ಕಾವೇರಿ ನೀರು ವಿವಾದ, 29ಕ್ಕೆ ಕರ್ನಾಟಕ ಬಂದ್

0
600

ಸನ್ಮಾರ್ಗ ವಾರ್ತೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ನೀಡಲು ಮುಂದಾಗಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಆದೇಶದ ವಿರುದ್ಧ ಕರ್ನಾಟಕದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ.

ವಿವಿಧ ಕನ್ನಡಪರ ಸಂಘಟನೆಗಳು ಸೆ.29ರಂದು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿವೆ. ವಾಟಾಳ ಪಕ್ಷದ ಮಾಜಿ ನಾಯಕ ಶಾಸಕ ವಾಟಾಳ ನಾಗರಾಜ್ ಬಂದ್‍ಗೆ ಕರೆ ನೀಡಿದ್ದು. ಕರ್ನಾಟಕ ಜಲಸಂಗ್ರಹ ಸಮಿತಿ, ಬಿಜೆಪಿ, ಜೆಡಿಎಸ್, ಆಮ್ ಆದ್ಮಿ ಪಾರ್ಟಿಗಳು ಬೆಂಬಲ ಸೂಚಿವೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಒಡ್ಡುವ ಚಳವಳಿ ಮಾಡುತ್ತೇವೆ ಎಂದು ವಾಟಾಳ್ ಪಕ್ಷ ತಿಳಿಸಿತು. ಓಲ, ಉಬರ್, ವೆಬ್‍ಟ್ಯಾಕ್ಸಿ ಚಾಲಕರು, ರೆಸ್ಟೋರೆಂಟ್ ಮಾಲಕರು ಬಂದ್ ಬೆಂಬಲಿಸುತ್ತಿದ್ದಾರೆ. ವಿವಿಧ ಕಾರ್ಮಿಕ ಸಂಘಟನೆಗಳು ಬಂದ್‍ನಲ್ಲಿ ಭಾಗವಹಿಸುವರು.  ಹೀಗಾಗಿ ಬಂದ್ ಸಂಪೂರ್ಣ ಯಶಸ್ವಿಯಾಗುವ ಹಾಗೂ ವಾಹನ ಸಂಚಾರ ನಿಲುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ. ಆದರೆ, ನಮ್ಮ ಮೆಟ್ರೊ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

ಇದೇ ವೇಳೆ ಮಂಗಳವಾರ ನಡೆದ ಬೆಂಗಳೂರು ಬಂದ್ ಯಶಸ್ವಿಯಾಗಿತ್ತು. ಬಂದ್ ಜನ ಜೀವನವನ್ನು ಭಾಧಿಸಿದೆ. ಇದೇ ವೇಳೆ ತಮಿಳ್ನಾಡಿಗೆ ಕೊಡಬೇಕಾಗಿದ್ದ 5000 ಘನ ಅಡಿ ನೀರನ್ನು 3000 ಘಟನ ಅಡಿಗೆ ಇಳಿಸಿದೆ.

ಮಂಗಳವಾರ ನಡೆದ ಕಾವೇರಿ ವಾಟರ್ ರೆಗ್ಯುಲೇಶನ್ ಕಮಿಟಿ ಸಭೆಯಲ್ಲಿ ತೀರ್ಮಾನ ಹೀಗೆ ಬಂದಿದೆ. ಸೆಪ್ಟಂಬರ್ 28ಕ್ಕೆ ಬೆಳಗ್ಗೆ ಎಂಟು ಗಂಟೆಯಿಂದ ಅಕ್ಟೋಬರ್ ಹದಿನೈದು ತಾರೀಕಿನವರೆಗೆ ತಮಿಳ್‍ನಾಡಿಗೆ ನೀರು ಕೊಡಬೇಕಾಗುತ್ತದೆ. ಆದರೆ ತಮಿಳ್ನಾಡಿಗೆ ಸಾಕಷ್ಟು ಮಳೆ ಆಗಿದೆ. ನಮಗೆ ಆಗಿಲ್ಲ ಎಂದು ಕರ್ನಾಟಕ ಸರಕಾರದ ನಿಲುವು ಇದ್ದು ತಮಿಳ್‍ನಾಡಿಗೆ ನೀರು ಕೊಡಬೇಕಿಲ್ಲ ಎಂದು ಕರ್ನಾಟಕ ಸರಕಾರ ಹೇಳುತ್ತಿದೆ.