ಜಾತಿ ಅಸಮಾನತೆ ತೀವ್ರ ಹೆಚ್ಚಳ; ಮೋದಿ ಆಳ್ವಿಕೆಯ ನಿಜ ಬಣ್ಣ ತೆರೆದಿಟ್ಟ ಬಹುತ್ವ ಕರ್ನಾಟಕ ವರದಿ

0
265

ಸನ್ಮಾರ್ಗ ವಾರ್ತೆ

ಬಹುತ್ವ ಕರ್ನಾಟಕ ಮತ್ತು ಅಂಬೇಡ್ಕರ್ ರೀಡಿಂಗ್ ಸರ್ಕಲ್ ಬಿಡುಗಡೆ ಮಾಡಿರುವ ʼಬಿಜೆಪಿ ಅವಧಿಯ ಸಾಮಾಜಿಕ ನ್ಯಾಯದ ಹುಸಿ ಭರವಸೆ ವರದಿʼಯು ಹಲವು ಆತಂಕಗಳನ್ನು ತೆರೆದಿಟ್ಟಿದೆ.

“ಶೋಷಿತ  ಸಮುದಾಯಗಳ ಸ್ಥಿತಿಯನ್ನು ಉನ್ನತೀಕರಿಸುವುದು ಮತ್ತು ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವುದು ನಮ್ಮ ದೀರ್ಘಕಾಲೀನ ಬದ್ಧತೆ” ಎಂದು ಬಿಜೆಪಿ ಘೋಷಣೆ ಮಾಡಿಕೊಂಡಿದೆ. ಆದರೆ ನರೇಂದ್ರ ಮೋದಿ ಆಳ್ವಿಕೆಯಲ್ಲಿನ ವಾಸ್ತವಗಳು ವಿರುದ್ಧ ದಿಕ್ಕಿನಲ್ಲಿವೆ ಎಂಬುದನ್ನು ವರದಿ ಬಿಚ್ಚಿಟ್ಟಿದೆ.

ಬಿಜೆಪಿ ತಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುವುದರಲ್ಲಿ ವಿಫಲವಷ್ಟೇ ಆಗದೆ, ದಲಿತ ಸಮುದಾಯಗಳ ಹಕ್ಕುಗಳು ಮತ್ತು ಅಭಿವೃದ್ಧಿಯನ್ನು ದುರ್ಬಲಗೊಳಿಸಿದೆ.

ಬಿಜೆಪಿಯ 2014 ಮತ್ತು 2019ರ ಪ್ರಣಾಳಿಕೆಗಳಲ್ಲಿದ್ದ ಪ್ರಮುಖ ಭರವಸೆಗಳನ್ನು, ಅವುಗಳಿಗೆ ಸಂಬಂಧಿಸಿದ ಅಂಕಿ- ಸಂಖ್ಯೆ ಹಾಗೂ ವಾಸ್ತವ ಘಟನೆಗಳನ್ನು ಪರಿಶೀಲಿಸಿ ರೂಪಿಸಿರುವ ವರದಿಯು ಬಿಜೆಪಿಯ ನಿಜ ಬಣ್ಣವನ್ನು ಬಯಲು ಮಾಡಿವೆ. ನೊಂದ ಸಮುದಾಯಗಳ ವಿಚಾರದಲ್ಲಿ ನಿರ್ಲಕ್ಷ್ಯ, ತಾರತಮ್ಯ ನೀತಿಗಳು ಮತ್ತು ಆಳವಾಗಿ ಬೇರೂರಿರುವ ಜಾತಿ-ಆಧಾರಿತ ಪೂರ್ವಾಗ್ರಹಗಳನ್ನು ಶಾಶ್ವತಗೊಳಿಸುವಂತಹ ಮಾದರಿಗಳನ್ನು ಬಿಜೆಪಿ ಮುಂದುವರಿಸಿರುವುದನ್ನು ವರದಿಯಲ್ಲಿ ವಿವರಿಸಲಾಗಿದೆ.

ಪರಿಶಿಷ್ಟರ ಮೇಲಿನ ದೌರ್ಜನ್ಯ ಹೆಚ್ಚಳ

ಭರವಸೆ: ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳ ಭದ್ರತೆಯನ್ನು ಖಾತ್ರಿಪಡಿಸಲು ಮತ್ತು ದೌರ್ಜನ್ಯಗಳನ್ನು ತಡೆಗಟ್ಟಲು ಹೆಚ್ಚಿನ ಆದ್ಯತೆ ನೀಡುವುದಾಗಿ ಬಿಜೆಪಿ ಹೇಳಿತ್ತು.

ವಾಸ್ತವ: ಬಿಜೆಪಿ ಆಡಳಿತದ ಅವಧಿಯಲ್ಲಿ ಎಸ್‌.ಸಿ, ಎಸ್‌.ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶೇ.48ರಷ್ಟು ಏರಿಕೆಯಾಗಿದೆ.

2010-12ರಲ್ಲಿ ಪ್ರತಿ ವರ್ಷಕ್ಕೆ ಸರಾಸರಿ 39,000 ಎಸ್‌.ಸಿ/ಎಸ್‌.ಟಿ ಸಮುದಾಯಗಳ ಮೇಲಿನ ದೌರ್ಜನ್ಯದ ಪ್ರಕರಣಗಳು ಇದ್ದವು. ಆದರೆ 2022ರಲ್ಲಿ 67,646 ಪ್ರಕರಣಗಳು (ದಿನಕ್ಕೆ 188 ಪ್ರಕರಣಗಳು) ದಾಖಲಾಗಿವೆ. 2015-19ರಲ್ಲಿ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಘಟನೆಗಳಲ್ಲಿ ಶೇ.49.87 ಹೆಚ್ಚಳವಾಗಿದೆ.

ಎಸ್‌.ಸಿ, ಎಸ್‌.ಟಿ ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳು ಹೆಚ್ಚುತ್ತಿರುವ ಹೊರತಾಗಿಯೂ, ಅವರಿಗೆ ನ್ಯಾಯ ಒದಗಿಸುವ ಹಾಗೂ ಕಾನೂನು ಜಾರಿಯಾಗಲು ರೂಪಿಸಿರುವ ಯೋಜನೆಗಳಿಗೆ  ಅತ್ಯಲ್ಪ ನಿಧಿ ನಿಗದಿಪಡಿಸಿರುವುದು ಸ್ಪಷ್ಟವಾಗಿದೆ.

ನಿಧಿ ಹಂಚಿಕೆ ಮತ್ತು ಬಳಕೆಯಲ್ಲಿ ಮೋಸ

ಭರವಸೆ: ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳಿಗೆ ಒದಗಿಸಿರುವ ನಿಧಿಯ ಸರಿಯಾದ ಬಳಕೆ ಮಾಡುತ್ತೇವೆ. ಆರ್ಥಿಕ ನ್ಯಾಯಕ್ಕೆ ಪೂರಕವಾಗಿ ಸಾಮಾಜಿಕ ನ್ಯಾಯ ಹಾಗೂ ರಾಜಕೀಯ ಸಬಲೀಕರಣಕ್ಕೆ ಒತ್ತು ನೀಡುತ್ತೇವೆ ಎಂದಿತ್ತು ಭಾಜಪ.

ವಾಸ್ತವ: ನೀತಿ ಆಯೋಗದ ನಿಯಮಗಳ  ಪ್ರಕಾರ, 2015-2020 ರಲ್ಲಿ ಪರಿಶಿಷ್ಟ ಜಾತಿಗಳಿಗೆ 5.23 ಲಕ್ಷ ಕೋಟಿ ರೂ. ನಿಗದಿಯಾಗಿತ್ತು, ವಾಸ್ತವದಲ್ಲಿ ಕೇವಲ 2.55 ಲಕ್ಷ ಕೋಟಿಗಳು ಹಂಚಿಕೆಯಾಗಿದೆ.

2023-24ರ ಬಜೆಟ್‌ನಲ್ಲಿ ಪರಿಶಿಷ್ಟ ಪಂಗಡಗಳಿಗೆ ನಿಗದಿಪಡಿಸಬೇಕಾದ  ಹಂಚಿಕೆ ಶೇ.8.6, ವಾಸ್ತವದಲ್ಲಿ ಕೇವಲ ಶೇ.2.7 ರಷ್ಟು ಮಾತ್ರ ಹಂಚಿಕೆ ಆಗಿದೆ.

ಬುಡಕಟ್ಟು ವ್ಯವಹಾರಗಳ ಸಚಿವಾಲಯದ (2023-24) ಹಂಚಿಕೆಯ ಶೇ.39ರಷ್ಟು ನಿಧಿಯನ್ನು ಖರ್ಚು ಮಾಡದೆ ವ್ಯರ್ಥ ಮಾಡಲಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ವಿಶೇಷವಾಗಿ ನೆರವಾಗುವಂತೆ ಫಂಡ್ ಅಲೋಕೇಷನ್ ಮಾಡಬೇಕಿತ್ತು. ಆದರೆ ಸುಮಾರು ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಿಟ್ಟ ಫಂಡ್‌ನಲ್ಲಿ 56.5% ಹಣ ಎಲ್ಲಾ ಸಮುದಾಯಗಳಿಗೂ ಅನ್ವಯವಾಗುವಂತಹ ʼಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆʼಯಂತಹ ಜೆನರಲ್ ಯೋಜನೆಗಳಿಗೆ ತಿರುಗಿಸಲಾಗಿದೆ.

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಬಂಧಿತ ಕಾರ್ಮಿಕರ ಪುನರ್ವಸತಿ ಮುಂತಾದ ಪ್ರಮುಖ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಉದ್ದೇಶಪೂರ್ವಕವಾಗಿ ಕಡಿಮೆ ಹೂಡಿಕೆ ಮಾಡಿರುವುದು ಕಂಡುಬಂದಿದೆ.

ಮಲ ಹೊರುವ ಪದ್ಧತಿ ಹೆಚ್ಚಳ

ಭರವಸೆ: ಮಲ ಹೊರುವ ಪದ್ದತಿಯನ್ನು ಸಂಪೂರ್ಣವಾಗಿ ತೆಗೆಯಲು ಮತ್ತು ಸಫಾಯಿ ಕರ್ಮಚಾರಿಗಳಿಗೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧರಾಗಿರುವುದಾಗಿ ಬಿಜೆಪಿ ಹೇಳಿತ್ತು.

ವಾಸ್ತವ: ಮೂರಲ್ಲೊಂದು ಜಿಲ್ಲೆಗಳು (766 ರಲ್ಲಿ 246) ಇನ್ನೂ ಮಲ ಹೊರುವ ಪದ್ದತಿಯನ್ನು ನಿರ್ಮೂಲನೆ ಮಾಡಬೇಕಾಗಿದೆ. ಚರಂಡಿ, ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವ ಸಂದರ್ಭದಲ್ಲಾಗುವ ಸಾವುಗಳನ್ನು ಮುಚ್ಚಿ ಹಾಕಿ ಸುಳ್ಳು ವರದಿಗಳನ್ನು ಮಾಡಲಾಗಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಪುನರ್ವಸತಿಗಾಗಿ ಕ್ಯಾಪಿಟಲ್ ಸಬ್ಸಿಡಿಯನ್ನು ಪಡೆಯಲು ಗುರುತಿಸಿದ ಸಫಾಯಿ ಕರ್ಮಚಾರಿಗಳಲ್ಲಿ ಕೇವಲ ಶೇ.2.7 ರಷ್ಟು ಕರ್ಮಚಾರಿಗಳು ಮಾತ್ರ ಸಬ್ಸಿಡಿಯನ್ನು ಪಡೆದಿದ್ದಾರೆ.

ನಿಧಿ ಹಂಚಿಕೆ ಮತ್ತು ಬಳಕೆಯಲ್ಲಿ ಮೋಸ

ಭರವಸೆ: ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳಿಗೆ ಒದಗಿಸಿರುವ ನಿಧಿಯ ಸರಿಯಾದ ಬಳಕೆ ಮಾಡುತ್ತೇವೆ. ಆರ್ಥಿಕ ನ್ಯಾಯಕ್ಕೆ ಪೂರಕವಾಗಿ ಸಾಮಾಜಿಕ ನ್ಯಾಯ ಹಾಗೂ ರಾಜಕೀಯ ಸಬಲೀಕರಣಕ್ಕೆ ಒತ್ತು ನೀಡುತ್ತೇವೆ ಎಂದಿತ್ತು ಭಾಜಪ.

ವಾಸ್ತವ: ನೀತಿ ಆಯೋಗದ ನಿಯಮಗಳ  ಪ್ರಕಾರ, 2015-2020 ರಲ್ಲಿ ಪರಿಶಿಷ್ಟ ಜಾತಿಗಳಿಗೆ 5.23 ಲಕ್ಷ ಕೋಟಿ ರೂ. ನಿಗದಿಯಾಗಿತ್ತು, ವಾಸ್ತವದಲ್ಲಿ ಕೇವಲ 2.55 ಲಕ್ಷ ಕೋಟಿಗಳು ಹಂಚಿಕೆಯಾಗಿದೆ.

2023-24ರ ಬಜೆಟ್‌ನಲ್ಲಿ ಪರಿಶಿಷ್ಟ ಪಂಗಡಗಳಿಗೆ ನಿಗದಿಪಡಿಸಬೇಕಾದ  ಹಂಚಿಕೆ ಶೇ.8.6, ವಾಸ್ತವದಲ್ಲಿ ಕೇವಲ ಶೇ.2.7 ರಷ್ಟು ಮಾತ್ರ ಹಂಚಿಕೆ ಆಗಿದೆ.

ಬುಡಕಟ್ಟು ವ್ಯವಹಾರಗಳ ಸಚಿವಾಲಯದ (2023-24) ಹಂಚಿಕೆಯ ಶೇ.39ರಷ್ಟು ನಿಧಿಯನ್ನು ಖರ್ಚು ಮಾಡದೆ ವ್ಯರ್ಥ ಮಾಡಲಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ವಿಶೇಷವಾಗಿ ನೆರವಾಗುವಂತೆ ಫಂಡ್ ಅಲೋಕೇಷನ್ ಮಾಡಬೇಕಿತ್ತು. ಆದರೆ ಸುಮಾರು ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಿಟ್ಟ ಫಂಡ್‌ನಲ್ಲಿ 56.5% ಹಣ ಎಲ್ಲಾ ಸಮುದಾಯಗಳಿಗೂ ಅನ್ವಯವಾಗುವಂತಹ ʼಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆʼಯಂತಹ ಜೆನರಲ್ ಯೋಜನೆಗಳಿಗೆ ತಿರುಗಿಸಲಾಗಿದೆ.

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಬಂಧಿತ ಕಾರ್ಮಿಕರ ಪುನರ್ವಸತಿ ಮುಂತಾದ ಪ್ರಮುಖ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಉದ್ದೇಶಪೂರ್ವಕವಾಗಿ ಕಡಿಮೆ ಹೂಡಿಕೆ ಮಾಡಿರುವುದು ಕಂಡುಬಂದಿದೆ.

ಪ್ರಾತಿನಿಧ್ಯದಲ್ಲಿ ಮೋಸ

ಭರವಸೆ: ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳಿಗೆ ಸಾಂವಿಧಾನಿಕವಾಗಿ ನೀಡಿರುವ ಭರವಸೆಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿತ್ತು ಬಿಜೆಪಿ.

ವಾಸ್ತವ: ಜಾತಿ ಗಣತಿಯಲ್ಲಿ ಒಬಿಸಿ ಸಮುದಾಯಗಳನ್ನು ಎಣಿಸಲು ನಿರಾಕರಣೆ ಮಾಡಲಾಗಿದೆ.

ದಲಿತ ಕ್ರೈಸ್ತ ಮತ್ತು ಮುಸ್ಲಿಮರ ಕಡೆಗಾಣಿಕೆಯನ್ನು ಪರಿಗಣಿಸದಿರುವುದು ಕಂಡುಬಂದಿದೆ. ಐತಿಹಾಸಿಕವಾಗಿ ಜಾತಿ-ಬಂಧಿತ ಉದ್ಯೋಗಗಳ ಗುತ್ತಿಗೆಕರಣ ಮಾಡಲಾಗಿದೆ.

ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಇರುವುದು ದೊಡ್ಡ ವಂಚನೆ. 9 ಸಚಿವಾಲಯಗಳಲ್ಲಿ ಶೇ.58ರಷ್ಟು ಮೀಸಲಾತಿ ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ, 45 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಶೇ.42 ಮೀಸಲಾತಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ.

ಶಿಕ್ಷಣ ಮತ್ತು ಉದ್ಯಮಶೀಲತೆಯಲ್ಲಿ ವಂಚನೆ

ಭರವಸೆ: ಶೋಷಿತ  ವರ್ಗದವರಿಗೆ ಶಿಕ್ಷಣ ಮತ್ತು ಉದ್ಯಮಶೀಲತೆಗಾಗಿ ಉತ್ತಮ ವ್ಯವಸ್ಥೆ  ರಚಿಸಲು ಹೆಚ್ಚಿನ ಆದ್ಯತೆ ಎಂದು ಬಿಜೆಪಿ ಹೇಳಿತ್ತು.

ವಾಸ್ತವ: ಇಡಬ್ಲ್ಯುಎಸ್‌ ಮೀಸಲಾತಿಯು ದಲಿತ-ಆದಿವಾಸಿ -ಬಹುಜನರ  ಸಮುದಾಯಗಳನ್ನು ಹೊರತುಪಡಿಸಿ ಅಸ್ತಿತ್ವದಲ್ಲಿರುವ ಮೀಸಲಾತಿಗಳನ್ನು ದುರ್ಬಲಗೊಳಿಸಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನದಲ್ಲಿ ವಿಳಂಬವು ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಜಾತಿ ಮತ್ತು ಅದರ ತಾರತಮ್ಯದ ದುಷ್ಕೃತ್ಯಗಳ ಅರಿವನ್ನು ಮೂಡಿಸುವ ಪಠ್ಯಗಳನ್ನು ಎನ್‌ಸಿಇಆರ್‌ಟಿಯ ಪಠ್ಯಕ್ರಮದಿಂದ ವ್ಯವಸ್ಥಿತವಾಗಿ ಬದಲಾವಣೆ ಮಾಡಲಾಗಿದೆ.

ಸ್ಟ್ಯಾಂಡ್-ಅಪ್ ಇಂಡಿಯಾದಂತಹ ನಿರಾಶಾದಾಯಕ ಉದ್ಯಮಶೀಲತೆ ಯೋಜನೆಗಳ ಅಡಿಯಲ್ಲಿ 2017 ರವರೆಗೆ ಕೇವಲ ಶೇ.6 ಬ್ಯಾಂಕ್ ಶಾಖೆಗಳಲ್ಲಿ ಶೋಷಿತ  ಸಮುದಾಯಗಳಿಗೆ ಸಾಲಗಳ ವಿತರಣೆ ಮಾಡಲಾಗಿದೆ.

ಪರಿಶಿಷ್ಟ ಪಂಗಡಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಹಿನ್ನಡೆ

ಭರವಸೆ: ಸಾಮಾಜಿಕ ಮತ್ತು ರಾಜಕೀಯ ಸಬಲೀಕರಣದತ್ತ ಉತ್ತೇಜನ ನೀಡಲಾಗುವುದು. ಅರಣ್ಯವಾಸಿಗಳ ಹಕ್ಕುಗಳ ಖಾತ್ರಿ ಮಾಡಲಾಗುವುದು. ಬುಡಕಟ್ಟು ಸಮುದಾಯಗಳ ಶಿಕ್ಷಣ, ಆರೋಗ್ಯ ಮತ್ತು ಕೌಶಲಗಳ ಅಭಿವೃದ್ಧಿಯ ಮೇಲೆ ಹೆಚ್ಚಿನ ಗಮನ ಹರಿಸಲಾಗುವುದು.

ವಾಸ್ತವ: ಬುಡಕಟ್ಟು ಕಲ್ಯಾಣ ಯೋಜನೆಗಳಿಗೆ ಅಸಮರ್ಪಕ ನಿಧಿ ಮೀಸಲಿಡಲಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಬರುವ ದಾವೆಗಳ ನಿರಾಕರಣೆ ಮಾಡಲಾಗಿದ್ದು, ಸುಮಾರು 50% ದಾವೆಗಳ ನಿರಾಕರಣೆ ಅಥವಾ ಮುಂದೂಡಿಕೆ ಕಂಡು ಬಂದಿದೆ.

ಬುಡಕಟ್ಟು ಶಿಕ್ಷಣದ ನಿರ್ಲಕ್ಷ್ಯ ದೊಡ್ಡ ಮಟ್ಟದಲ್ಲಿದೆ. ಯೋಜಿತ 740 ಏಕಲವ್ಯ ಮಾದರಿ ಶಾಲೆಗಳ ಪೈಕಿ 401 ಮಾತ್ರ ಕಾರ್ಯನಿರ್ವಹಿಸಲು ಸಮರ್ಥವಾಗಿವೆ. ಬುಡಕಟ್ಟು ಸಮುದಾಯಗಳಲ್ಲಿ ಕಳಪೆ ಆರೋಗ್ಯ ಸೂಚಕಗಳು ಕಂಡು ಬಂದಿವೆ. ಶಿಶು ಮರಣ ಪ್ರಮಾಣ ಸರಾಸರಿ ಶೇ.28 ಇದ್ದರೆ, ಪರಿಶಿಷ್ಟ ಪಂಗಡದ ಸಮುದಾಯಗಳಲ್ಲಿ ಶೇ.41ರಷ್ಟಿದೆ. ಶೇ.65ರಷ್ಟು ಎಸ್‌ಟಿ ಮಹಿಳೆಯರಲ್ಲಿ ರಕ್ತಹೀನತೆ ದಾಖಲಾಗಿದೆ.

ಅಸ್ಪೃಶ್ಯತೆ ಹೆಚ್ಚಳ

ಭರವಸೆ: ಎಲ್ಲಾ ಹಂತಗಳಲ್ಲಿ ಅಸ್ಪೃಶ್ಯತೆ ನಿರ್ಮೂಲನೆಗೆ ಬದ್ಧರಾಗಿರುತ್ತೇವೆ ಎಂದು ಬಿಜೆಪಿ ಹೇಳಿಕೊಂಡಿತ್ತು.

ವಾಸ್ತವ: ರಾಷ್ಟ್ರಪತಿ ದ್ರೌಪದಿ ಮುರ್ಮು, ಹಿಂದುಳಿದ ಸಮುದಾಯಗಳ ಇತರ ಸಚಿವರು ಮತ್ತು ಪಕ್ಷದ ಸದಸ್ಯರ ಮೇಲೆ ಜಾತಿವಾದಿ ವರ್ತನೆಯ ಸ್ಪಷ್ಟ ನಿದರ್ಶನಗಳು ವರದಿಯಾಗಿವೆ.

ಪಕ್ಷದೊಳಗಿನ ಜಾತಿವಾದಿ ಸಿದ್ಧಾಂತಗಳ ನಿರಂತರ ಪ್ರಭಾವ ಕಂಡುಬಂದಿದೆ. ಶೇ.48ರಷ್ಟು ಬಿಜೆಪಿ ಸಂಸದರಿಗೆ ಆರ್‌ಎಸ್‌ಎಸ್‌ ಸಂಬಂಧವಿದೆ. ಅಂಥವರಷ್ಟೇ ಸಚಿವರಾಗಿರುವ ಸಾಧ್ಯತೆ ಮೂರು ಪಟ್ಟು ಹೆಚ್ಚಳವಿರುವುದು ಸ್ಪಷ್ಟ. ದಲಿತರು, ಆದಿವಾಸಿಗಳು ಮತ್ತು ಒ.ಬಿ.ಸಿ.ಗಳ ವಿರುದ್ಧ ಬಿಜೆಪಿ ನಾಯಕರ ಜಾತಿ ನಿಂದನೆಗಳ ಅತಿರೇಕದ ನಿದರ್ಶನಗಳು ವರದಿಯಾಗಿವೆ.

ವರದಿ ಸಿದ್ಧಪಡಿಸಿದ ತಂಡ

ವರದಿ ಸಿದ್ದಪಡಿಸಿದ ತಂಡದಲ್ಲಿ ದಲಿತ ಮಾನವ ಹಕ್ಕುಗಳ ರಾಷ್ಟ್ರೀಯ ಅಭಿಯಾನದ ಪ್ರಧಾನ ಕಾರ್ಯದರ್ಶಿ ಬೀನಾ ಪಲ್ಲಿಕಲ್, ಅಖಿಲ ಭಾರತ ಪರಿಶಿಷ್ಟ ಜಾತಿಗಳ ಸ್ವತಂತ್ರ ಸಂಘಟನೆಯ ಅಧ್ಯಕ್ಷರಾದ ಡಾ. ರಾಹುಲ್ ಸೊಂಪಿಮ್ಪ್ಲೆ, ಕರ್ನಾಟಕ ಜನಶಕ್ತಿ ಸಂಘಟನೆಯ ಗೌರಿ, ಸ್ಲಂ ಜನಾಂದೋಲನಾ ಕರ್ನಾಟಕದ ಎ.ನರಸಿಂಹಮೂರ್ತಿ, ಅಖಿಲ ಭಾರತ ಕೃಷಿ ಮತ್ತು ಕೃಷಿ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕ ನಾಗರಾಜ್‌ ಪೂಜಾರ್‌, ಹೈದ್ರಾಬಾದ್‌ ವಿವಿಯ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರಜ್ವಲ್ ಗಾಯಕ್ವಾಡ್ ಕೆಲಸ ಮಾಡಿದ್ದಾರೆ.

LEAVE A REPLY

Please enter your comment!
Please enter your name here