಂದುವರಿದಿದೆ.

ಆನ್ ಲೈನ್ ಮೂಲಕ ಫುಡ್ ಡೆಲಿವರಿ ಮಾಡುತ್ತಿರುವ ಸಂಸ್ಥೆಗಳಾದ ಝೊಮ್ಯಾಟೊ, ಸ್ವಿಗ್ಗಿಯಂತಹಾ ಸಂಸ್ಥೆಗಳಿಗೆ ಸರಕಾರದ ಕ್ರಮವು ಫಲಪ್ರದವಾಗಿ ಕಂಡಿದೆ‌.

ನಾವು ಹಿಂದೆಂದಿಗಿಂತಲೂ ಹೆಚ್ಚು ಆರ್ಡರ್ ಗಳನ್ನು ಪಡೆಯುತ್ತಿದ್ದೇವೆ.‌ ನಮ್ಮ ಸಂಸ್ಥೆಯ ಮೂಲಕ ಪ್ರತಿ ನಿಮಿಷಕ್ಕೆ 4,254 ಫುಡ್ ಆರ್ಡರ್ ಗಳನ್ನು ಪಡೆಯುತ್ತಿರುವುದಾಗಿ ಝೊಮ್ಯಾಟೊ ಸಂಸ್ಥೆಯ ಸಿಇಓ ದೀಪೆಂದರ್ ಗೋಯಲ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆಗೆ ಸರಕಾರ‌ವು ಬ್ರೇಕ್ ನೀಡಿರೋದರಿಂದ ನಮಗೆ ಇಂದು ಅತ್ಯಂತ ಖುಷಿಯ ದಿನವಾಗಿದೆ. ಸ್ವಿಗ್ಗಿಯು ಪ್ರತಿ ನಿಮಿಷಕ್ಕೆ ಸುಮಾರು 5000 ದಷ್ಟು ಫುಡ್ ಆರ್ಡರ್ ಪಡೆಯುತ್ತಿರುವುದಾಗಿ ಸ್ವಿಗ್ಗಿಯ ಸಿಇಓ ವಿವೇಕ್ ಸುಂದರ್ ಮಾಹಿತಿ ನೀಡಿದ್ದಾರೆ.

ರಾತ್ರಿಯ ಸಮಯದಲ್ಲಿ ನಮಗೆ ಹೆಚ್ಚು ಹೆಚ್ಚು ಆರ್ಡರ್ ಗಳು ಬಂದಿದ್ದರಿಂದ ನಮಗೆ ನೆಟ್ವರ್ಕ್ ಸಮಸ್ಯೆ ಉಂಟಾಯಿತು. ಕೂಡಲೇ ತಾಂತ್ರಿಕ ಟೀಮ್ ನ ಸಹಕಾರದಿಂದ ಪರಿಹಾರ ಮಾಡಿದ್ದರಿಂದ ಸಮಸ್ಯೆ ಉಲ್ಬಣಗೊಂಡಿಲ್ಲ. ದೇಶದ ವಿವಿಧ ಮಹಾನಗರಗಳಲ್ಲಿ ನಾವು ಗಮನಿಸಿದ್ದಕ್ಕಿಂತ ಹೆಚ್ಚು ಆರ್ಡರ್ ಬಂದಿದ್ದಾಗಿ ಸ್ವಿಗ್ಗಿ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.