ಅಮೆರಿಕದ ನಂತರ, ಬ್ರೆಜಿಲ್‌ನಲ್ಲಿ ಪೊಲೀಸ್ ಕ್ರೌರ್ಯ: ಕಪ್ಪು ವರ್ಣೀಯ ಮಹಿಳೆಯ ಕುತ್ತಿಗೆಯ ಮೇಲೆ ನಿಂತ ಪೊಲೀಸ್ ಅಧಿಕಾರಿ- ವಿಡಿಯೋ

0
823

ಸನ್ಮಾರ್ಗ ವಾರ್ತೆ

ರಿಯೋ ಡಿ ಜನೈರೊ,ಜು.15: ಬ್ರೆಜಿಲ್‌ನ ಸಾವೊ ಪಾಲೊದಲ್ಲಿ 51 ವರ್ಷದ ಕಪ್ಪು ವರ್ಣೀಯ ಮಹಿಳೆಯ ಕುತ್ತಿಗೆಯ ಮೇಲೆ ಪೊಲೀಸ್ ನಿಂತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಮಹಿಳೆ ಕುತ್ತಿಗೆ ಮುರಿದು 16 ಹೊಲಿಗೆಗಳನ್ನು ಹಾಕಲಾಗಿದ್ದು, ಈ ಘಟನೆ ಮೇ 30 ರಂದು ನಡೆದಿದೆ ಎಂದು ವರದಿಯಾಗಿದೆ. ಪೀಡನೆಗೊಳಗಾದವರು 5 ಮಕ್ಕಳ ತಾಯಿ ಎಂದು ಗುರುತಿಸಲಾಗಿದ್ದು, ಜಗತ್ತಿನಾದ್ಯಂತ ವರ್ಣಭೇದ ನೀತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವಾ ಬ್ರೆಝಿಲ್‌ನ ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ‌. ಮೇ 25 ರಂದು, ಅಮೇರಿಕಾದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಪೊಲೀಸರ ಚಿತ್ರಹಿಂಸೆಯಿಂದಾಗಿ ಸಾವನ್ನಪ್ಪಿದ್ದರು.

ಘಟನೆಯ ವಿಡಿಯೋ ವೈರಲ್ ಆದ ನಂತರ ಸಾವೊ ಪಾಲೊ ಗವರ್ನರ್ ಜೊನೊ ಡೋರಿಯಾ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಹೇಳಿದರು. ತದನಂತರ 2 ಸಾವಿರ ಪೊಲೀಸರಿಗೆ ತಮ್ಮ ದೇಹದ ಮೇಲೆ ಕ್ಯಾಮೆರಾ ಧರಿಸುವಂತೆ ರಾಜ್ಯಪಾಲರು ಆದೇಶಿಸಿದರು.

ಮೇ 25 ರಂದು ಅಮೆರಿಕದ ಮಿನ್ನಿಯಾಪೋಲಿಸ್‌ನ ಪೊಲೀಸರು ಜಾರ್ಜ್ ಫ್ಲಾಯ್ಡ್‌ನನ್ನು ಆಫ್ರಿಕನ್-ಅಮೆರಿಕನ್ನರ ಕಿರಾಣಿ ಅಂಗಡಿಯಲ್ಲಿ ವಂಚನೆ ಆರೋಪದ ಮೇಲೆ ಬಂಧಿಸಿದ್ದರು. ಈ ಸಮಯದಲ್ಲಿ, ಪೊಲೀಸ್ ಅಧಿಕಾರಿ ಡೆರೆಕ್ ಚೌವೆನ್ ಜಾರ್ಜ್ ಫ್ಲಾಯ್ಡ್‌‌ಗೆ ಕೈಕೋಳ ತೊಡಿಸಿದ್ದರು. ನೆಲದ ಮೇಲೆ ಮಲಗಿದ್ದ ಅವರ ಮೇಲೆ 8 ನಿಮಿಷ 46 ಸೆಕೆಂಡುಗಳ ಕಾಲ ಮೊಣಕಾಲಿನಿಂದ ಕುತ್ತಿಗೆಯನ್ನು ಅದುಮಿದ್ದರು. ಇದರಿಂದಾಗಿ ಜಾರ್ಜ್ ಉಸಿರಾಡಲಾಗದೇ ನೀವು ನನ್ನನ್ನು ಕೊಲ್ಲುತ್ತಿದ್ದೀರ.. ನನಗೆ ಉಸಿರಾಡಲು ಆಗುತ್ತಿಲ್ಲ ಎನ್ನುತ್ತಲೇ ಪ್ರಾಣ ಬಿಟ್ಟಿದ್ದರು. ಈ ಘಟನೆಯ ವಿಡಿಯೋ ವೈರಲ್ ಆದ ಕೂಡಲೇ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆದವು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಬಗ್ಗೆ ಟೀಕೆಗಳನ್ನು ಎದುರಿಸಬೇಕಾಯಿತು ಅಲ್ಲದೇ ಅಮೇರಿಕಾದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.