ತನ್ನ ಮ್ಯಾಪ್‍ನಲ್ಲಿ ‘ಲಡಾಕ್’ಅ‌ನ್ನು ಚೀನಾದ ಪ್ರದೇಶ ಎಂದು ತೋರಿಸಿದ್ದಕ್ಕಾಗಿ ಕ್ಷಮೆಯಾಚಿಸಿದ ಟ್ವಿಟರ್

0
307

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.19: ತನ್ನ ಭೂಪಟದಲ್ಲಿ ಭಾರತದ ಪ್ರದೇಶ ಲಡಾಕ್ ಅನ್ನು ಚೀನಾದ ಭಾಗವಾಗಿ ತೋರಿಸಿರುವುದಕ್ಕೆ ಸಾಮಾಜಿಕ ಮಾಧ್ಯಮವಾದ ಟ್ವಿಟರ್ ಕ್ಷಮೆಯಾಚಿಸಿದೆ. ನವೆಂಬರ್ 30ರೊಳಗೆ ತಪ್ಪು ತಿದ್ದಿಕೊಳ್ಳಲು ಪ್ರತಿಜ್ಞಾ ಬದ್ಧ ಎಂದು ಟ್ವಿಟರ್ ಉಭಯ ಸದನ ಸಮಿತಿಗೆ ತಿಳಿಸಿತು.

ಲಡಾಕನ್ನು ಚೀನದ ಭಾಗವಾಗಿ ತೋರಿಸಿದ್ದಕ್ಕೆ ಟ್ವಿಟರ್ ಕ್ಷಮೆ ಬರೆದು ಕೊಟ್ಟಿದೆ ಎಂದು ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಲೇಖಿ ತಿಳಿಸಿದರು. ಭಾರತದ ಭಾವನೆಗೆ ಧಕ್ಕೆಯುಂಟು ಮಾಡುವ ಪರಿಸ್ಥಿತಿ ನಿರ್ಮಾಣಗೊಂಡದ್ದಕ್ಕಾಗಿ ಕ್ಷಮೆಯಾಚಿಸುವುದಾಗಿ ಮತ್ತು ನವೆಂಬರ್ 30ರೊಳಗೆ ತಪ್ಪು ತಿದ್ದಿಕೊಳ್ಳಲಾಗುವುದು ಎಂದು ಟ್ವಿಟರ್ ತಿಳಿಸಿದೆ ಎಂದು ಅವರು ತಿಳಿಸಿದಾರೆ.

ಕಳೆದ ತಿಂಗಳು ನಡೆಸಿದ ಲೈವ್ ಬ್ರಾಡ್‍ಕಾಸ್ಟಿನಲ್ಲಿ ಕೇಂದ್ರಾಳಿತ ಪ್ರದೇಶವಾದ ಲಡಾಕಿನ ಅತ್ಯಂತ ದೊಡ್ಡ ಲೇ ನಗರವನ್ನು ಚೀನಾದ ಭಾಗವಾಗಿ ಟ್ವಿಟರ್ ತೋರಿಸಿತ್ತು. ನಂತರ ಉಭಯ ಸದನ ಸಮಿತಿ ಮಧ್ಯಪ್ರವೇಶಿಸಿ ಟ್ವಿಟರ್‍ನೊಡನೆ ವಿವರಣೆ ಕೇಳಿದ್ದವು. ತಪ್ಪಾದ ಜಿಯೊ ಟ್ಯಾಗಿಂಗ್‍ನಿಂದಾಗಿ ಹೀಗೆಲ್ಲ ಸಂಭವಿಸಿದೆ ಎಂದು ಅದು ಹೇಳಿದೆ.