ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ: ರಕ್ತದ ಮಡುವಿನಲ್ಲಿದ್ದ ಅಜ್ಜನ ಮೃತದೇಹ ಬಳಿ ಅಳುತ್ತಾ ಕುಳಿತ 3 ವರ್ಷದ ಮಗು; ‘ಸುರಕ್ಷಿತವಾಗಿದೆ’ ಎಂದ ಕಾಶ್ಮೀರ ಪೊಲೀಸ್

0
478

ಸನ್ಮಾರ್ಗ ವಾರ್ತೆ

ಸೋಪೋರ್,ಜು.1: ಸಿಆರ್‌ಪಿ‌ಎಫ್ ಮತ್ತು ಭಯೋತ್ಪಾದಕರ ನಡುವಿನ ಘರ್ಷಣೆಯಲ್ಲಿ ಕರುಳು ಹಿಂಡುವ ಸಾಕ್ಷ್ಯವೊಂದು ಜಮ್ಮು ಕಾಶ್ಮೀರದಿಂದ ವರದಿಯಾಗಿದೆ. ಗುಂಡು ಹಾರಾಟದಲ್ಲಿ ಕೊಲ್ಲಲ್ಪಟ್ಟಿದ್ದ ಅಜ್ಜನ ಬಳಿ ಕುಳಿತು ಹೆದರಿ ನಡುಗಿದ ಮೂರು ವರ್ಷದ ಬಾಲಕನ ಚಿತ್ರ ವೈರಲ್ ಆಗಿದೆ.

ಸ್ಥಳೀಯರೊಬ್ಬರು ಇದನ್ನು ಪೋಸ್ಟ್ ಮಾಡಿದ್ದು, ಶ್ರೀನಗರದಿಂದ 50 ಕಿಲೊ ಮೀಟರ್ ದೂರದ ಬರಮುಲ್ಲ ಜಿಲ್ಲೆಯ ಸೋಪೊರ್‌ನಲ್ಲಿ ‌ಭಯೋತ್ಪಾದಕರು ಮತ್ತು ಸಿಆತ್‌ಪಿಎಫ್ ನಡುವೆ ಕಾಳಗ ನಡೆದಿತ್ತು.

ಸೇನೆಯ ಪಟ್ರೋಲಿಂಗ್ ತಂಡದ ಮೇಲೆ ಭಯೋತ್ಪಾದಕರು ದಾಳಿ ಮಾಡಿದಾಗ ಓರ್ವ ಯೋಧ ಮತ್ತು ಒಬ್ಬ ನಾಗರಿಕರು ಮೃತಪಟ್ಟಿದ್ದರು. ಅಜ್ಜನೊಂದಿಗೆ ಮಗು ಕಾರಿನಲ್ಲಿ ಹೋಗುತ್ತಿತ್ತು. ಶ್ರೀನಗರದಿಂದ ಹಾಂಗ್‍ವಾರಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.

ಸೋಪೊರ್ ನಗರಕ್ಕೆ ಬಂದಾಗ ಭಯೋತ್ಪಾದಕರ ಗುಂಡು ಹಾರಾಟ ನಡೆದಿತ್ತು ದಾಳಿಯಲ್ಲಿ ಅಜ್ಜ ಕೊಲೆಯಾಗಿದ್ದರು. ಕಾರಿನಿಂದ ಹೊರ ಬಂದು ಓಡಿಹೋಗಲು

ಯತ್ನಿಸಿದಾಗ ಇವರು ಗುಂಡಿಗಾಹುತಿಯಾಗಿದ್ದರು. ಈ ವೇಳೆ ಮಗು ಮೃತದೇಹದ ಬಳಿ ಬಂದಿತ್ತು.

ಮಗುವನ್ನು ರಕ್ಷಿಸಿದ್ದೇವೆ. ಅದು ಗಾಯಗೊಂಡಿಲ್ಲ ಎಂದು ಕಾಶ್ಮೀರ ಪೊಲೀಸ್ ಅಧಿಕೃತ ಟ್ವೀಟ್ ಮಾಡಿದೆ ಹಾಗೂ ಮಗುವಿನ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ. ದಾಳಿ ಮಾಡಿದ ಭಯೋತ್ಪಾದಕರನ್ನು ಇನ್ನೂ ಹಿಡಿಯಲು ಸಾಧ್ಯವಾಗಿಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.