ಪೌರತ್ವ ಪಟ್ಟಿಯಲ್ಲಿ ಲೋಪ; ಬಿಎಸ್‍ಎಫ್ ಜವಾನ, ಪತ್ನಿ ವಿದೇಶಿಗಳು- ಟ್ರಿಬ್ಯೂನಲ್

0
580

ಸನ್ಮಾರ್ಗ ವಾರ್ತೆ

ಗುವಾಹಟಿ,ಆ.24: ಅಸ್ಸಾಮಿನ ಪಂಜಾಬ್ ಗಡಿ ಭದ್ರತಾ ಸೇನೆ(ಬಿಎಸ್‍ಎಫ್)ಯ ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ಮತ್ತು ಆತನ ಪತ್ನಿ ವಿದೇಶಿಗಳೆಂದು ಟ್ರಿಬ್ಯೂನಲ್‍ ಹೇಳಿದೆ. ಜೊರ್ಹತ್ ಜಿಲ್ಲೆಯಲ್ಲಿ ನಡೆದ ಫಾರಿನರ್ಸ್ ಟ್ರಿಬ್ಯೂನಲ್ ಪಂಜಾಬ್‍ನಲ್ಲಿ ಕೆಲಸ ಮಾಡುತ್ತಿರುವ ಸಬ್ ಇನ್ಸ್‍ಪೆಕ್ಟರ್ ಮುಸೀಬುರ್ರಹ್ಮಾನ್ ಮತ್ತು ಪತ್ನಿಯನ್ನು ವಿದೇಶಿ ಎಂದು ಘೋಷಿಸಿದೆ. ಇದೇ ವೇಳೆ, ಮುಸಿಬ್‍ರ ತಂದೆ-ತಾಯಿ,ಸಂಬಂಧಿಕರು ಭಾರತೀಯ ಪ್ರಜೆಗಳ ಪಟ್ಟಿಯಲ್ಲಿದ್ದಾರೆ. ಮೂವತ್ತೈದು ರ್ಷ ಬಿಎಸ್‍ಎಫ್‍ನಲ್ಲಿ ಕೆಲಸಮಾಡುತ್ತಿರುವ ಮುಸೀಬುರ್ರಹ್ಮಾನ್ ಕಳೆದ ತಿಂಗಳು ರಜೆಯಲ್ಲಿ ಊರಿಗೆ ಬಂದಾಗ ವಿವರ ತಿಳಿದು ಬಂದಿದೆ.

“ಜುಲೈ 29ಕ್ಕೆ ಗ್ರಾಮದ ಮುಖ್ಯಸ್ಥ ವಿವರ ನೀಡಿದ್ದಾರೆ. ಇದು ಹೇಗಾಯಿತು ಎಂದು ಗೊತ್ತಿಲ್ಲ. ಸಮಸ್ಯೆ ಪರಿಹರಿಸಲು ಸರಕಾರಕ್ಕೆ ಮನವಿ ಮಾಡಿದ್ದೇನೆ” ಎಂದು ಮುಸೀಬುರ್ರಹ್ಮಾನ್ ತಂದೆ ರಹ್ಮಾನ್ ಹೇಳಿದರು. 1923ರ ರೆವೆನ್ಯೂ ದಾಖಲೆಗಳು ನಮ್ಮ ಬಳಿಯಿವೆ. ಟ್ರಿಬ್ಯೂನಲ್‍ನ ತೀರ್ಮಾನ ಸಂಬಂಧಿಸಿ ಅಧಿಕೃತಪತ್ರ ಸಿಕ್ಕಿಲ್ಲ. ಏನಿದ್ದರೂ ಪೌರತ್ವ ಪಟ್ಟಿಯಲ್ಲಿ ನೈಜ ಭಾರತೀಯರನ್ನು ಪೀಡಿಸುವುದು ಸರಿಯಲ್ಲ ಎಂದು ಅವರು ಹೇಳಿದರು. ಆಗಸ್ಟ್ 31ಕ್ಕೆ ರಾಷ್ಟ್ರೀಯ ಪೌರತ್ವ ಪಟ್ಟಿಯ ಅಂತಿಮ ಪಟ್ಟಿ ಬರಲಿದೆ. ಈ ಹಿಂದೆ ಕಾರ್ಗಿಲ್ ಯುದ್ಧದಲ್ಲಿ ಸೈನಿಕನಾಗಿದ್ದ ಮುಹಮ್ಮದ್ ಸನಾಉಲ್ಲಾ, ಸಿಐಎಸ್‍ಎಫ್ ಜವಾನ್ ಮಮೂದ್ ಅಲಿ ಭಾರತೀಯ ಪ್ರಜೆಗಳಲ್ಲ ಎಂದು ಫಾರಿನರ್ಸ್ ಟ್ರಿಬ್ಯೂನಲ್ ಘೋಷಿಸಿತ್ತು.