ಮೋದಿ ಭೇಟಿಗೆ ಹೊರಟ ಮಮತಾ ಬ್ಯಾನರ್ಜಿಗೆ ಯಶೋದಾ ಬೆನ್‌ರ ಅನಿರೀಕ್ಷಿತ ಭೇಟಿ

0
681

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.19: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ದೆಹಲಿಗೆ ಹೊರಟಿದ್ದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಮುಂದೆ ಮೋದಿಯವರ ಪತ್ನಿ ಯಶೋದಾ ಬೆನ್ ಅನಿರೀಕ್ಷಿತ ಅತಿಥಿಯಾದರು. ಮಂಗಳವಾರ ರಾತ್ರೆ ಕೊಲ್ಕತಾ ವಿಮಾನ ನಿಲ್ದಾಣಲ್ಲಿ ಇಬ್ಬರ ಭೇಟಿ ನಡೆಯಿತು.

ಝಾರ್ಕಂಡಿನ ಧನ್‍ಬಾದ್‍ಗೆ ಎರಡು ದಿವಸದ ಸಂದರ್ಶನ ನಡೆಸಿ ಗುಜರಾತಿಗೆ ಮರಳುವ ವೇಳೆ ಕೊಲ್ಕತಾ ವಿಮಾನ ನಿಲ್ದಾಣದಲ್ಲಿ ಯಶೋದಾ ಬೆನ್ ಅನಿರೀಕ್ಷಿತವಾಗಿ ಮಮತಾ ಬ್ಯಾನರ್ಜಿಯವನ್ನು ಭೇಟಿಯಾಗಿದ್ದಾರೆ. ಬಹಳ ಹೊತ್ತು ಇಬ್ಬರೂ ಮತಾಡಿ ಹೊರಟು ಹೋದರು. ಭೇಟಿಯ ವೇಳೆ ಮಮತಾ ಬ್ಯಾನರ್ಜಿ ಬೆನ್‌ರವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದರು. ಪತ್ರಕರ್ತ ಇಂದ್ರಜಿತ್, ಭೇಟಿಯ ಚಿತ್ರವನ್ನು ಟ್ವೀಟ್ ಮಾಡಿದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರ ಭೇಟಿ ಹೆಚ್ಚು ಪ್ರಚಾರ ಪಡೆದುಕೊಂಡಿದೆ.