ಸಿಬಿಐಗೆ ತನಿಖೆ ವಹಿಸಲು ರಾಜ್ಯ ಸರಕಾರಗಳ ಅನುಮತಿ ಅಗತ್ಯ- ಸುಪ್ರೀಂ ಕೋರ್ಟ್

0
382

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.19: ರಾಜ್ಯ ಸರಕಾರಳ ಅನುಮತಿಯಿಲ್ಲದೆ ಸಿಬಿಐಗೆ ಏಕಪಕ್ಷೀಯವಾಗಿ ಕೇಸುಗಳಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟು ತಿಳಿಸಿದೆ. ರಾಜ್ಯಗಳ ಅನುಮತಿಯಿಲ್ಲದೆ ಸಿಬಿಐಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲು ಕೇಂದ್ರ ಸರಕಾರಕ್ಕೆ ಆಗುವುದಿಲ್ಲ. ಉತ್ತರ ಪ್ರದೇಶದ ಅನುಮತಿಯ ಕುರಿತ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಪರಾಮರ್ಶೆ ನಡೆಸಿದೆ.

ಕಾನೂನು ಪ್ರಕಾರ ರಾಜ್ಯದ ಅನುಮತಿಯಿಂದ ಸಿಬಿಐ ಪ್ರಕರಣದಲ್ಲಿ ತನಿಖೆ ನಡೆಸಬಹುದು. ಅಲ್ಲದಿದ್ದರೆ ಅದು ಫೆಡರಲ್ ತತ್ವಗಳ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟು ಹೇಳಿದೆ. ಸಿಬಿಐ ಅಧಿಕಾರ ವ್ಯಾಪ್ತಿ ಕೇಂದ್ರಾಡಳಿತ ಪ್ರದೇಶಗಳಿಂದ ಆಚೆಗೆ ವಿಸ್ತರಿಸಬೇಕಾದರೆ ಆಯಾ ರಾಜ್ಯಗಳ ಅನುಮತಿ ಬೇಕಾಗಿದೆ. ಸಿಬಿಐಯ ಚಟುವಟಿಕೆಗಳನ್ನು ನಿಯಂತ್ರಿಸುವ ದಿಲ್ಲಿ ಪೊಲೀಸ್ ಎಸ್ಟಾಬ್ಲಿಶ್‍ಮೆಂಟ್ ಆ್ಯಕ್ಟ್‌‌ನ ವಿವಿಧ ಸೆಕ್ಷನ್‍ಗಳಲ್ಲಿ ಈ ವಿಷಯವನ್ನು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಸುಪ್ರೀಂಕೋರ್ಟು ತಿಳಿಸಿದೆ.

ರಾಜಸ್ಥಾನ, ಪಶ್ಚಿಮ ಬಂಗಾಳ, ಜಾರ್ಖಂಡ, ಕೇರಳ, ಮಹಾರಾಷ್ಟ್ರ, ಛತ್ತಿಸ್ಗಡ, ಪಂಜಾಬ್, ಮಿಝೊರಂ ರಾಜ್ಯಗಳು ಸಿಬಿಐ ತನಿಖೆಯ ಅನುಮತಿಯನ್ನು ಹಿಂಪಡೆದುಕೊಂಡಿವೆ. ಇದರ ನಂತರ ಸುಪ್ರೀಂ ಕೋರ್ಟು ಪ್ರಧಾನ ಪರಾಮರ್ಶೆ ಮಾಡಿದೆ.