ಕೊರೋನಕ್ಕೆ ಗಡಿಗಳಿಲ್ಲ; ಪ್ರಯಾಣವನ್ನು ನಿಷೇಧಿಸುವುದು ಅನ್ಯಾಯದ ಕ್ರಮ- ವಿಶ್ವಸಂಸ್ಥೆ

0
52

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಕೊರೋನ ವೈರಸ್ ರೂಪಾಂತರ ಓಮಿಕ್ರಾನ್ ಹಿನ್ನೆಲೆಯಲ್ಲಿ ಕೆಲವು ದೇಶಗಳು ಪ್ರಯಾಣ ನಿಷೇಧ ಹೇರಿದ್ದು ಈ ಕುರಿತು ವಿಸ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟನಿಯೊ ಗುಟರೆಸ್ ಅಸಹಮತ ವ್ಯಕ್ತಪಡಿಸಿದರು.

ಕೊರೋನ ವೈರಸ್‍ಗೆ ಗಡಿಗಳಿಲ್ಲ. ಓಮಿಕ್ರಾನ್ ಇರುವ ದೇಶಗಳನ್ನು ಮತ್ತು ಪ್ರದೇಶಗಳನ್ನು ಒಂಟಿಗೊಳಿಸುವುದು ಪ್ರಯಾಣ ನಿಷೇಧಿಸುವುದು ಅನ್ಯಾಯ ಎಂದು ಅವರು ಹೇಳಿದರು. ಇದರಿಂದ ಪ್ರಯೋಜನವಿಲ್ಲ. ಇದರ ಬದಲು ಅಧಿಕವಾಗಿ ಪರೀಕ್ಷೆ ಮಾಡಿಸುವ ಕೆಲಸ ಆಗಬೇಕಾಗಿದೆ. ಓಮಿಕ್ರಾನ್ ಕಂಡು ಬಂದಿರುವ ದಕ್ಷಿಣಾಫ್ರಿಕಕ್ಕೆ ಪ್ರಯಾಣಿಸುವುದನ್ನು ಹಲವು ದೇಶಗಳು ನಿಷೇಧಿಸಿವೆ.

ಕೊರೋನ ವೈರಸ್ ಹೊಸ ರೂಪಾಂತರ ಕಂಡು ಹಿಡಿದು ಅದನ್ನು ಜಗತ್ತಿಗೆ ವಿವರ ಸಹಿತ ತಿಳಿಸಿದವರನ್ನು ಎಲ್ಲರೂ ಸೇರಿ ಶಿಕ್ಷಿಸಬೇಡಿ. ಸೂಕ್ತ ಉಪಕೃತ ಮಾರ್ಗ ನೋಡಿಕೊಳ್ಳಬೇಕು. ಪ್ರಯಾಣಕ್ಕೆ ನಿರ್ಬಂಧ ಹಾಕಿ ಪ್ರಯೋಜನವಿಲ್ಲ ಎಂದು ಗುಟರೆಸ್ ಹೇಳಿದರು.

ವೈರಸ್ ಹರಡುವಿಕೆ ನಿಯಂತ್ರಿಸುವ ಮಾರ್ಗ ಹೆಚ್ಚು ಪರೀಕ್ಷೆ ಮಾಡುವುದಾಗಿದೆ. ವೈರಸ್ ಹರಡುವಿಕೆ ನಿಯಂತ್ರಿಸಲು ಇರುವ ಮಾರ್ಗವಿದು. ಆರ್ಥಿಕ ವಹಿವಾಟು, ಪ್ರಯಾಣವನ್ನು ಪ್ರೋತ್ಸಾಹಿಸಬೇಕು. ದೇಶದಲ್ಲಿ ಒಮಿಕ್ರಾನನ್ನು ಗುರುತಿಸಿದುರ ಹೆಸರಿನಲ್ಲಿ ನಮ್ಮನ್ನು ಶಿಕ್ಷಿಸಲಾಗುತ್ತಿದೆ ಎಂದು ದಕ್ಷಿಣಾಫ್ರಿಕ ಆರೋಪಿಸಿದೆ.