ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದೇಶದಲ್ಲಿರುವ ಬ್ರಿಟಿಷರ ಕಾಲದ ಇಂಡಿಯನ್ ಪಿನಲ್ ಕೋಡ್(ಐಪಿಸಿ), ಕೋಡ್ ಆಫ್ ಕ್ರಿಮಿನಲ್ ಪ್ರೊಸಿಡ್ಯೂರ್(ಸಿಆರ್ಪಿಸಿ)ಗಳನ್ನು ಬದಲಾಯಿಸಲು ಕೇಂದ್ರ ಸರಕಾರ ನಿರ್ಧರಿಸಿದೆಯೆಂದು ವರದಿಯಾಗಿದೆ. ಕೇಂದ್ರ ಗೃಹ ಸಹ ಸಚಿವ ಜಿ.ಕಿಶನ್ ರೆಡ್ಡಿ ಈ ವಿಷಯವನ್ನು ತಿಳಿಸಿದ್ದಾರೆ. ಐಪಿಸಿ ಮತ್ತು ಸಿಆರ್ಪಿಸಿ ಬದಲಾವಣೆಗೆ ಸಂಬಂಧಿಸಿ ಅಧ್ಯಯನಕ್ಕೆ ಒಂದು ಸಮಿತಿಯನ್ನು ಕೇಂದ್ರ ಸರಕಾರ ನೇಮಿಸಿದೆ. ಈ ವಿಷಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಚೀಫ್ ಜಸ್ಟಿಸ್, ಹಿರಿಯ ವಕೀಲರು, ಪೊಲೀಸ್ ಅಧಿಕಾರಿಗಳು, ಸರಕಾರೇತರ ಸಂಘಟನೆಗಳು, ರಾಜ್ಯ ಸರಕಾರಗಳಿಗೆ ಪತ್ರ ಬರೆಯಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಲಿಂಗ ತಾರತಮ್ಯವಿಲ್ಲ ಎಂದು ಖಚಿತಪಡಿಸಲು ಎಲ್ಲರೂ ನೇರ ದಿಕ್ಕಿನಲ್ಲಿ ವರ್ತಿಸಬೇಕಾಗಿದೆ. ಭಾರತ ಸರಕಾರಕ್ಕಾಗಿ ತಾವು ಹಲವು ಹೊಣೆಗಳನ್ನು ವಹಿಸಿದ್ದೀರಿ. ಬ್ರಿಟಿಷರ ಕಾಲದ ಐಪಿಸಿ, ಸಿಆರ್ಪಿಸಿಯನ್ನು ನಾವು ಬದಲಾಯಿಸುತ್ತೇವೆ. ಕಾಲಾಕಾಲಗಳಿಂದ ಸರಕಾರ ಈ ಎರಡು ವಿಭಾಗಗಳಲ್ಲಿ ತಿದ್ದುಪಡಿ ಮಾಡುತ್ತಿದೆ.
ದೇಶದ ಇಂದಿನ ಪರಿಸ್ಥಿತಿಯನ್ನು ಮುಂದಿಟ್ಟು ಐಪಿಸಿ. ಸಿಆರ್ಪಿಸಿ ಪೂರ್ಣವಾಗಿ ಬದಲಾಯಿಸಲು ಸರಕಾರ ತೀರ್ಮಾನಿಸಿದೆ. ಐಪಿಸಿ ಮತ್ತು ಸಿಆರ್ಪಿಸಿಯಲ್ಲಿ ಯಾವ ಬದಲಾವಣೆಗಳಾಗಬೇಕು ಎಂದು ಎಲ್ಲರೂ ಸೂಚನೆ ನೀಡಬೇಕೆಂದು ಕೇಂದ್ರ ಸಚಿವರು ಹೇಳಿದರು.
ಮಹಿಳಾ ಸುರಕ್ಷೆಯ ಕುರಿತ ಸಮ್ಮೇಳನದಲ್ಲಿ ಸಚಿವರು ಮಾತಾಡುತ್ತಿದ್ದರು. ಇಲ್ಲಿ ಅವರು ಐಪಿಸಿ ಸಿಆರ್ಪಿಸಿ ಪರಿಷ್ಕರಣೆಯ ಕುರಿತು ಕೇಂದ್ರ ಸರಕಾರ ನಿರ್ಧರಿಸಿರುವುದನ್ನು ತಿಳಿಸಿದ್ದಾರೆ.












