ಆಗ್ರಾ: ಟ್ರಕ್- ಕಾರ್ ನಡುವೆ ಭೀಕರ ಅಪಘಾತ; 8 ಮಂದಿ ಸ್ಥಳದಲ್ಲೇ ಮೃತ್ಯು, ನಾಲ್ವರು ಗಂಭೀರ

0
502

ಸನ್ಮಾರ್ಗ ವಾರ್ತೆ

ಆಗ್ರಾ(ಉತ್ತರ ಪ್ರದೇಶ): ಗುರುವಾರ ಬೆಳಗ್ಗೆ ಟ್ರಕ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಜನರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆಯು ಆಗ್ರಾದ ಎತ್ಮದೌಲ ಪ್ರದೇಶದಲ್ಲಿ ಸಂಭವಿಸಿದೆ. ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗಾಲ್ಯಾಂಡ್‌ನಿಂದ ಬರುತ್ತಿದ್ದ ಟ್ರಕ್ ಮತ್ತು ಜಾರ್ಖಂಡ್‌ನ ದಾಖಲಾತಿ ಸಂಖ್ಯೆ ಹೊಂದಿರುವ ಕಾರ್‌ನ ಮಧ್ಯೆ ಢಿಕ್ಕಿ ಸಂಭವಿಸಿದೆ ಎಂದು ಬೊಟ್ರೆ ಸಿಟಿ ಎಸ್ಪಿ ರೋಹನ್ ಪ್ರಮೋದ್ ತಿಳಿಸಿದ್ದಾರೆ.