ಕೊಚ್ಚಿ,ಮೇ 11: ಕ್ರೈಸ್ತ ಅಲ್ಪಸಂಖ್ಯಾತರ ರಕ್ಷಣೆಗಾಗಿ ಕೇರಳ ಬಿಜೆಪಿ ಕ್ರೈಸ್ತ ಸಂರಕ್ಷಣಾ ಸೇನೆಯನ್ನು ರೂಪಿಸುತ್ತಿದ್ದೆ ಎಂದು ವರದಿಯಾಗಿದೆ. ಶ್ರೀಲಂಕಾದ ಸ್ಫೋಟದ ಹಿನ್ನೆಲೆಯಲ್ಲಿ ಸೇನೆ ರಚಿಸಲು ಬಿಜೆಪಿ ನಿರ್ಧರಿಸಿದ್ದು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಮುಂದೆ ನಿಂತು ಕ್ರೈಸ್ತ ರಕ್ಷಣಾ ಸೇನೆಯನ್ನು ರೂಪಿಸಲಿದೆ. ಇದರ ಭಾಗವಾಗಿ ಮೇ 29ಕ್ಕೆ ಶ್ರೀಲಂಕಾ ಸ್ಫೋಟದಲ್ಲಿ ಮೃತಪಟ್ಟವರ ಚಿತ್ರಗಳನ್ನು ಇರಿಸಿ ವಿಶೇಷ ಪ್ರಾರ್ಥನೆಯನ್ನು ಸಂಘಟಿಸಲಾಗುವುದು. ಅಂದು ಉಪವಾಸವನ್ನು ಕೂಡ ಆಚರಿಸಲಾಗುವುದು. ಸಂರಕ್ಷಣಾ ಸೇನೆಯ ಭಾಗವಾಗಿ ಹಲವು ಹೋರಾಟ ಕಾರ್ಯಕ್ರಮಗಳನ್ನು ಮುಂದಕ್ಕೆ ಜರಗಿಸಲಾಗುವುದು. ಇದರಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಪಿಎಸ್ ಶ್ರೀಧರನ್ ಪಿಳ್ಳೆ ಭಾಗವಹಿಸಲಿದ್ದಾರೆ. ನಂತರ ಕ್ರೈಸ್ತ ರಕ್ಷಣಾ ಸೇನೆಯ ಅಧಿಕೃತ ಘೋಷಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.












