ಮಾರ್ಗ ಬದಲಿಸಿದ ಪಂಜಾಬ್ ಮೈಲ್: ಹೋರಾಟಕ್ಕೆ ಬರುವ ರೈತರನ್ನು ತಡೆಯಲು – ಆರೋಪ

0
321

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪಂಜಾಬಿನಿಂದ ದಿಲ್ಲಿ ದಾರಿಯಾಗಿ ಮುಂಬೈಗೆ ಬರುವ ಪಂಜಾಬ್ ಮೈಲ್ ರೈಲನ್ನು ಮುನ್ಸೂಚನೆ ನೀಡದೆ ಸೋಮವಾರ ಬೆಳಗ್ಗೆ ರೂಟ್ ಬದಲಾವಣೆ ಮಾಡಲಾಗಿದೆ. ದಿಲ್ಲಿಯ ರೈತ ಪ್ರತಿಭಟನೆಗೆ ಬರುವ ಸಾವಿರಾರು ರೈತರನ್ನು ತಡೆಯುವುದಕ್ಕೆ ಹೀಗೆ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ.

ರೈತರು ಬರುವುದನ್ನು ತಡೆಯಲು ಪಂಜಾಬಿನ ಫೀರೊಝ್ ಪುರದಿಂದ ಹೊರಡುವ ರೈಲು ರೊಹ್ಟಕ್ ನಿಂದ ದಿಲ್ಲಿಗೆ ಹೋಗಬೇಕಾಗಿತ್ತು. ಆದರೆ ರೈಲಿನ ಮಾರ್ಗವನ್ನು ಸೋಮವಾರ ಬದಲಾಯಿಸಲಾಗಿದೆ. ರೊಹ್ಟಕ್ ನಿಂದ ಹರಿಯಾಣದ ರಿವೊರಿ ಮೂಲಕ ಮುಂಬೈಗೆ ರೈಲು ಸಂಚರಿಸಿದೆ. ಈ ರೈಲು ರೊಹ್ಟಕ್‍ನಿಂದ ದಿಲ್ಲಿ ಪ್ರವೇಶಿಸುತ್ತಿತ್ತು.
ಇದೇ ವೇಳೆ ತಾಂತ್ರಿಕ ಕಾರಣಗಳಿಂದ ರೈಲು ಬೇರೆ ಮಾರ್ಗದಲ್ಲಿ ಸಂಚರಿಸಿದೆ ಎಂದು ಅಧಿಕಾರಿಗಳು ತಿಳಿಸಿದರು. ರೊಹ್ಟಕ್ ನ ಶಕುರ್‍ಬಸ್ತಿಯ ನಡುವೆ ಕೆಲವು ಉಪಕರಣಗಳು ದುರಸ್ತಿಯಾಗಬೇಕಿತ್ತು. ಆದ ಕಾರಣ ಮಾರ್ಗ ಬದಲಾವಣೆ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್, ದಿಲ್ಲಿಯ ರೈತ ಪ್ರತಿಭಟನೆಗೆ ಬರುವ ಸಾವಿರಾರು ರೈತರನ್ನು ತಡೆಯುವುದಕ್ಕೆ ಹೀಗೆ ಮಾಡಲಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಹೇಳಿದ್ದಾರೆ.