ಒಂದು ಕೆಜಿ ಮಾವಿನ ಹಣ್ಣಿಗೆ ಮೂರು ಲಕ್ಷ ರೂಪಾಯಿ: ತೋಟದ ಸುತ್ತ ಸಿಸಿ ಟಿವಿ ಕ್ಯಾಮೆರಾ, ಶ್ವಾನ ದಳ..

0
423

ಸನ್ಮಾರ್ಗ ವಾರ್ತೆ

ಮಾವಿನ ತೋಟದ ಸುತ್ತ ಸಿಸಿ ಕ್ಯಾಮೆರಾ, ತರಬೇತಿ ಹೊಂದಿದ ನಾಯಿಗಳ ಕಾವಲು ಮತ್ತು ಕಾವಲುಗಾರರ ದಂಡೇ ಸುತ್ತುವರಿದಿರುವ ಸನ್ನಿವೇಶವನ್ನು ನೋಡಿದ್ದೀರಾ? ಮಾವಿನ ತೋಟಕ್ಕೆ ಇಂತದ್ದೊಂದು ಕಾವಲು ಏಕೆ ಎಂಬ ಪ್ರಶ್ನೆ ನಿಮ್ಮಲ್ಲೂ ಇರಬಹುದು.

ಆದರೆ ಬಿಹಾರ ಒರಿಸ್ಸಾ ತೆಲಂಗಾಣ ಆಂಧ್ರ ಪ್ರದೇಶ ಮುಂತಾದ ಕಡೆ ಮಾವಿನ ತೋಟವನ್ನು ಕಣ್ಣಿಗೆ ಎಣ್ಣೆ ಹಚ್ಚಿ ಕಾವಲು ಕಾಯಲಾಗುತ್ತಿದೆ. ಯಾಕೆಂದರೆ ಈ ಮಾವಿನ ತೋಟದ ಒಂದು ಕೆಜಿ ಮಾವಿನ ಹಣ್ಣಿನ ಬೆಲೆ ಎರಡೂವರೇ ಲಕ್ಷದಿಂದ 3 ಲಕ್ಷ ರೂಪಾಯಿ.

ಈ ಮಾವಿನ ಹಣ್ಣಿನ ಹೆಸರು ಮಿಯಾ ಸಾಕಿ. ದೇಶದಲ್ಲಿ 1500 ಕ್ಕಿಂತಲೂ ಅಧಿಕ ಮಾವಿನ ತಳಿಗಳಿದ್ದರೂ ಈ ಬಗೆಯ ಈ ತಳಿಯನ್ನು ಸಾಮಾನ್ಯವಾಗಿ ಬೆಳೆಯಾಗುತ್ತಿಲ್ಲ. ಜಪಾನಿನ ಮಿಯಾಸಕಿ ಎಂಬಲ್ಲಿ ಈ ಮಾವಿನ ಹಣ್ಣನ್ನು ಹೆಚ್ಚಾಗಿ ಬೆಳೆಯುವುದರಿಂದ ಇದಕ್ಕೆ ಆ ಹೆಸರು ಬಂದಿದೆ.

ಪರ್ಪಲ್ ಬಣ್ಣದ ಈ ಮಾವು ಹಣ್ಣಾಗುವಾಗ ಕಡು ಕೆಂಪಾಗಿ ಮಾರ್ಪಡುತ್ತದೆ. ಒಂದು ಮಾವಿನ ಹಣ್ಣು ಸುಮಾರು 350 ಗ್ರಾಂ ತೂಗಬಳ್ಳುದು. ಏಪ್ರಿಲ್ ನಿಂದ ಆಗಸ್ಟ್ ನಡುವಿನ ಅವಧಿಯಲ್ಲಿ ಈ ಮಾವು ಬೆಳೆಯುತ್ತದೆ. ಈ ಮಾವಿಗೆ ಇರುವ ವಿಪರೀತ ಬೆಲೆಯಿಂದಾಗಿ ಅದನ್ನು ಕದ್ದುಕೊಂಡು ಹೋಗದಂತೆ ತಡೆಯುವುದಕ್ಕೆ ವಿವಿಧ ರೀತಿಯ ಕಸರತ್ತುಗಳನ್ನು ರೈತರು ಮಾಡುತ್ತಾರೆ.

LEAVE A REPLY

Please enter your comment!
Please enter your name here