✍️ ಅಬ್ದುಲ್ ಹಮೀದ್ ನದ್ವಿ
ವಿವಾಹವೆಂಬುದು ಇಸ್ಲಾಮಿನ ಸಂತುಲಿತ ಕುಟುಂಬದ ಅವಿಭಾಜ್ಯ ಘಟಕವಾಗಿದೆ. ಆಧುನಿಕ ಜಗತ್ತಿನಲ್ಲಿ ಪ್ರಗತಿಪರರೆನಿಸಿಕೊಂಡವರು ಮಹಿಳಾ ಸ್ವಾತಂತ್ರ್ಯದ ಹೆಸರಲ್ಲಿ ಅವರ ವೈಯಕ್ತಿಕ ಹಕ್ಕುಗಳ ಬಗ್ಗೆ ಮಾತನಾಡುವವರು ಈ ಕೆಳಗಿನ ಪ್ರಶ್ನೆಗಳನ್ನು ಕೇಳುವುದಿದೆ. ಅವು ಯಾವುದೆಂದರೆ ತಂದೆಯ/ವಲಿಯ್ಯ್ ಪೋಷಕರ) ಅನುಮತಿಯಿಲ್ಲದೆ ನಡೆಯುವ ವಿವಾಹವು ಸಾಧುವಾಗುವುದೇ? ಈ ವಿಚಾರದಲ್ಲಿ ಶರಈ (ಇಸ್ಲಾಮೀ ಕಾನೂನು) ಪ್ರಕಾರ ವಿಧಿ ಏನು? ಇದು ಕೇವಲ ಕರ್ಮಶಾಸ್ತçಪರವಾದ ವಿಚಾರವಲ್ಲ, ಬದಲಾಗಿ ಬುದ್ಧಿಪೂರ್ವಕ ಮಾಡುವ ವ್ಯವಹಾರವಾಗಿದೆ.
ಇಸ್ಲಾಮೀ ಕುಟುಂಬ ವ್ಯವಸ್ಥೆಯನ್ನು ಅದರ ಯಥಾರ್ಥ ಚೈತನ್ಯದಲ್ಲಿ ಅಂದರೆ ಕುರ್ಆನ್ ಮತ್ತು ಸುನ್ನತ್ನ ಬೆಳಕಿನ ದೃಷ್ಟಿಯಲ್ಲಿ ನೋಡುವಾಗ ಇದಕ್ಕೆ ಸ್ಪಷ್ಟವಾದ ನ್ಯಾಯಯುತವಾದ ಪಕ್ವತೆಯಿಂದ ಕೂಡಿದ ಉತ್ತರ ಲಭ್ಯವಾಗುತ್ತದೆ. ಇಸ್ಲಾಮ್ ನಿಕಾಹನ್ನು ಕೇವಲ ಈರ್ವರ ಪರಸ್ಪರ ಒಪ್ಪಿಗೆಯ ಭಾವನಾತ್ಮಕ ನಿರ್ಧಾರವಾಗಿ ಕಾಣದು. ಬದಲಾಗಿ ಅದನ್ನು ಸಂಪೂರ್ಣ ಜೀವನದ ಒಪ್ಪಂದವಾಗಿ, ಸಾಮಾಜಿಕ ಜವಾಬ್ದಾರಿಯ, ಕುಟುಂಬದ ಭದ್ರತೆಯ ತಳಹದಿಯಾಗಿ ಕಾಣುತ್ತದೆ. ಆದ್ದರಿಂದ ಪ್ರವಾದಿ ವರ್ಯರು(ಸ) ಆ ಕುರಿತು “ಲಾ ನಿಕಾಹ ಇಲ್ಲಾ ವಲಿಯ್ಯ್” (ಪೋಷಕ ರಿಲ್ಲದೆ ವಿವಾಹವಿಲ್ಲ) (ಅಬೂ ದಾವೂದ್; 2085) ಎಂದು ಹೇಳಿದ್ದಾರೆ. ಮತ್ತೊಂದು ಪ್ರವಾದಿ ವಚನದಲ್ಲಿ ಈ ರೀತಿ ಹೇಳಲಾಗಿದೆ- “ಯಾವುದೇ ಮಹಿಳೆಯ ಪೋಷಕರಿಲ್ಲದ ವಿವಾಹವು ಬಾತಿಲ್ (ಅಸಿಂಧು) ಆಗಿದೆ. ಬಾತಿಲ್ (ಅಸಿಂಧು) ಆಗಿದೆ. ಬಾತಿಲ್(ಅಸಿಂಧು) ಆಗಿದೆ” ಎಂದಿದ್ದಾರೆ.
(ತಿರ್ಮಿದಿ: 1102)
ಈ ಹದೀಸ್ ಕಾನೂನು ಪರವಾದ ವ್ಯವಸ್ಥೆ ಮಾತ್ರವಲ್ಲ ಇಸ್ಲಾಮೀ ಕುಟುಂಬ ವ್ಯವಸ್ಥೆಯ ತಳಹದಿಯ ಸ್ತಂಭ ಕೂಡಾ ಆಗಿದೆ. ಕುಟುಂಬದ ರಕ್ಷಕನ ಅನುಮತಿ ಎಂಬುದು ಹೆಣ್ಮಕ್ಕಳ ಭಾವನಾತ್ಮಕ ನಿರ್ಧಾರಗಳಿಂದ ಸಂರಕ್ಷಿ ಸುವ ಸಂರಕ್ಷಣಾ ಆಯುಧವಾಗಿದೆ. ಇದರ ಅರ್ಥ ಮಹಿಳೆಗೆ ಯಾವುದೇ ಅಧಿಕಾರವಿಲ್ಲವೆಂದಲ್ಲ. ಮತ್ತೊಂದೆಡೆ ಪ್ರವಾದಿವರ್ಯರು(ಸ) ಹೆಣ್ಮಕ್ಕಳ ಒಪ್ಪಿಗೆಯ ವ್ಯವಸ್ಥೆಯನ್ನೂ ಮಾಡಿದ್ದಾರೆ. ಪೋಷಕರು ಒತ್ತಾಯಪೂರ್ವಕವಾಗಿ ಮಾಡುವ ವಿವಾಹವನ್ನು ಇಸ್ಲಾಮ್ ಅಸಿಂಧು ಎಂದೂ ಪರಿಗಣಿಸಿದೆ. ಖನ್ಸಾ ಬಿಂತಿ ಖುದಾಮ್(ರ)ರ ಘಟನೆಯಲ್ಲಿ ಅವರ ತಂದೆಯು ಒಪ್ಪಿಗೆಯಿಲ್ಲದೆ ನಿಕಾಹ್ ಮಾಡಿದಾಗ ಪ್ರವಾದಿವರ್ಯರು(ಸ) ಆ ಸಂಬಂಧವನ್ನು ರದ್ದುಗೊಳಿಸಿದ್ದನ್ನು ಹದೀಸ್ಗಳಲ್ಲಿ ಕಾಣಬಹುದು. (ಬುಖಾರಿ: 5138)
ಅಂದರೆ ಇಸ್ಲಾಮಿನ ನಿಯಮವು ಬಹಳ ಸ್ಪಷ್ಟವಾಗಿದೆ. “ಪೋಷಕರು ಹೆಣ್ಮಕ್ಕಳ ಮೇಲೆ ಒತ್ತಡ ಹೇರಲು ಅವಕಾಶವಿಲ್ಲ. ಹಾಗೆಯೇ ಪೋಷಕರಿಂದ ಸಂಪೂರ್ಣ ಮುಕ್ತಳಾಗಿ ಸ್ವತಂತ್ರಳಾಗಿ ತಾನು ಸ್ವತಃ ವಿವಾಹ ಮಾಡಿಕೊಳ್ಳಲು ಅಧಿಕಾರವಿಲ್ಲ. ಇಸ್ಲಾಮ್ ಈ ಎರಡೂ ವ್ಯವಸ್ಥೆಗಳನ್ನು ಮಾಡಿದೆ. ಪೋಷಕರ ಅನುಮತಿ ಜೊತೆಗೆ ವಧುವಿನ ಒಪ್ಪಿಗೆ ಈ ಎರಡೂ ಪ್ರಮುಖ ತಳಹದಿಯನ್ನಾಗಿಸಿಕೊಂಡು ಭಾವನಾತ್ಮಕ, ವಿವೇಕಯುತವಾದ ಸಂತುಲಿತವಾದ ಸಂಯೋಜನೆಯಲ್ಲಿ ಇಸ್ಲಾಮೀ ವಿವಾಹ ನಿಂತಿದೆ.
ಹೀಗಿದ್ದರೂ ಹಲವು ಬಾರಿ ಈ ಒಂದು ಪ್ರಶ್ನೆಯನ್ನು ಕೇಳಿ ಬರುತ್ತಲೇ ಇದೆ. ಪೋಷಕ ಕೇವಲ ಧನ ಸಂಪತ್ತು, ಸಾಮಾಜಿಕ ಅಂತಸ್ತು ಗೌರವ ಅಹಂಭಾವ ಅಥವಾ ಅನಗತ್ಯವಾದ ಹಠಮಾರಿತನ ಮುಂತಾದವುಗಳ ಹೆಸರಲ್ಲಿ ಓರ್ವ ಅರ್ಹ, ಧಾರ್ಮಿಕ ಶ್ರದ್ಧೆಯಿರುವ ಓರ್ವ ವರನನ್ನು ತಿರಸ್ಕರಿಸುತ್ತಾನೆ ಎಂದಾದರೆ, ವಧುವಾಗುವವಳು ಯಾವಾಗಲೂ ಆ ವಲಿಯ್ಯ್(ಪೋಷಕ)ನ ಭಯದಲ್ಲಿ ಕಾಲ ಕಳೆಯಬೇಕೇ? ಇದಕ್ಕೆ ಇಲ್ಲ ಎನ್ನುವುದು ಸರಳ ಉತ್ತರವಾಗಿದೆ. ಇಸ್ಲಾಮ್ ಇಲ್ಲಿಯೂ ನ್ಯಾಯಯುತವಾದ ನಿರ್ಧಾರ ಕೈಗೊಳ್ಳುತ್ತದೆ. ಪೋಷಕನು ಅನ್ಯಾಯವಾಗಿ ತಡೆಯಾಗಿ ನಿಲ್ಲುತ್ತಾನೆ ಎಂದಾದರೆ ಇಸ್ಲಾಮೀ ಕಾನೂನು (ಶರಈ) ನಿಯಮವು ಖಾಝಿಯ (ನ್ಯಾಯಾಧೀಶರ) ಮೊರೆ ಹೋಗುವ ಅವಕಾಶವನ್ನು ನೀಡಿದೆ. ಈ ಬಗ್ಗೆ ಪ್ರವಾದಿವರ್ಯರು(ಸ) “ಮನ್ ಲಾ ವಲಿಯ್ಯ್ ಲಹು ಸ್ಸುಲ್ತಾನು ವಲಿಯ್ಯ್ (ಯಾರಿಗೆ ಪೋಷಕರಿಲ್ಲವೋ ಆತನ ರಕ್ಷಕ ಆಡಳಿತಗಾರನಾಗಿದ್ದಾನೆ) (ಅಬೂ ದಾವೂದ್: 2083) ಎಂದಿದ್ದಾರೆ.
ಇಮಾಮ್ ಅಹ್ಮದ್, ಇಮಾಮ್ ಶಾಫೀ, ಇಮಾಮ್ ಇಬ್ನು ತೀಮಿಯಾ, ಇಬ್ನುಲ್ ಖಯ್ಯಿಮ್, ಇಬ್ನು ಬಾಝ್, ಶೈಖ್ ಸ್ವಾಲಿಹ್ ಫೌಝಾನ್ ಮುಂತಾದ ಅತಿರಥ ಮಹಾರಥ ವಿದ್ವಾಂಸರು ಈ ವಿಚಾರದಲ್ಲಿ ಒಮ್ಮತಾ ಭಿಪ್ರಾಯ ಹೊಂದಿದ್ದಾರೆ. ರಕ್ಷಕನು ಯಾ ಪೋಷಕನು ಶರಈ ಕಾರಣಗಳಿಲ್ಲದೆ ವಿವಾಹಕ್ಕೆ ಅನುಮತಿ ನೀಡದಿ ದ್ದರೆ ಖಾಝಿಯವರಿಗೆ ಕಾನೂನು ಬದ್ಧವಾಗಿ ಆತನ ಪೋಷಕತ್ವವನ್ನು ರದ್ದು ಮಾಡಿ ನಿಕಾಹ್ ನಡೆಸಿಕೊಡಲು ಸಾಧ್ಯವಿದೆ. ಇದೊಂದು ಸಂತುಲಿತ ವ್ಯವಸ್ಥೆಯಾಗಿದೆ. ಇಲ್ಲಿ ಹೆಣ್ಮಕ್ಕಳು ಅಸಹಾಯಕರಲ್ಲ. ರಕ್ಷಕನೂ ಸರ್ವಾಧಿಕಾರಿಯಲ್ಲ. ಬದಲಾಗಿ ಈರ್ವರಿಗೂ ಇಸ್ಲಾಮೀ ಕಾನೂನಿನ ಪರಿಧಿಯೊಳಗೆ ಗೌರವ, ಸ್ಥಾನಮಾನ, ಹಕ್ಕುಗಳು, ಬಾಧ್ಯತೆಗಳನ್ನು ನಿಶ್ಚಯಿಸಲಾಗಿದೆ. ಈ ಸಂತುಲಿತತೆಯು ವಿವಾಹವನ್ನು ಹೆಚ್ಚು ಭದ್ರಪಡಿಸುತ್ತದೆ. ಇಸ್ಲಾಮಿನಲ್ಲಿ ವಿವಾಹ ವನ್ನು ವ್ಯತಿರಿಕ್ತವಾಗಿಸುತ್ತದೆ.
ಆಧುನಿಕ ಸುಧಾರಣಾವಾದಿಗಳ ಚಿಂತನೆಯನ್ನು ಬೆಂಬಲಿಸುವ ವೈಯಕ್ತಿಕ ಸ್ವಾತಂತ್ರ್ಯ, ಯಾವುದಾದರೂ ಧಾರ್ಮಿಕ ಸಾಮಾಜಿಕವಾದ ಪರಿಧಿಯಿಲ್ಲವೆಂದಿದ್ದರೆ ಅದು ಸ್ವತಂತ್ರವಾದ ಚಿಂತನೆಯಲ್ಲ, ಅರಾಜಕತೆಯಾಗಿದೆ. ಇಸ್ಲಾಮ್ ಈ ಸ್ವಾತಂತ್ರ್ಯವನ್ನು ಪ್ರಕೃತಿಯ, ಯುಕ್ತಿಯ, ವಹ್ಯ್(ದಿವ್ಯ ಬೋಧನೆ)ನ ಸಂತುಲಿತತೆಯನ್ನೊಳಗೊಂಡಿರುತ್ತದೆ. ನಿಕಾಹ್ ಎಂಬುದು ಕೇವಲ ಈರ್ವರು ವ್ಯಕ್ತಿಗಳ ವ್ಯವಹಾರವಲ್ಲ. ಬದಲಾಗಿ ಎರಡು ಕುಟುಂಬಗಳ ನಡುವಿನ ಉದ್ದೇಶಿತ ಸಂಬಂಧವಾಗಿದೆ. ಪೋಷಕನ ಪಾತ್ರವು ಸಂರಕ್ಷಕನದ್ದಲ್ಲದೆ ಹಿತಾಕಾಂಕ್ಷಿ ಹಾಗೂ ಜವಾಬ್ದಾರಿಯುತವಾದದ್ದಾಗಿದೆ.
ಅಲ್ಲದೆ ಸರ್ವಾಧಿಕಾರಿಯಾದ ಪೋಲೀಸರಂತೆ ವ್ಯವಹರಿಸುವುದಲ್ಲ. ಹೆಣ್ಮಕ್ಕಳಿಗೆ ಅಂಗೀಕರಿಸುವ ಅಧಿಕಾರದ ಜೊತೆಗೆ ಅನ್ಯಾಯವಾದಾಗ, ಅನ್ಯ ದಾರಿ ಕಾಣದೇ ಇದ್ದಾಗ ನ್ಯಾಯಾಲಯವನ್ನು ಸಮೀಪಿಸುವ ಅವಕಾಶ ಕೂಡಾ ಇದೆ ಎಂಬುದು ಸಂಕ್ಷಿಪ್ತ ರೂಪವಾಗಿದೆ. ಇಸ್ಲಾಮಿನಲ್ಲಿ ನಿಕಾಹ್ನ ವ್ಯವಸ್ಥೆಯು ಭಾವನತ್ಮಕತೆಯ ವಿರೋಧಿಯಲ್ಲ. ಯುಕ್ತಿಯ ಶತ್ರುವೂ ಅಲ್ಲ. ಬದಲಾಗಿ ಮಹಿಳೆಗೆ ಆಕೆಯ ಹಕ್ಕು ಸಂರಕ್ಷಣೆ, ಮಾನ್ಯತೆ, ಗೌರವದ ಜೊತೆಗೆ ಆಕೆ ಸ್ವತಃ ನಿರ್ಧಾರಗಳನ್ನು ತಾಳಲು ಸಾಧ್ಯವಾಗುವ ವ್ಯವಸ್ಥೆ ಮಾಡಿ ಕೊಟ್ಟಿದೆ. ಆದರೆ ಅದು ಒಟ್ಟು ಒಳಿತಿನ ಪರಿಧಿಯೊಳಗೆ ಇರಬೇಕು. ನೈಜ ಸ್ವಾತಂತ್ರ್ಯ ಸಂಬಂಧಗಳನ್ನು ಒಡೆಯುವಂತಹದ್ದಲ್ಲ. ಬದಲಾಗಿ ಅದು ಸಂಬಂಧಗಳನ್ನು ಭದ್ರಗೊಳಿಸುವಂತಹದ್ದು, ಗೌರವಾದರವುಳ್ಳದ್ದೂ, ಸಂತುಲಿತ ವಾದದ್ದಾಗಿದೆ. ಇದು ಇಸ್ಲಾಮಿನ ಕಾನೂನು ವ್ಯವಸ್ಥೆಯಾಗಿದೆ. ಪ್ರಕೃತಿ ದತ್ತವಾದ, ವಹ್ಯ್ ಮೂಲಕ, ಯುಕ್ತಿ, ವಿವೇಕತನದ ಮನೋಹರವಾದ ಸಮ್ಮಿಳಿತವಾಗಿದೆ.












