3 ದಿವಸದ ಕಾರ್ಯಾಚರಣೆಯಲ್ಲಿ ಅವರಿಗೆ ಸಿಕ್ಕಿದು ಮೂರೇ ವಿಷಯ: ಐಟಿ ದಾಳಿಯನ್ನು ತಮಾಷೆ ಮಾಡಿದ ತಾಪ್ಸಿ ಪನ್ನು

0
1131

ಸನ್ಮಾರ್ಗ ವಾರ್ತೆ

ಮುಂಬೈ: ಮೂರು ದಿನಗಳ ಆದಾಯ ತೆರಿಗೆ ದಾಳಿಯ ಕುರಿತು ಬಾಲಿವುಡ್ ನಟಿ ತಾಪ್ಸಿ ಪನ್ನು ವ್ಯಂಗವಾಡಿದ್ದು, ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನುರ ಕಚೇರಿಗೆ ಆದಾಯ ತೆರಿಗೆ ದಾಳಿ ನಡೆದಿತ್ತು. ಮೂರು ದಿನಗಳ ಶೋಧದಲ್ಲಿ ಮೂರು ವಿಷಯಗಳನ್ನು ಪತ್ತೆ ಮಾಡಲು ಅವರಿಗೆ ಸಾಧ್ಯವಾಗಿದೆ. ಒಂದು ಪ್ಯಾರಿಸಿನಲ್ಲಿ ನಾನು ಸಂಪಾದಿಸಿದ್ದೇನೆ ಎನ್ನುವ ಆರೋಪಕ್ಕೆ ಗುರಿಯಾದ ಬಂಗಲೆಗಳು, ಕಾರಣ ಬೇಸಿಗೆ ರಜಾ ದಿನಗಳು ಹತ್ತಿರವಾಗುತ್ತಿವೆಯಲ್ಲ 2. ಆರೋಪಿಸಲ್ಪಟ್ಟ ಐದು ಕೋಟಿ ರೂ. ರಶೀದಿಗಳು, ಈ ಹಿಂದೆ ಇವನ್ನು ನಿರ್ಲಕ್ಷಿಸಿ ನಾನು ಭವಿಷ್ಯಕ್ಕಾಗಿ ತೆಗೆದಿಟ್ಟಿದ್ದೆ. 3. 2013ರ ದಾಳಿಯ ನೆನಪು. ಸನ್ಮಾನ್ಯ ಕೇಂದ್ರ ಗೃಹ ಸಚಿವ ಅದನ್ನು ನೆನಪಿಸಿದರು.

ಅಂದರೆ ನನಗೆ ಪ್ಯಾರಿಸಿನಲ್ಲಿ ಬಂಗಲೆ ಇಲ್ಲ. ಐದು ಕೋಟಿಯ ರಶೀದಿ ಇಲ್ಲ. 2013ರಲ್ಲಿ ದಾಳಿ ನಡೆದಿಲ್ಲ ಎನ್ನುವುದು ತಾಪ್ಸಿಯವರ ಮಾತುಗಳಲ್ಲಿ ವ್ಯಕ್ತವಾಗಿದೆ. ಮೂರು ದಿನಗಳ ಶೋಧದ ಬಳಿಕ ತಾಪ್ಸಿ ಪನ್ನು ಪ್ರತಿಕ್ರಿಯೆ ನೀಡಿದ್ದಾರೆ. ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪದ ನಂತರ ತಾಪ್ಸಿ ಮತ್ತು ಅನುರಾಗ್ ಮನೆಗಳಿಗೆ ಮತ್ತು ಕಚೇರಿಗೆ ದಾಳಿ ನಡೆದಿತ್ತು. ಕೇಂದ್ರ ಸರಕಾರದ ತಪ್ಪು ನೀತಿಯ ವಿರುದ್ಧ ಇಬ್ಬರು ಧ್ವನಿಯೆತ್ತುತ್ತಿದ್ದಾರೆ. ಇದಕ್ಕಾಗಿ ಆದಾಯ ತೆರಿಗೆಯ ಪ್ರತೀಕಾರ ಕ್ರಮ ಎಂದು ಐಟಿ ದಾಳಿಯ ವಿರುದ್ಧ ಪ್ರತಿಕ್ರಿಯೆಗಳು ಕೇಳಿ ಬಂದಿದ್ದವು. ಇದಕ್ಕೆ ಉತ್ತರವೆಂಬಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2013ರಲ್ಲಿ ಕೂಡ ಈ ವ್ಯಕ್ತಿಗಳ ಮನೆಗಳಿಗೆ ಐಟಿ ದಾಳಿ ನಡೆದಿವೆ ಎಂದು ಉತ್ತರಿಸಿದ್ದರು.