ಮಸೀದಿಯ ಭಾಷಣಗಳ ಆಡಿಯೊ ಸರಕಾರಕ್ಕೆ ಕಡ್ಡಾಯವಾಗಿ ಕಳುಹಿಸಬೇಕೆಂದು ಆದೇಶಿಸಿದ ಶ್ರೀಲಂಕಾ ಸರಕಾರ

0
955

ಕೊಲೊಂಬೊ,ಮೇ11: ಶ್ರೀಲಂಕಾ ಸರಕಾರ ದೇಶದ ಎಲ್ಲ ಮಸೀದಿಗಳಲ್ಲಿ ನಡೆಯುವ ಉಪದೇಶಗಳ ಆಡಿಯೊ ರೆಕಾರ್ಡಿಂಗ್‍‌ಗಳನ್ನು ಸರಕಾರಕ್ಕೆ ಕಡ್ಡಾಯವಾಗಿ ಕಳುಹಿಸಬೇಕೆಂದು ಆದೇಶಿಸಿದೆ. ಪಿಟಿಐ ವರದಿಯ ಪ್ರಕಾರ ಶುಕ್ರವಾರ ಮುಸ್ಲಿಮ್ ಧಾರ್ಮಿಕ ಸಚಿವಾಲಯ ಈ ಕುರಿತು ಪ್ರಕಟಣೆ ನೀಡಿದೆ. ಜೊತೆಗೆ ಮಸೀದಿಯ ಆಡಳಿತ ನಡೆಸುವ ಜನರಿಗೆ ಯಾವುದೇ ಕಾನೂನು ವಿರೋಧಿ ಉಗ್ರವಾದಿ ಪ್ರಚಾರ ಮಾಡುವ ಸಭೆಯಲ್ಲಿ ಭಾಗಿಯಾಗಬಾರದು ಮತ್ತು ಸಭೆ ನಡೆಸಲು ಅವಕಾಶ ನೀಡಬಾರದು ಎಂದಿದೆ. ಒಂದು ವೇಳೆ ಹೀಗೆ ಮಾಡಿದರೆ ಮಸೀದಿ ಆಡಳಿತ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಸಚಿವಾಲಯ ಹೇಳಿದರು. ಶ್ರೀಲಂಕಾದ ಮುಸ್ಲಿಂ ಧಾರ್ಮಿಕ ವಿಷಯಗಳ ಸಚಿವ ಎಂಎಚ್‍ಎ ಹಲೀಮ್ ಈ ಪ್ರಕಟಣೆಗೆ ಹಸ್ತಾಕ್ಷರ ಹಾಕಿದ್ದಾರೆ. ದೇಶದ ಪ್ರಚಲಿತ ಸ್ಥಿತಿಯನ್ನು ಗಮನಿಸಿ ಮಸೀದಿಯ ಆಡಳಿತ ವ್ಯವಸ್ಥೆ ಮಾಡುವವರಿಗೆ ಸೂಚನೆ ನೀಡಲಾಗುತ್ತಿದೆ. ಮಸೀದಿಯಲ್ಲಿ ನಡೆಯುವ ಜುಮಾ ನಮಾಝ್ ಇದರಲ್ಲಿ ನಡೆಯುವ ಖುತ್‍ಬಾ ಮತ್ತು ಇತರ ವಿಷಯಗಳು ಆಡಿಯ ರೆಕಾರ್ಡಿಂಗ್ ಸಚಿವಾಲಯಕ್ಕೆ ಕಡ್ಡಾಯವಾಗಿ ಕಳುಹಿಸಬೇಕೆಂದು ಸಚಿವ ಹಲೀಮ್‍ರ ಪ್ರಕಟಣೆ ತಿಳಿಸಿದೆ.