ಭೋಪಾಲ,ಮೇ 11: ಭೋಪಾಲದ ಅವಧ್ಪುರದಲ್ಲಿ ಆರು ವರ್ಷದ ಬಾಲಕನನ್ನು ತಾಯಿಯ ಮುಂದೆಯೇ ಬೀದಿನಾಯಿಗಳು ಕಚ್ಚಿ ಕೊಂದು ಹಾಕಿವೆ. ಶಿವ ಸಂಗ್ರಾಂ ನಗರದಲ್ಲಿನ ಬಾಲಕನ ಮನೆಯ ಸಮೀಪ ಘಟನೆ ನಡೆದಿದೆ. ಬಾಲಕನನ್ನು ರಕ್ಷಿಸಲು ತಾಯಿ ಶ್ರಮಿಸಿದರೂ ಯಶಸ್ವಿಯಾಗಲಿಲ್ಲ.
ಬಾಲಕನ ತಾಯಿ ಶಸ್ತ್ರಕ್ರಿಯೆ ನಡೆದು ವಿಶ್ರಾಂತಿ ಪಡೆಯುತ್ತಿದ್ದರು. ತಂದೆ ಬಂದು ಮಗುವೆಲ್ಲಿ ಎಂದು ಕೇಳಿದಾಗ ಬಾಲಕನನ್ನು ನಾಯಿಗಳು ಕಚ್ಚುವುದು ಕಂಡು ಬಂದಿದೆ. ಕೂಡಲೆ ಅವರು ನರೆಮನೆಯವರ ಸಹಾಯವನ್ನು ಕೇಳಿದರು. ನಾಯಿಯಗಳನ್ನು ಓಡಿಸಿ ಮಗುವನ್ನು ರಕ್ಷಿಸುವಷ್ಟರಲ್ಲಿ ಮಗು ಮೃತಪಟ್ಟಿತು. ಘಟನೆಯ ನಂತರ ನಗರಸಭೆಯ ವಿರುದ್ಧ ಸ್ಥಳೀಯರು ಪತಿಭಟನೆ ನಡೆಸಿದ್ದಾರೆ. ಬೀದಿನಾಯಿಗಳು ಕ್ರಮಾತೀತವಾಗಿ ಹೆಚ್ಚಿದರೂ ನಗರಸಭೆ ಅದರ ನಿಗ್ರಹಕ್ಕೆ ಪ್ರಯತ್ನಿಸಿಲ್ಲ ಎಂದು ಊರವರು ಆರೋಪಿಸಿದ್ದಾರೆ.












