ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 18: ಧಾರ್ಮಿಕ ಸಮ್ಮೇಳನವನ್ನು ಸರಕಾರಿ ಮಾರ್ಗಸೂಚಿಯನ್ನು ಪಾಲಿಸದೆ ನಡೆಸಲಾಗಿದೆ ಎಂಬ ಪ್ರಕರಣದಲ್ಲಿ ದಿಲ್ಲಿ ಪೊಲೀಸರಿಗೆ ಸಹಕರಿಸಲು ಸಿದ್ಧ ಎಂದು ತಬ್ಲೀಗ್ ಜಮಾಅತ್ ನಾಯಕ ಮೌಲಾನ ಮುಹಮ್ಮದ್ ಸಅದ್ ಕಾಂದಲವಿ ತಿಳಿಸಿದ್ದಾರೆ.
ಮರ್ಕಝ್ ನಿಝಾಮುದ್ದೀನ್ನಲ್ಲಿ ನಡೆದ ತಬ್ಲೀಗ್ ಸಮ್ಮೇಳನದಲ್ಲಿ ಭಾಗವಹಿಸಿದ್ದವರಿಗೆ ಕೊರೊನಾ ತಗುಲಿತ್ತು. ಇವರಲ್ಲಿ ಕೆಲವರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಕಾಂದಲವಿ ವಿರುದ್ಧ ಉದ್ದೇಶಪೂರ್ವಕ ಅಲ್ಲದ ಕೊಲೆ ಪ್ರಕರಣ ದಾಖಲಿಸಿದ್ದಾರೆ. ತಾನು ಪೊಲೀಸ್ ತನಿಖೆಗೆ ಸಹಕರಿಸುವುದಾಗಿ ಮೌಲಾನ ಅಪರಾಧ ಪತ್ತೆ ದಳಕ್ಕೆ ಪತ್ರ ಬರಿದಿದ್ದಾರೆ. ಎಪ್ರಿಲ್ ಒಂದು, ಎರಡರಂದು ಪೊಲೀಸರು ಕಳುಹಿಸಿದ ಪತ್ರಗಳಿಗೆ ಉತ್ತರಿಸಲಾಗಿದೆ. ಪೊಲೀಸರಿಗೆ ಯಾವ ರೀತಿಯ ಸಹಕಾರವನು ಕೊಡಲೂ ತಾನು ಸಿದ್ಧ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ತಾನು ಕೊರೊಂಟೈನ್ನಲ್ಲಿದ್ದು ಅವಧಿ ಮುಗಿದ ಕೂಡಲೇ ತನಿಖೆಗೆ ಸಿದ್ಧನಿರುವೆ ಎಂದು ಈ ಹಿಂದೆ ಅವರು ತಿಳಿಸಿದ್ದರು. ಆದರೆ, ಕೊರೊಂಟೈನ್ ಅವಧಿ ಮುಗಿದ ಕೂಡಲೇ ಇವರು ಮನೆ ಬದಲಾಯಿಸಿದ್ದರು..
ನಿಝಾಮುದ್ದೀನ್ ಪೊಲೀಸ್ ಠಾಣೆಯ ಹೌಸ್ ಆಫೀಸರ್ ದೂರಿನ ಮೇರೆಗೆ ಅಪರಾಧ ಪತ್ತೆ ವಿಭಾಗ ಅವರ ವಿರುದ್ಧ ಕೇಸು ದಾಖಲಿಸಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












