ಮರ್ಹೂಮ್ ನೌಶಾದ್ ಹಾಜಿ ಸೂರಲ್ಪಾಡಿ,  ಅಬ್ದುಲ್‌ ‌ರಝಾಕ್‌ ಕಳಾಯಿ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

0
166

ವಿಭಿನ್ನ ಗಣರಾಜ್ಯೋತ್ಸವಕ್ಕೆ ಸಾಕ್ಷಿಯಾದ ಕುಪ್ಪೆಪದವು

ಸನ್ಮಾರ್ಗ ವಾರ್ತೆ

ಮಂಗಳೂರು: ಮಂಗಳೂರು ನಗರ ಹೊರವಲಯದ ಕುಪ್ಪೆಪದವಿನಲ್ಲಿ ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಸಮಾಜ ಸೇವೆಯ ಮೂಲಕ ಆಚರಿಸಲಾಯಿತು. ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕುಪ್ಪೆಪದವು, ಸಹಬಾಳ್ವೆ ಕರ್ನಾಟಕ ಹಾಗೂ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಸಹಯೋಗದಲ್ಲಿ ಗಣರಾಜ್ಯೋತ್ಸವವದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಮರ್ಹೂಮ್ ನೌಶಾದ್ ಹಾಜಿ ಸೂರಲ್ಪಾಡಿ, ಅಬ್ದುಲ್ ರಝಾಕ್ ಕಳಾಯಿ ಸ್ಮರಣಾರ್ಥ ಕುಪ್ಪೆಪದವಿನಲ್ಲಿರುವ ಹಮ್ದ್ ಸೆಂಟರ್ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ನೂರಾರು ಮಂದಿ ರಕ್ತದಾನ ಮಾಡಿದರು.

ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ರಫೀಕ್ ಮಾಸ್ಟರ್ ಭಾಗವಹಿಸಿ ಆಶಯ ಭಾಷಣ ಮಾಡಿದರು. ಫಾ.ಗ್ರೇಶನ್ ಆಲ್ವಾರಿಸ್ ರಕ್ತದಾನ ಶಿಬಿರದ ಮಹತ್ವದ ಬಗ್ಗೆ ಮಾರ್ಮಿಕ ನುಡಿಗಳನಾಡಿದರು. ಯುವ ರೈತ ಸಂಘದ ನಾಯಕ ಆದಿತ್ಯ ಎನ್ ಕೊಲ್ಲಾಜೆ, ಮೂಳೆ ಚಿಕಿತ್ಸಕ ಡಾ.ಹಾಶಿರ್ ಸಫ್ವಾನ್, ಯುವ ಮುಖಂಡ ಆಸಿಫ್ ಆದರ್ಶ, ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಳೀಯ ಡಿ.ಪಿ.ಹಮ್ಮಬ್ಬ, ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಬಳ್ಳಾಜೆ, ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಸರ್ಫರಾಝ್ ಎಡ್ವಕೇಟ್, ಜಮಾಅತೆ ಇಸ್ಲಾಮಿ ಹಿಂದ್ ದ.ಕ.ಜಿಲ್ಲೆ ಸಂಚಾಲಕ ಅಮೀನ್ ಅಹ್ಸನ್, ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ನಗರ ಕಾರ್ಯದರ್ಶಿ ಇಸ್ಹಾಕ್ ಪುತ್ತೂರು, ಸಾಲಿಡಾರಿಟಿ ಜಿಲ್ಲಾ ಸಂಚಾಲಕ ತಫ್ಲೀಲ್ ಉಪ್ಪಿನಂಗಡಿ, ಸಾಲಿಡಾರಿಟಿ ಕುಪ್ಪೆಪದವು ಸಂಚಾಲಕ ಮುಹಮ್ಮದ್ ಶಫೀಕ್ ಮತ್ತಿತರರು ಇದ್ದರು. ಮುನೀರ ಕಲ್ಲಾಡಿ ಪ್ರಸ್ತಾವಿಕವಾಗಿ ಮಾತನಾಡಿದರು.