ಬಿಜೆಪಿ ಸೇರಿದ ಬೆನ್ನಿಗೆ ಮಿಥುನ್ ಚಕ್ರವರ್ತಿಗೆ ವೈ ಪ್ಲಸ್ ಭದ್ರತೆ

0
481

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಿಗೆ ಮಿಥುನ್ ಚಕ್ರವರ್ತಿಗೆ ಕೇಂದ್ರ ಸರಕಾರ ವೈ ಪ್ಲಸ್ ವಿಐಪಿ ಭದ್ರತೆಯನ್ನು ಒದಗಿಸಿದೆ. ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್ ಸುರಕ್ಷೆಯ ಹೊಣೆಯನ್ನು ಹೊತ್ತಿದೆ. ಮಿಥುನ್ ಚಕ್ರವರ್ತಿಯ ಸುರಕ್ಷೆಗಾಗಿ ಅವರ ಮನೆ, ಪರಿಸರದಲ್ಲಿ ಭದ್ರತಾ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಪಶ್ಚಿಮ ಬಂಗಾಳದ ಪ್ರಚಾರ ಅಭಿಯಾನದಲ್ಲಿ ಮಿಥುನ್ ಚಕ್ರವರ್ತಿಯವರ ಜೊತೆಗೆ ಸುರಕ್ಷಾ ಆಧಿಕಾರಿಗಳು ಇರಲಿದ್ದಾರೆ. ಕೊಲ್ಕತಾದ ಬ್ರಿಗೆಡ್ ಪರೇಡ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯ ರ್ಯಾಲಿಯಲ್ಲಿ 70 ವರ್ಷದ ಮಿಥುನ್‍ ಚಕ್ರವರ್ತಿ ಬಿಜೆಪಿ ಸೇರ್ಪಡೆಯಾಗಿದ್ದರು.

ಮಿಥುನ್‍ರಿಗೆ ಬೆದರಿಕೆ ಇರುವುದರಿಂದ ವೈ ಪ್ಲಸ್ ಭದ್ರತೆ ನೀಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಿಂದ ಎಪ್ರಿಲ್ 29ರ ವರೆಗೆ ಎಂಟು ಹಂತದ ಚುನಾವಣೆ ನಡೆಯಲಿದೆ. ಝಾರ್ಕಂಡಿನ ಬಿಜೆಪಿ ಸಂಸದ ನಿಶಾಕಾಂತ್ ದುಬೆಯವರಿಗೂ ಕಮೆಂಡೊ ಸುರಕ್ಷೆ ನೀಡಲಾಗಿತ್ತು. ಇದರೊಂದಿಗೆ ದೇಶದಲ್ಲಿ ಸಿಐಎಸ್‍ಎಫ್ ಸುರಕ್ಷೆ ಲಭಿಸುವ ವಿಐಪಿಗಳ ಸಂಖ್ಯೆ 104 ಆಗಿದೆ. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಸುರಕ್ಷಾ ಸಲಹೆಗಾರ ಅಜಿತ್ ಡೋವಲ್‍ರಿಗೂ ವೈಪ್ಲಸ್ ಸುರಕ್ಷೆ ನೀಡಲಾಗಿದೆ.