ಸೌದಿ ಸಿಬ್ಬಂದಿಯನ್ನು ಕಾರಿನೊಳಗೆ ಸುಟ್ಟು ಕೊಂದ ಆರೋಪಿಗೆ ಮರಣ ದಂಡನೆ ಶಿಕ್ಷೆ ಜಾರಿ

0
330

ಸನ್ಮಾರ್ಗ ವಾರ್ತೆ

ಜಿದ್ದ ಜೂ. 16: ಗಳೆಯನನ್ನು ಕಾರಿನೊಳಗೆ ಹಾಕಿ ಪೆಟ್ರೋಲ್ ಸುರಿದು ಸುಟ್ಟು ಕೊಂದ ಆರೋಪಿಗೆ ಮರಣದಂಡನೆ ಜಾರಿಗೊಳಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿತು. ಸೌದಿ ಏರ್‍ಲೈನ್ಸ್‍ನಲ್ಲಿ ಸಿಬ್ಬಂದಿಯಾಗಿದ್ದ ಬಂದರ್ಬಿನ್ ತಹ ಅಲ್ಲ ಕರ್‍ಹಾದಿಯನ್ನು ದಾರುಣವಾಗಿ ಕೊಲೆ ಮಾಡಿದ ಬರಕತ್ ಬಿನ್ ಜಿಬ್ರಲ್ ಅಲ್‍ಕನಾನಿಗೆ ಸುಪ್ರೀಂಕೋರ್ಟು ಮರಣದಂಡನೆ ತೀರ್ಪು ನೀಡಿತ್ತು.

ಕಳೆದ ವರ್ಷ ಡಿಸೆಂಬರ್ ಹತ್ತರಲ್ಲಿ 40ವರ್ಷದ ವ್ಯಕ್ತಿ ಇಬ್ಬರು ಮಕ್ಕಳ ತಂದೆ ಬಂದರ್ ಬಿನ್ ತಾಹ ಅಲ್ಲ ಕರಹಾದಿಯನ್ನು ಜಿಬ್ರಲ್ ಅಲ್‍ಕನಾನಿ ಕೊಂದಿದ್ದ. ಕಾರು ಕೂಟ ಸುಟ್ಟು ಕರಕಲಾಗಿತ್ತು. ಮಾದಕವಸ್ತು ಈತನಲ್ಲಿತ್ತು. ಈತ ಮಾದಕವಸ್ತು ಸೇವಿಸಿದ್ದ. ಯಾವ ತಪ್ಪಿಗೆ ನನ್ನಕೊಲೆ ಮಾಡುತ್ತಿರುವೆ ಎಂದು ಸಾಯುವ ಮೊದಲು ಬಂದರ್ ಲ ಕರ್‍ಆದಿ ಆರೋಪಿಯನ್ನು ಕೇಳುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿತ್ತು.

20 ವರ್ಷದಿಂದ ಸೌದಿ ಏರ್‍ಲೈನ್ಸ್‍ನಲ್ಲಿ ಕ್ಯಾಬಿನ್ ಕ್ರೂ ಆಗಿ ಕೆಲಸ ಮಾಡುತ್ತಿದ್ದ ಬಂದರ ಬಿನ್ ತಾಹ ಅಲ್ ಖರ್‍ಹಾದಿಯವರನ್ನು ಅವರ ಗೆಳೆಯ ಬರಕತ್ ಬಿನ್ ಜಿಬ್ರಿಲ್ ಯುಕ್ತಿಯಿಂದ ಕರೆಯಿಸಿಕೊಂಡು ಕರಿನೊಳಗೆ ಕೂಡಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಕೂಡಲೇ ಸುರಕ್ಷಾ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದರು.

ಮಗನ ಕೊಲೆಗಡುಕನಿಗೆ ಕ್ಷಮೆ ನೀಡಲಾರೆ, ಗರಿಷ್ಠ ಶಿಕ್ಷೆ ಸಿಗಬೇಕೆಂದು ತಂದೆ ತ್ವಾಹ ಅಲ್ ಕರದಾಹಿ ಅಂದೇ ಹೇಳಿದ್ದಾರೆ. ಮಗನ ಕೊಲೆಗಡುಕನಿಗೆ ಕೋಟು ವಿಧಿಸಿದ ಮರಣದಂಡನೆ ಜಾರಿಗೊಳಿಸಿದ್ದರಲ್ಲಿ ತ್ವಾಹ ಸಂತೋಷ ಮತ್ತು ತೃಪ್ತಿಯನ್ನು ಪ್ರಕಟಿಸಿದರು ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿತು.