ಜಾತಿ ಸಮೀಕ್ಷೆ: ಹೈಕೋರ್ಟ್ ತಡೆಯಾಜ್ಞೆಯಲ್ಲಿ ಮಧ್ಯಪ್ರವೇಶವಿಲ್ಲ- ಸುಪ್ರೀಂಕೋರ್ಟು

0
392

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮೇ 18: ಬಿಹಾರದ ಜಾತಿ ಸಮೀಕ್ಷೆಗೆ ಹೈಕೋರ್ಟಿನ ತಾತ್ಕಾಲಿಕ ತಡೆಯಾಜ್ಞೆ ತೆರವುಗೊಳಿಸಲು ಸುಪ್ರೀಂಕೋರ್ಟು ನಿರಾಕರಿಸಿದೆ. ಬಿಹಾರ ಸರಕಾರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಿತ್ತು. ಜಸ್ಟಿಸ್ ಎಎಸ್‍ಕೆ, ಜಸ್ಟಿಸ್ ರಾಜೇಸ್ ಬಿಂದಾಲ್‍ರ ಪೀಠ ವಿಚಾರಣೆಯನ್ನು ಮುಂದೂಡಿದೆ.

ಯಾವುದಾದರೂ ಕಾರಣದಿಂದ ಹೈಕೋರ್ಟು ರಿಟ್ ಅರ್ಜಿಯನ್ನು ಸ್ವೀಕರಿಸದಿದ್ದರೆ ಜುಲೈ ಹದಿನಾಲ್ಕಕ್ಕೆ ಸುಪ್ರೀಂಕೋರ್ಟುಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಲಿದೆ.

ಈಗ ಮಧ್ಯಪ್ರವೇಶ ಸರಿಯಲ್ಲ. ಹೈಕೋರ್ಟು ಜುಲೈ ಮೂರಕ್ಕೆ ಪ್ರಕರಣ ವಿಚಾರಣೆ ನಡೆಸಲಿದೆ. ಪ್ರಾಥಮಿಕ ವಿಷಯಗಳನ್ನು ಹೈಕೋರ್ಟು ದಾಖಲಿಸಿದೆ. ಆದ್ದರಿಂದ ಇಂದು ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳುವುದರಲ್ಲಿ ಅರ್ಥವಿಲ್ಲ. ಪ್ರಕರಣ ಹೈಕೋರ್ಟ್ ಪರಿಗಣಿಸದಿದ್ದರೆ ಜುಲೈ ಹದಿನಾಲ್ಕರಂದು ಸುಪ್ರೀಂಕೋರ್ಟು ವಿಚಾರಣೆಗೆ ಎತ್ತಿಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟು ತಿಳಿಸಿದೆ.