ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮೇ 18: ಜೆಎನ್ಯು ವಿದ್ಯಾರ್ಥಿ, ಆಕ್ಟಿವಿಸ್ಟ್ ಉಮರ್ ಖಾಲಿದ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಸುಪ್ರೀಂ ಕೋರ್ಟು , ಈ ಬಗ್ಗೆ ದಿಲ್ಲಿ ಪೊಲೀಸರಿಗೆ ನೋಟಿಸು ಜಾರಿ ಮಾಡಿದೆ. ದಿಲ್ಲಿ ಗಲಭೆಗೆ ಸಂಚು ಹೆಣೆದ ಆರೋಪ ಹೊರಿಸಿ ಉಮರ್ ಖಾಲಿದ್ ವಿರುದ್ಧ ಪೊಲೀಸರು ಕೇಸು ದಾಖಲಿಸಿ ಬಂಧಿಸಿದ್ದಾರೆ. ಪ್ರಕರಣ ಜಸ್ಟಿಸ್ ಎಎಸ್ ಬೋಪಣ್ಣ, ಹಿಮಾ ಕೊಹ್ಲಿ ಯವರ ಪೀಠದ ಮುಂದೆ ವಿಚಾರಣೆಗೆ ಬಂದಿದೆ.
ದಿಲ್ಲಿ ಪೊಲೀಸರಿಗೆ ನೋಟಿಸು ನೀಡಿದ ಕೋರ್ಟು, ಆರು ವಾರಗಳ ಬಳಿಕ ಪ್ರಕರಣವನ್ನು ಪುನಃ ಪರಿಗಣಿಸುವುದಾಗಿ ತಿಳಿಸಿದೆ. ಇದೇ ವೇಳೆ ತುರ್ತಾಗಿ ಪ್ರಕರಣದಲ್ಲಿ ವಿಚಾರಣೆಗೆ ಉಮರ್ ಖಾಲಿದ್ ರಜಾಕಾಲದ ಪೀಠದಲ್ಲಿ ಅರ್ಜಿ ಸಲ್ಲಿಸಲು ಅನುಮತಿಯನ್ನು ಉಮರ್ ಖಾಲಿದ್ರ ವಕೀಲ ಕಪಿಲ್ ಸಿಬಲ್ ಕೋರ್ಟನ್ನು ಆಗ್ರಹಿಸಿದರು. ಮುಂದಿನವಾರಸುಪ್ರೀಮ್ ಕೋರ್ಟಿನ ಬೇಸಿಗೆರಜೆ ಆರಂಭಗೊಳ್ಳುತ್ತದೆ












