ಪ. ಬಂಗಾಳ: ಬಿಜೆಪಿ ಯುವ ನಾಯಕಿ ಪಮೇಲಾ ಗೋಸ್ವಾಮಿ ಬಂಧನ; 100 ಗ್ರಾಂ ಕೊಕೇನ್ ವಶ

0
614

ಸನ್ಮಾರ್ಗ ವಾರ್ತೆ

ಕೊಲ್ಕತಾ: ಬಿಜೆಪಿ ಯುವ ನಾಯಕಿ ಪಮೇಲಾ ಗೋಸ್ವಾಮಿಯನ್ನು ಮಾದಕವಸ್ತುಗಳ ಸಹಿತ ಕೊಲ್ಕತಾ ಪೊಲೀಸರು ಬಂಧಿಸಿದ್ದಾರೆ. ಗೋಸ್ವಾಮಿ ಯುವ ಮೋರ್ಚದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇವರ ಕೈಯಲ್ಲಿ 100 ಗ್ರಾಮ್ ಕೊಕೇನ್ ಇತ್ತು. ಕಾರಿನ ಸೀಟಿನಡಿ ಅಡಗಿಸಿಟ್ಟಿದ್ದ ಬ್ಯಾಗ್‌ನಿಂದ ಪೊಲೀಸರು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಲಕ್ಷಾಂತರ ಬೆಲೆಬಾಳುವ ಮಾದಕ ವಸ್ತು ಇದು. ಗೋಸ್ವಾಮಿಯವರ ಕೈಯಿಂದ ಸಿಕ್ಕಿದೆ ಎಂದ ಪೊಲೀಸರು ಬಿಜೆಪಿ ಯುವ ಮೋರ್ಚಾ ನಾಯಕಿ ಪಮೇಲ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳ ಅನ್ವಯ ಕೇಸು ದಾಖಲಿಸಿದ್ದಾರೆ. ಇವರ ಗೆಳೆಯ ಪ್ರಬಿರ್ ಕುಮಾರ್ ಡೆ ಮತ್ತು ಒಬ್ಬ ಸುರಕ್ಷಾ ಉದ್ಯೋಗಿಯನ್ನು ಕೂಡ ಬಂಧಿಸಲಾಗಿದೆ.

ಪಮೇಲಾ ಮಾದಕವಸ್ತುವನ್ನು ಇಟ್ಟುಕೊಂಡೇ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂಬ ರಹಸ್ಯ ವಿವರ ಪೊಲೀಸರಿಗೆ ಬಂದಿತ್ತು. ಆದ್ದರಿಂದ ಪೊಲೀಸರು ಕಾರನ್ನು ತಡೆದು ಸರ್ಚ್ ಮಾಡಿದ್ದರು. ಕೊಲ್ಕತಾದ ಅಲಿಪೊರ ಏರಿಯಾದ ಎನ್.ಆರ್ ಅವೆನ್ಯೂ ಸಮೀಪ ಕಾರನ್ನು ತಡೆದ ಪೊಲೀಸರು ಕಾರಿನಲ್ಲಿ ತಪಾಸಣೆ ಮಾಡಿದರು. ಪಮೇಲ ಬಂಧನದ ಕುರಿತು ಬಿಜೆಪಿ ನಾಯಕರು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.