ಶಿವಮೊಗ್ಗದಲ್ಲಿ ಅಧಿಕ ಬೆಲೆಗೆ ಸಾಮಗ್ರಿ ಮಾರಾಟ: ವ್ಯಾಪಾರಿಗಳ ವಿರುದ್ಧ ಕೇಸ್; 3.09 ಲಕ್ಷ ದಂಡ ವಸೂಲಿ

0
438

ಸನ್ಮಾರ್ಗ ವಾರ್ತೆ

ಶಿವಮೊಗ್ಗ: ಕಾನೂನು ಮಾಪನಶಾಸ್ತ್ರ ಇಲಾಖೆಯು ಕೋವಿಡ್-19ರ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ತಪಾಸಣೆ ಕೈಗೊಂಡು ಸಾಮಗ್ರಿಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ತಪ್ಪಿತಸ್ಥ ದಿನಸಿ ವರ್ತಕರ, ಮೆಡಿಕಲ್ ಶಾಪ್‌ಗಳಲ್ಲಿ ಅನಧಿಕೃತ ಆಕ್ಸಿಮೀಟರ್ ಮತ್ತು ಮಾಸ್ಕ್ ಗಳನ್ನು ಮಾರಾಟ ಮಾಡುತ್ತಿರುವ ತಪ್ಪಿತಸ್ಥ ವರ್ತಕರ ವಿರುದ್ಧ ತಪಾಸಣೆ ನಡೆಸಿ 140 ಪ್ರಕರಣಗಳನ್ನು ದಾಖಲಿಸಿ, ರಾಜಿ ಸಂಧಾನದ ಮೂಲಕ ರೂ. 3.09 ಲಕ್ಷಗಳ ದಂಡ ವಸೂಲಿ ಮಾಡಲಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎಸ್.ಮಂಜುನಾಥ್ ಅವರು ತಿಳಿಸಿದ್ದಾರೆ.

ದಿನಸಿ ಪದಾರ್ಥಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ಹಾಗೂ ನ್ಯಾಯ ಬೆಲೆ ಅಂಗಡಿಗಳಲ್ಲಿ ಕಡಿಮೆ ತೂಕ ವಿತರಣೆ ಮಾಡುತ್ತಿರುವ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಶಿವಮೊಗ್ಗ ಜಿಲ್ಲೆಗೆ ಸಂಬಂಧಪಟ್ಟಂತೆ ಮೊ.ಸಂ.: 9481010281, ಶಿವಮೊಗ್ಗ ನಗರದ ದೂರಿಗೆ ಸಂಬಂಧಪಟ್ಟಂತೆ ಮೊ.ಸಂ.: 8971271523, ಶಿವಮೊಗ್ಗ ಗ್ರಾಮಾಂತರ ಹಾಗೂ ಹೊಸನಗರ, ಸಾಗರ, ಸೊರಬ ತಾಲೂಕಿಗೆ ಸಂಬಂಧಪಟ್ಟಂತೆ ಮೊ.ಸಂ.: 9008506881, ಭದ್ರಾವತಿ, ತೀರ್ಥಹಳ್ಳಿ ತಾಲೂಕಿಗೆ ಸಂಬಂಧಪಟ್ಟಂತೆ ಮೊ.ಸಂ.: 7019586800 ಹಾಗೂ ಶಿಕಾರಿಪುರ ತಾಲೂಕು ಮೊ.ಸಂ.: 9845343778 ಗಳಿಗೆ ಸಂಪರ್ಕಿಸಿ ದೂರು ನೀಡುವಂತೆ ಇಲಾಖೆಯ ಸಹಾಯಕ ನಿಯಂತ್ರಕ ಎಸ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.