ದಿ ಕೇರಳ ಸ್ಟೋರಿ: ಥಿಯೇಟರಿನ ಮುಂದೆ ದ್ವೇಷ ಭಾಷಣ ಮಾಡಿದ ಸಾದ್ವಿ ಪ್ರಾಚೀ, ಪ್ರಕರಣ ದಾಖಲು

0
434

ಸನ್ಮಾರ್ಗ ವಾರ್ತೆ

ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶಿಸುತ್ತಿರುವ ಥಿಯೇಟರಿನ ಮುಂದೆ ದ್ವೇಷ ಭಾಷಣ ಮಾಡಿದ ಸಾದ್ವಿ ಪ್ರಾಚೀ ವಿರುದ್ಧ ಕೇಸು ದಾಖಲಿಸಲಾಗಿದೆ.

ರಾಜಸ್ಥಾನದಲ್ಲಿ ಸಿನಿಮಾ ಥಿಯೇಟರಿನ ಮುಂದೆ ಇವರು ದ್ವೇಷ ಭಾಷಣ ಮಾಡಿದ್ದರು. ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡುವ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗಿತ್ತು
ಹೆಣ್ಮಕ್ಕಳೇ ಜಾಗೃತೆ. ಈಗ ಅವರು 32 ಶೇಕಡ ಮಾತ್ರವೇ ಇದ್ದಾರೆ. ಪರಿಸ್ಥಿತಿ ತುಂಬಾ ಜಟಿಲವಾಗಿದೆ. ರಾಮನವಮಿ ಶೋಭ ಯಾತ್ರೆಯನ್ನು ನಡೆಸಲೂ ಸಾಧ್ಯವಾಗದ ಸ್ಥಿತಿಯಿದೆ. ಅವರ ಜನಸಂಖ್ಯೆ 40 ಶೇಕಡ ದಾಟಿದರೆ ನಮ್ಮ ಹೆಣ್ಮಕ್ಕಳಿಗೆ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಕಾಶ್ಮೀರದಲ್ಲಿ 5 ಲಕ್ಷ ಹಿಂದುಗಳಿದ್ದಾರೆ. ಯಾವ ಕಾರಣಕ್ಕಾಗಿ ಅವರು ತಮ್ಮ ತಾಯಿನಾಡನ್ನು ಬಿಟ್ಟು ತೆರಳಬೇಕಾಗಿ ಬಂತು ಎಂದು ಆಲೋಚಿಸಿ ಎಂದವರು ಹೇಳಿದ್ದಾರೆ. ಥಿಯೇಟರ್ ಗೆ ಬಂದ ಹೆಣ್ಣು ಮಕ್ಕಳನ್ನು ಉದ್ದೇಶಿಸಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಸ್ಥಳೀಯ ಪೊಲೀಸರು ಇದೀಗ ಇವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ