ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಡಿ.19: ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಶ್ನಾವಳಿಯ ಅಂತಿಮ ರೂಪ ಸಿದ್ಧವಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಕಚೇರಿ ತಿಳಿಸಿದೆ. 2021ರಲ್ಲಿ ಮೊದಲ ಹಂತದ ಸೆನ್ಸಸ್ ಆರಂಭವಾಗುವ ದಿವಸ ಯಾವುದೆಂದು ಗೊತ್ತಿಲ್ಲ ಎಂದು ಕಚೇರಿ ತಿಳಿಸಿದೆ. ಮಾಹಿತಿ ಹಕ್ಕು ಕಾನೂನು ಪ್ರಕಾರ ದ ಹಿಂದೂ ದಿನ ಪತ್ರಿಕೆ ಸಲ್ಲಿಸಿದ ಅರ್ಜಿಯಲ್ಲಿ ರಿಜಿಸ್ಟ್ರಾರ್ ಜನರಲ್ ಉತ್ತರ ನೀಡಿದ್ದಾರೆ. 2021ರ ಮೊದಲ ಹಂತದ ಸೆನ್ಸಸ್ನ ನಿರೀಕ್ಷಿತ ತಾರೀಕು 2020 ಎಪ್ರಿಲ್ ಒಂದಕ್ಕೆ ಆರಂಭಿಸಲು ಎನ್ಪಿಆರ್ ಅಪ್ಡೇಟ್ ಅನ್ನು ಕೇಳಿ ಮಾಹಿತಿ ಹಕ್ಕು ಅರ್ಜಿ ಹಾಕಲಾಗಿತ್ತು.
ಎನ್ಪಿಆರ್ನ ಮೊದಲ ಹಂತದ ಸೆನ್ಸಸ್ ಎಪ್ರಿಲ್-ಸೆಪ್ಟಂಬರ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಇದರಲ್ಲಿ ಮೇಘಾಲಯ, ಅಂಡಮಾನ್ ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಹೊಸದಿಲ್ಲಿಯ ಮುನ್ಸಿಪಲ್ ಕೌನ್ಸಿಲ್ಗಳಲ್ಲಿ ಸೆನ್ಸಸ್ ನಡೆಸಲು ತೀರ್ಮಾನಿಸಲಾಗಿತ್ತು. ಕೊರೋನ ಕಾರಣದಿಂದ ಪ್ರಕ್ರಿಯೆ ಮುಂದೂಡಲಾಗಿತ್ತು. ನವೆಂಬರ್ 17ಕ್ಕೆ ಲಭಿಸಿದ ಮಾಹಿತಿ ಹಕ್ಕು ಪ್ರಕಾರ ಎನ್ಪಿ ಆರ್ ಶೆಡ್ಯೂಲ್ ಇದುವರೆಗೆ ಅಂತಿಮಗೊಂಡಿಲ್ಲ ಎಂದು ಹೇಳಲಾಗಿದೆ.
ಕೇಂದ್ರ ಸರಕಾರದ ರಾಷ್ಟ್ರೀಯ ಪೌರತ್ವ ನೋಂದಣಿ, ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಂಗಪ್ರವೇಶಿಸಿದ್ದವು.
2003ರ ಪೌರತ್ವ ಕಾನೂನು ಪ್ರಕಾರ ಭಾರತದ ಪೌರರ ಪೌರತ್ವ ನೋಂದಣಿ ತಯಾರಿಸುವುದಕ್ಕಿರುವ ಮೊದಲ ಎನ್ಪಿಆರ್ ಆಗಿದೆ. ಎನ್ಪಿಆರ್ನಲ್ಲಿ ಹೆಚ್ಚು ವಿವರಗಳನ್ನು ಕೇಳುವುದರ ವಿರುದ್ಧ ಪಶ್ಚಿಮ ಬಂಗಾಳ, ರಾಜಸ್ಥಾನ ರಾಜ್ಯಗಳು ರಂಗಪ್ರವೇಶಿಸಿದ್ದವು. ತಂದೆ ತಾಯಿಯ ಜನನ ತಾರೀಕು, ಜನನ ಸ್ಥಳ, ಮಾತೃಭಾಷೆ ಕುರಿತು ಪ್ರಶ್ನೆಗಳಿಂದಾಗಿ ವಿವಾದ ಸೃಷ್ಟಿಯಾಗಿದೆ.
2019 ಡಿಸೆಂಬರ್ 11ಕ್ಕೆ ಪಾರ್ಲಿಮೆಂಟಿನಲ್ಲಿ ಸಿಎಎ ಕಾನೂನು ಪಾಸಾಗಿತ್ತು. ಧಾರ್ಮಿಕ ತಾರತಮ್ಯವನ್ನು ಕಾನೂನು ಬದ್ಧಗೊಳಿಸಲಾಗಿದೆ ಎಂದು ಸಿಎಎ ವಿರುದ್ಧ ಭಾರತದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.












