ಅಂಬೇಡ್ಕರ್‌ರ ಅನುಯಾಯಿಗಳು ಬೌದ್ಧಿಕ ಭಯೋತ್ಪಾದಕರು ಎಂದ ಬಾಬಾ ರಾಮ್‍ದೇವ್: ಪತಂಜಲಿ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ, ಟ್ವಿಟರ್‌ನಲ್ಲಿ‌ ಟ್ರೆಂಡಿಂಗ್

0
3782

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜ.6: ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಪೆರಿಯಾರ್ ಇ.ವಿ. ರಾಮಸ್ವಾಮಿ ಅನುಯಾಯಿಗಳ ಕುರಿತು ಬಾಬಾ ರಾಮ್‍ದೇವ್ ನೀಡಿದ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ. ನವೆಂಬರಿನಲ್ಲಿ ಒಂದು ಸಂದರ್ಶನದಲ್ಲಿ ಇಬ್ಬರ ಅನುಯಾಯಿಗಳನ್ನು ಬೌದ್ಧಿಕ ಭಯೋತ್ಪಾದಕರು ಎಂದು ರಾಮ್‍ದೇವ್ ಹೇಳಿದ್ದರು. ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಟ್ವಿಟರ್‌ನಲ್ಲಿ ಪತಂಜಲಿ ಬಹಿಷ್ಕಾರದ ಕರೆ ಟ್ರೆಂಡ್ ಆಗಿ ಕಾಣಿಸಿಕೊಂಡಿದೆ.

ದಿ ಆಲ್ ಇಂಡಿಯಾ ಅಂಬೇಡ್ಕರ್ ಮಹಾಸಭಾ, ಆಲ್ ಇಂಡಿಯಾ ಬ್ಯಾಕ್‍ವರ್ಡ್ ಆಂಡ್ ಮೈನಾರಿಟಿ ಕಮ್ಯುನಿಟೀಸ್ ಎಂಪ್ಲಾಯೀಸ್ ಫೆಡರೇಶನ್, ಭೀಮ್ ಆರ್ಮಿಯು ರಾಮ್‍ದೇವ್ ಹೇಳಿಕೆಯ ವಿರುದ್ಧ ರಂಗ ಪ್ರವೇಶಿಸಿದೆ. ರಾಮ್‍ದೇವ್ ಜಾತಿ ವ್ಯವಸ್ಥೆಯನ್ನು ವೈಭವೀಕರಿಸಿಸುವ ಮನುಸ್ಮೃತಿ ಪ್ರಚಾರಕ ಎಂದು ಇವರು ಆರೋಪಿಸಿದ್ದಾರೆ.

ಜೊತೆಗೆ ಲೆನಿನ್, ಮಾರ್ಕ್ಸ್, ಮಾವೋರ ಚಿಂತನೆಗಳು ಭಾರತ ವಿರೋಧಿಯಾಗಿದೆ ಎಂದೂ ರಾಮ್ ದೇವ್ ಸಂದರ್ಶನದಲ್ಲಿ ಹೇಳಿದ್ದರು.