ಮಳೆಯಲ್ಲಿ ಮುಳುಗೆದ್ದ ಒಮನ್; ಇನ್ನೂ ಪತ್ತೆಯಾಗದ ಭಾರತೀಯ ಕುಟುಂಬ

0
1020

ಮಸ್ಕತ್,ಮೇ 21: ಒಮನ್‍ನ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಗವರ್ನರೇಟ್‍ಗಳಲ್ಲಿ ಸೋಮವಾರ ಧಾರಾಕಾರ ಮಳೆ ಸುರಿಯಿತು. ರವಿವಾರ ಕೂಡ ಭಾರೀ ಮಳೆಯಾಗಿತ್ತು. ವಾದಿ ಬನೀ ಖಾಲಿದ್‍ನಲ್ಲಿ ಶನಿವಾರ ಸಂಜೆ ಹರಿವಿಗೆ ಸಿಲುಕಿ ನಾಪತ್ತೆಯಾಗಿದ್ದ ಆರು ಮಂದಿಯನ್ನೊಳಗೊಂಡ ಭಾರತೀಯ ಕುಟುಂಬ ಸೋಮವಾರವೂ ಪತ್ತೆಯಾಗಲಿಲ್ಲ. ಸಿವಿಲ್ ಡಿಫೆನ್ಸ್, ಆರ್‍ಒಪಿ ಹುಡುಕಾಟ ಮುಂದುವರಿಸಿದೆ.

ರವಿವಾರದ ಮಳೆಯಿಂದಾಗಿ ವಾದಿಯಲ್ಲಿ ನೆರೆ ಬಂದು ವಾಹನ ಸಂಚಾರ ಸ್ಥಗಿತವಾಯಿತು. ವಾಹನದೊಳಗೆ ಸಿಲುಕಿದ್ದ ಸುಮಾರು 20 ಮಂದಿಯನ್ನು ಸಿವಿಲ್ ಡಿಫೆನ್ಸ್ ರಕ್ಷಿಸಿದೆ. ಮಸ್ಕತ್‍ನ ವಿವಿಧ ವಲಯಗಳಲ್ಲಿ ಸಂಜೆಗೆ ಜಡಿಮಳೆ ಸುರಿದಿದೆ. ಸಮಾಈಯ ವಾದಿ ಔಕ್‍ನಲ್ಲಿ ಕಾರು ಹರಿವಿಗೆ ಸಿಲುಕಿತ್ತು. ಕಾರಿನೊಳಗೆ ಜನರಿದ್ದರು ಎನ್ನಲಾಗುತ್ತಿದೆ. ಜಅಲಾನಿಯಲ್ಲಿ ಮೂರು ಕಾರುಗಳು ಪ್ರವಾಹದಲ್ಲಿ ಸಿಲುಕಿ ಹರಿದು ಹೋಗಿದೆ.

ರವಿವಾರ ದಾಹಿರ ಗವರ್ನರೇಟ್‍ನ ಯನಕಲ್‍ನಲ್ಲಿ ಅತ್ಯಧಿಕ 41ಮಿಲಿ ಮೀಟರ್ ಮಳೆ ಬಿತ್ತು. ವಾದಿ ಬನಿ ಖಾಲಿದ್‍ನಲ್ಲಿ 39.4 ಮಿಲಿಮೀಟರ್ ಮಲೆ ಆಗಿದೆ. ನಿಸ್ವಾದಲ್ಲಿ 27. 4 ಮಿಲಿಮೀಟರ್, ಸಿಬಿಲ್‍ನಲ್ಲಿ 23 ಮಿಲಿಮೀಟರ್, ಅಲ್‍ಕಾಬಿಲ್‍ನಲಿ 16.2 ಮಿಲಿಮೀಟರ್, ಮಸ್ಕತ್ ನಗರದಲ್ಲಿ 12.6 ಮಿಲಿಮೀಟರ್ ಮಳೆಯಾಗಿದೆ. ಎರಡು ದಿವಸಗಳ ನಿರಂತರ ಮಳೆಯಿಂದಾಗಿ ಮಸೀದಿಯಲ್ಲಿ ಇಫ್ತಾರ್‌ಗೆ ಅಡಚಣೆಯಾಗಿತ್ತು. ಆದರೆ ಕೆಲವು ಮಸೀದಿಗಳಲ್ಲಿ ಆಹಾರ ಪೊಟ್ಟಣ ವಿತರಣೆ ನಡೆಸಲಾಯಿತು.