ಸುದರ್ಶನ್ ಟಿವಿಯ ವಿವಾದಾತ್ಮಕ UPSC ಜಿಹಾದ್ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರದಿಂದ ಗ್ರೀನ್ ಸಿಗ್ನಲ್

0
511

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.19: ಸುದರ್ಶನ್ ಟಿವಿಯ ವಿವಾದಿತ ಬಿಂದಾಸ್ ಬೋಲ್ ಕಾರ್ಯಕ್ರಮದ ಉಳಿದ ಎಪಿಸೋಡ್‍ಗಳನ್ನು ಪ್ರಸಾರ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಎಡಿಟಿಂಗ್ ಮಾಡಿ ಮಿತಿಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವುದಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿದೆ.

ಬಿಂದಾಸ್ ಬೋಲ್ ಕಾರ್ಯಕ್ರಮದಲ್ಲಿ ಮುಸ್ಲಿಮ್ ಸಮುದಾಯವನ್ನು ಆಕ್ಷೇಪಿಸಲಾಗಿದೆ ಎಂದು ಸುಪ್ರೀಂ ಕೋರ್ಟು ಹೇಳಿತ್ತು. ಕಾರ್ಯಕ್ರಮದಲ್ಲಿ ಯುಪಿಎಸ್‍ಸಿಗೆ ಮುಸ್ಲಿಮರು ನುಗ್ಗುತ್ತಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿತ್ತು.

ಸರಕಾರಿ ಸೇವೆಗಳಿಗೆ ಮುಸ್ಲಿಮರು ನುಸುಳುತ್ತಿದ್ದಾರೆ ಎಂಬ ಎಪಿಸೋಡುಗಳನ್ನು ತೋರಿಸುವ ಯುಪಿಎಸ್‍ಸಿ ಜಿಹಾದ್ ಕಾರ್ಯಕ್ರಮ ಉತ್ತಮ ಅಭಿರುಚಿಯನ್ನು ಬೆಳೆಸುವುದಿಲ್ಲ. ಸುಧಾರಣೆಗಳನ್ನು ಮಾಡಬೇಕು ಎಂದು ಮುಂದೆ ಗಮನ ಹರಿಸಬೇಕೆಂದು ಸಚಿವಾಲ ನಿರ್ದೇಶ ನೀಡಿದೆ.

ಸುದರ್ಶನ ಟಿವಿ ಆಗಸ್ಟ್ 28ರಂದು ಪ್ರಸಾರ ಮಾಡಿದ ಎಪಿಸೋಡಿನಲ್ಲಿ ದೇಶದ ಸಿವಿಲ್ ಸರ್ವಿಸ್‍ಗಳಲ್ಲಿ ಮುಸ್ಲಿಮರು ಬಂದು ಬ್ಯೂರೊಕ್ರಸಿಗೆ ನುಸುಳಲು ಶ್ರಮಿಸುತ್ತಿದ್ದಾರೆ ಎಂದು ಆಕ್ಷೇಪಿಸಲಾಗಿತ್ತು. ಎಪಿಸೋಡ್ ಹೊರಬಂದ ಬಳಿಕ ಹಲವು ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ನಿವೃತ್ತ ಸರಕಾರಿ ಅಧಿಕಾರಿಗಳು ಕಾರ್ಯಕ್ರಮದ ವಿರುದ್ಧ ಸುಪ್ರೀಂ ಕೋರ್ಟಿಗೆ ದೂರು ನೀಡಿದ್ದವು. ನಂತರ ಕಾರ್ಯಕ್ರಮಕ್ಕೆ ನಿಷೇಧ ಹೇರಲಾಗಿತ್ತು.