ಕಂಪ್ಯೂಟರ್‌‌ಗಳಿಗೆ ಲಗ್ಗೆಯಿಡುತ್ತಿದೆ ಹೊಸ ವೈರಸ್: ಮುನ್ನೆಚ್ಚರಿಕೆ ವಹಿಸಿ

0
516

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಂಪೆನಿಗಳ ಕಂಪ್ಯೂಟರ್ ನೆಟ್‌ವರ್ಕ್‌ನಲ್ಲಿ ನುಸುಳಿ ಮಾಹಿತಿ ಸೋರಿಕೆ ಮಾಡಿ ಅದನ್ನು ಮರಳಿಸಲು ಮತ್ತು ಬಹಿರಂಗಗೊಳಿಸದಿರಲು ಹಣ ಕೇಳುವ ಇಗ್ರಿಗೊರ್ ರಾನ್ಸಂವೇರ್ ವೈರಸ್ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಇಮೇಲ್ ಅಟಾಚ್ಮೆಂಟ್, ಸಾಮಾಜಿಕ ಮಾಧ್ಯಮ ಚ್ಯಾಟ್‍ಗಳ ಲಿಂಕ್‍ಗಳು ಕಳುಹಿಸಿ ವ್ಯಕ್ತಿಯ ಮತ್ತು ಸಂಸ್ಥೆಯ ನೆಟ್‍ವರ್ಕ್‌ಗೆ ವೈರಸ್‍ನನ್ನು ನುಸುಳುವಂತೆ ಮಾಡಬಹುದು ಸೈಬರ್ ದಾಳಿಯನ್ನು ಪ್ರತಿರೋಧಿಸಬೇಕೆಂದು ಇಂಡಿಯನ್ ಎಮರ್ಜೆನ್ಸಿ ರೆಸ್ಪೊನ್ಸ್ ಟೀಂ ಮುನ್ನೆಚ್ಚರಿಕೆ ನೀಡಿದೆ.

ಸೈಬರ್ ವಂಚನೆಯ ಮೂಲಕ ಸಿಕ್ಕಿದ ದಾಖಲೆಗಳನ್ನು ಮರಳಿ ಕೊಡಲು ಮತ್ತು ಬಹಿರಂಗಪಡಿಸದಿರಲು ಹಣ ಕೇಳುವ ಬೆದರಿಕೆ ಹಾಕಿದರೆ ಯಾರೂ ಹಣ ಕೊಡಬೇಡಿ ಎಂದು ಅದು ಸೂಚಿಸಿದೆ. ಸೈಬರ್ ದಾಳಿಗೆ ತುತ್ತಾದವರಿಂದ ನಿಗದಿತ ಸಮಯದಲ್ಲಿ ಹಣ ಕೇಳುವುದು ಕೊಡದಿದ್ದರೆ ವ್ಯಾಪಕವಾಗಿ ಬಹಿರಂಗಪಡಿಸವ ಬೆದರಿಕೆ ಹಾಕುವುದು ಈ ವೈರಸ್ ಮೂಲಕ ವಿಶ್ವಾದ್ಯಂತ ನಡೆಯುತ್ತಿದೆ. ವಿಶ್ವಾಸಾರ್ಹ ಇಮೇಲ್‍ಗಳನ್ನು ಮಾತ್ರ ತೆರೆಯಬೇಕು. ಸಂದೇಹ ಕಂಡರೆ ಅಟ್ಯಾಚ್‍ಮೆಂಟ್ ಲಿಂಕ್‍ಗಳನ್ನು ತೆರೆಯಬಾರದು. ಆ್ಯಂಟಿ ವೈರಸ್ ಸಾಫ್ಟ್‍ವೇರ್‌ಗಳನ್ನು ಬಳಸಬೇಕೆಂದು ಮುನ್ನೆಚ್ಚರಿಕೆ ವಹಿಸಬೇಕೆಂದು ಎಮರ್ಜೆನ್ಸಿ ರೆಸ್ಪಾಂಡ್ ಟೀಂ ತಿಳಿಸಿದೆ.